ವಿವೋ V30e ಸ್ಮಾರ್ಟ್‌ಫೋನ್ ಲಾಂಚ್‌ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
ವಿವೋ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಈ ನಡುವೆ ಬಹು ನಿರೀಕ್ಷಿತ ಫೋನ್ ಅನ್ನು ಅನಾವರಣ ಮಾಡಲು ವಿವೋ ಸಿದ್ಧತೆ ಮಾಡಿಕೊಂಡಿದೆ. ಭಾರತದಲ್ಲಿ ವಿವೋ T3X ಅನ್ನು ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಮಾಡಲಾಗಿದೆ.
ಹೌದು, ವಿವೋ ಇದೀಗ ಹೊಸ ವಿವೋ V30e ಸ್ಮಾರ್ಟ್‌ಫೋನ್ ಅನ್ನು ಮೇ 2 ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಈ ಸ್ಮಾರ್ಟ್‌ಫೋನ್ ವೈನ್ ಬಣ್ಣ, ಮ್ಯಾಟ್ ಫಿನಿಶ್, ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ 3D ಡಿಸ್‌ಪ್ಲೇ, 5,500 mAh ಸಾಮರ್ಥ್ಯದ ಬ್ಯಾಟರಿ, ಸೋನಿ IMX882 ಸೆನ್ಸರ್ ಅನ್ನು ಈ ಫೋನ್ ಹೊಂದಿರಲಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಇತರೆ ನಿರೀಕ್ಷಿತ ಫೀಚರ್ಸ್ ಏನು ಹಾಗೂ ಬೆಲೆ ಎಷ್ಟಿರಬಹುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ವಿವೋ V30e ಸ್ಮಾರ್ಟ್‌ಫೋನ್: ವಿವೋ ಏಪ್ರಿಲ್ 17 ರಂದು ಭಾರತದಲ್ಲಿ ವಿವೋ T3X ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲಾಗಿದೆ. ಅದರಂತೆ ಈಗ ಕೆಲವೇ ದಿನಗಳಲ್ಲಿ ಕಂಪನಿಯು ಭಾರತದಲ್ಲಿ ಹೊಸ ವಿವೋ V30e ಸ್ಮಾರ್ಟ್‌ಫೋನ್ ಅನ್ನು ಮೇ 2 ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ವಿವೋ V30e ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದ ವಿವೋ 29e ಗೆ ಉತ್ತರಾಧಿಕಾರಿಯಾಗಲಿದೆ. V30e ಭಾರತದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಇತ್ತೀಚೆಗೆ ಬಿಡುಗಡೆಯಾದ ವಿವೋ V-ಸರಣಿಗೆ ಸೇರುತ್ತದೆ.
ವಿವೋ ಶೇರ್ ಮಾಡಿಕೊಂಡಿರುವ ಟೀಸರ್‌ಗಳಲ್ಲಿ ವಿವೋ V30e ನ ಕೆಲವು ವಿನ್ಯಾಸ ವಿವರಗಳನ್ನು ಸಹ ಬಹಿರಂಗಪಡಿಸಲಾಗಿದೆ. ಟೀಸರ್‌ಗಳು ಸ್ಮಾರ್ಟ್‌ಫೋನ್ ಅನ್ನು ಅಸಾಮಾನ್ಯ ಡೀಪ್ ವೈನ್ ಬಣ್ಣದಲ್ಲಿ ತೋರಿಸಿವೆ. ರಿಯಲ್ ಪ್ಯಾನಲ್ ಬಲಭಾಗದಲ್ಲಿ ಹೊಳಪು ವಿನ್ಯಾಸದ ಪಟ್ಟಿಯೊಂದಿಗೆ ಹಿಂಭಾಗದಲ್ಲಿ ಮ್ಯಾಟ್ ಫಿನಿಶ್ ಆಯ್ಕೆ ಪಡೆದಿರಲಿದೆ ಎಂದು ತೋರುತ್ತದೆ.

ಇದರ ಜೊತೆಗೆ ವಿವೋ V30e ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಲಿದ್ದು, ಡ್ಯುಯಲ್-ಕ್ಯಾಮೆರಾ ರಚನೆ ಮತ್ತು ಅದರ ಸುತ್ತಲೂ ಹೊಳೆಯುವ ರಿಂಗ್ ಶೈಲಿಯನ್ನು ಕಾಣಬಹುದಾಗಿದೆ. ಇದರಲ್ಲಿ ಫ್ಲ್ಯಾಶ್ ಲೈಟ್ ಆಯ್ಕೆ ನೀಡಲಾಗಿದೆ. ಇನ್ನು ಪ್ರಕಾಶಮಾನವಾದ ಫ್ಲ್ಯಾಶ್ ಆಯ್ಕೆಯೇ ವಿವೋದ V ಸರಣಿ ಫೋನ್‌ಗಳಿಗೆ ಹೆಚ್ಚಿನ ಮಾನ್ಯತೆ ನೀಡುವಂತೆ ಮಾಡುತ್ತವೆ.
ಇನ್ನು ವಿವೋ V30e ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್, ವಿವೋದ ಅಧಿಕೃತ ಸೈಟ್ ಮೂಲಕ ಲಭ್ಯ ಇರಲಿದೆ. ಈ ಫೋನ್‌ನ ಇತ್ತೀಚಿನ ಲೀಕ್ ಮಾಹಿತಿ ಪ್ರಕಾರ, V30e ಕರ್ವ್ 3D ಡಿಸ್ಪ್ಲೇ ಮತ್ತು ಸ್ಲಿಮ್ ಪ್ರೊಫೈಲ್ ಅನ್ನು ಹೊಂದಿರಲಿದೆ ಎನ್ನಲಾಗಿದ್ದು, 5,500 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಸ್ಲಿಮ್ ಸ್ಮಾರ್ಟ್‌ಫೋನ್ ಆಗಿರಲಿದೆ ಎನ್ನಲಾಗಿದೆ. ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಸೋನಿ IMX882 ಸೆನ್ಸರ್ ಅನ್ನು ಈ ಫೋನ್ ಹೊಂದಬಹುದು ಎಂದು ಲೀಕ್ ಮಾಹಿತಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಹಿಂದಿನ ಊಹಾಪೋಹಗಳನ್ನು ಗಮನಿಸಿದ್ರೆ ಈ ವಿವೋ V30e ಅನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್‌ಸೆಟ್ ಮತ್ತು 8 GB RAM ನೊಂದಿಗೆ ಕಾಣಿಸಿಕೊಳ್ಳಬಹುದು ಎಂಬ ಮಾಹಿರಿ ಇದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್‌ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ. ಆದರೆ ಈ ವಿವೋ V30e ಗಾಗಿ ಬೆಲೆ ವಿವರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
ಇದರ ಪೂರ್ವವರ್ತಿಯಾದ V29e ಅನ್ನು ಭಾರತದಲ್ಲಿ ಎರಡು ವೇರಿಯಂಟ್‌ನಲ್ಲಿ ಅನಾವರಣ ಮಾಡಲಾಗಿದ್ದು, ಎರಡೂ ಸಹ 8 GB RAM ಅನ್ನು ಹೊಂದಿದ್ದು, 128GB ಮತ್ತು 256GB ಯ ಭಿನ್ನ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದೆ. ಈ ಫೋನ್ ಭಾರತದಲ್ಲಿ 26,999 ರೂ.ಗಳ ಆರಂಭಿಕ ಬೆಲೆ ಇದ್ದು, ಹೆಚ್ಚಿನ ಸ್ಟೋರೇಜ್ ಇರುವ ಫೋನ್ 28,999 ರೂ.ಗಳ ಬೆಲೆ ಹೊಂದಿದೆ.


Click it and Unblock the Notifications








