Vivo: ವಿವೋ V30e ಸ್ಮಾರ್ಟ್‌ಫೋನ್ ಲಾಂಚ್ ! 50MP ಕ್ಯಾಮೆರಾ.. 5500mAh ಬ್ಯಾಟರಿ
ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಭಾರತದಲ್ಲಿ ಬಹುದೊಡ್ಡ ಜನಪ್ರಿಯತೆ ಪಡೆದುಕೊಂಡಿದೆ. ಈ ನಡುವೆ ಬಹುನಿರೀಕ್ಷಿತ ವಿವೋ V30e ಸ್ಮಾರ್ಟ್‌ಫೋನ್ (Vivo V30e smartphone) ಅನ್ನು ಲಾಂಚ್ ಮಾಡಲಾಗಿದೆ. ಈ ಫೋನ್ 5500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಆಯ್ಕೆ ಪಡೆದಿದೆ.
ಹೌದು, ಭಾರತದಲ್ಲಿ ಇದೀಗ ವಿವೋ V30e ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದಿದ್ದು, ಫನ್‌ಟಚ್ ಓಎಸ್ 14 ಅನ್ನು ರನ್ ಮಾಡಲಿದೆ. ಇದರ ಜೊತೆಗೆ ಈ ಫೋನ್ IP64 ರೇಟಿಂಗ್ ಅನ್ನೂ ಸಹ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ V30e ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ + ಕರ್ವ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ರಿಫ್ರೆಶ್ ರೇಟ್, 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಈ ಮೂಲಕ ವೀಕ್ಷಣೆ ವಿಷಯದಲ್ಲಿ ಪ್ರೀಮಿಯಂ ಅನುಭವ ಪಡೆಯಬಹುದಾಗಿದೆ.
ವಿವೋ V30e ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಇನ್ನು ಈ ಫೋನ್ ಆಕ್ಟಾ ಕೋರ್ (4x A78 at 2.2GHz+4x A55 at 1.8GHz ಕ್ರಿಯೋ ಸಿಪಿಯು) ಸ್ನಾಪ್‌ಡ್ರಾಗನ್ 6 ಜನ್ 1 4nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 710 ಜಿಪಿಯು ಬಲ ಪಡೆದುಕೊಂಡಿದೆ. ಹಾಗೆಯೇ 8GB LPDDR4x RAM, 128GB / 256GB (UFS 2.2) ಸ್ಟೋರೇಜ್ ಆಯ್ಕೆ ಪಡೆದುಕೊಂಡಿದ್ದು, ಮೈಕ್ರೊ ಎಸ್‌ಡಿ ಸೌಲಭ್ಯವನ್ನೂ ಸಹ ನೀಡಲಾಗಿದೆ.

ವಿವೋ V30e ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ f/1.78 ದ್ಯುತಿರಂಧ್ರದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX882 ಸೆನ್ಸರ್, OIS, f/2.2 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದ್ದು, f/2.45 ದ್ಯುತಿರಂಧ್ರ, 82° FoV, 4K ವಿಡಿಯೋ ರೆಕಾರ್ಡಿಂಗ್‌ನೊಂದಿಗೆ 50 ಮೆಗಾಪಿಕ್ಸೆಲ್ ಐ ಎಎಫ್ ಫೀಚರ್ಸ್ ಇರುವ ಸೆಲ್ಫಿ ಕ್ಯಾಮೆರಾ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.
ವಿವೋ V30e ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಜೊತೆಗೆ ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ), ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಧೂಳು ಮತ್ತು ನೀರು ನಿರೋಧಕ (IP64), 5G, ಡ್ಯುಯಲ್ 4G VoLTE, ವೈ ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್/ ಗ್ಲೋನಾಸ್/ ಬೈಡು, ಯುಎಸ್‌ಬಿ ಟೈಪ್-ಸಿ 2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.
ವಿವೋ V30e ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಫೋನ್‌ನ 8GB + 128GB ವೇರಿಯಂಟ್‌ಗೆ 27,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 8GB + 256GB ವೇರಿಯಂಟ್‌ಗೆ 29,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಅನ್ನು ಈಗ ಆರ್ಡರ್ ಮಾಡಲು ಲಭ್ಯವಿದ್ದು, ಮೇ 9 ರಿಂದ ವಿವೋ ಇಂಡಿಯಾ ಇ-ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಎಲ್ಲಾ ಪಾಲುದಾರ ರಿಟೇಲರ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ.

ಈ ಫೋನ್‌ಗೆ ಆಫರ್ ಏನಿದೆ?: ಈ ನಡುವೆ ನೀವು ಈ ಫೋನ್ ಅನ್ನು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಐಸಿಐಸಿಐ, ಎಸ್‌ಬಿಐ, ಇಂಡಸ್‌ಇಂಡ್, ಐಡಿಎಫ್‌ಸಿ ಮತ್ತು ಇತರ ಬ್ಯಾಂಕ್‌ಗಳೊಂದಿಗೆ 10% ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಆಯ್ದ ಎನ್‌ಬಿಎಪ್‌ಸಿ ಪಾಲುದಾರರೊಂದಿಗೆ 12 ತಿಂಗಳ ಶೂನ್ಯ ಡೌನ್ ಪೇಮೆಂಟ್ ಆಯ್ಕೆ ಸಹ ಇದ್ದು, ಈ ಮೂಲಕ ಈ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.


Click it and Unblock the Notifications








