Home
ಸುದ್ದಿಜಾಲ

ವಿವೋ ಸಂಸ್ಥೆಯ ಈ ದೈತ್ಯ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

ಜನಪ್ರಿಯ ವಿವೋ ಮೊಬೈಲ್‌ ಸಂಸ್ಥೆಯ ಇತ್ತೀಚಿನ ಕೆಲವು ಫೋನ್‌ಗಳು ಡಿಮ್ಯಾಂಡ್‌ ಉಳಿಸಿಕೊಂಡಿವೆ. ಸಂಸ್ಥೆಯ ವಿವೋ V40 5G (vivo V40 5G) ಫೋನ್‌ ಕ್ಯಾಮೆರಾ ಹಾಗೂ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಆಕರ್ಷಕ ಎನಿಸಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಸದ್ಯ ಬೊಂಬಾಟ್‌ ಬೆಲೆ ಇಳಿಕೆ ದರದಲ್ಲಿ ಕಾಣಿಸಿಕೊಂಡಿದ್ದು, ಈ ಮೂಲಕ ಮತ್ತೆ ಗ್ರಾಹಕರ ಚಿತ್ತ ಸೆಳೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ( Flipkart ) ತಾಣದಲ್ಲಿ ಇದೀಗ ವಿವೋ V40 5G (vivo V40 5G) ಮೊಬೈಲ್‌ ಸ್ಮಾರ್ಟ್‌ಫೋನ್‌ ಶೇ. 13% ರಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ನ 8GB RAM + 256 GB ವೇರಿಯಂಟ್‌ 36,999ರೂ. ಗಳ ಆಫರ್‌ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಎಕ್ಸ್‌ಚೇಂಜ್ ರಿಯಾಯಿತಿ ಸಹ ಪಡೆದುಕೊಂಡರೆ, ಇನ್ನಷ್ಟು ಕಡಿಮೆ ಬೆಲೆಯಲ್ಲಿ ಫೋನ್‌ ಖರೀದಿಸಬಹುದು.

ವಿವೋ ಸಂಸ್ಥೆಯ ಈ ದೈತ್ಯ ಕ್ಯಾಮೆರಾ ಫೋನ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

ವಿವೋದ ಈ ಫೋನ್‌ 128 GB, 256 GB ಹಾಗೂ 512 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ನ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ 50 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಸೌಲಭ್ಯ ಸಹ ಹೊಂದಿದೆ. ಇನ್ನುಳಿದಂತೆ ವಿವೋ V40 5G ಮೊಬೈಲ್‌ ಇತರೆ ಫೀಚರ್ಸ್‌ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಿವೋ V40 5G ಡಿಸ್‌ಪ್ಲೇ

ವಿವೋ V40 5G ಫೋನ್ 6.78 ಇಂಚಿನ ಕರ್ವ್ಡ್‌ AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಇದು 1.5K ರೆಸಲ್ಯೂಶನ್, 120Hz ನ ರಿಫ್ರೆಶ್ ದರ, 480Hz ನ ಸ್ಪರ್ಶ ಮಾದರಿ ದರ ಮತ್ತು 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಇದರ ಡಿಸ್‌ಪ್ಲೇಯು HDR10+ ಅನ್ನು ಸಪೋರ್ಟ್ ಮಾಡುತ್ತದೆ.

ವಿವೋ V40 5G ಪ್ರೊಸೆಸರ್‌

ವಿವೋ V40 5G ಮೊಬೈಲ್ ಕ್ವಾಲ್ಕಮ್‌ ನ Snapdragon 7 Gen 3 ಚಿಪ್‌ಸೆಟ್‌ ಪ್ರೊಸೆಸರ್ ಪವರ್ ಹೊಂದಿದೆ. Adreno 720 GPU ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. ಈ ದೈತ್ಯ ಸ್ಮಾರ್ಟ್‌ಫೋನ್ 12GB RAM ಅನ್ನು ಪಡೆದಿದ್ದು, ಜೊತೆಗೆ ಆಂಡ್ರಾಯ್ಡ್ 14 ಆಧಾರಿತ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.

ವಿವೋ V40 5G ಕ್ಯಾಮೆರಾ

ವಿವೋ V40 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. 50ಎಂಪಿ ಮುಖ್ಯ ಕ್ಯಾಮೆರಾ ಹಾಗೂ 50ಎಂಪಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50ಎಂಪಿ ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.

ವಿವೋ V40 5G ಬ್ಯಾಟರಿ

ವಿವೋ V40 5G ಫೋನ್ 5500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 80W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಅನ್ನು ಸಪೋರ್ಟ್‌ ಮಾಡುತ್ತದೆ. ಇದು 190 ಗ್ರಾಂ ತೂಕ ಹೊಂದಿದ್ದು, IP68 ರೇಟಿಂಗ್ ಪಡೆದಿದೆ.

ವಿವೋ V40 5G ಇತರೆ ಸೌಲಭ್ಯ

ವಿವೋ V40 5G ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G ವೋಲ್ಟ್, 5G, Wi-Fi, GPS, ಬ್ಲೂಟೂತ್, USB ಟೈಪ್-ಸಿ ಪೋರ್ಟ್‌ ನಂತಹ ಸೌಲಭ್ಯಗಳನ್ನು ಪಡೆದುಕೊಂಡಿದೆ. ಈ ಹೊಸ ಫೋನ್ ಫೇಸ್ ಅನ್ಲಾಕ್‌ನೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಪಡೆದಿದೆ.

Best Mobiles in India

English summary
Vivo V40 5G Now Available at Incredible Discount on Flipkart Website. Check offer Price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+