Home
ಸುದ್ದಿಜಾಲ

ನಾಳೆ Vivo V40e ಫಸ್ಟ್ ಸೇಲ್: ಶೇ.20 ರಿಯಾಯಿತಿ.. ಕಡಿಮೆ ಬೆಲೆ!

ವಿವೋ ಕಂಪನಿಯ ಬಹುನಿರೀಕ್ಷಿತ ವಿವೋ V40e 5G (Vivo V40e 5G) ಮೊಬೈಲ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದನ್ನು V40 ಸರಣಿಯ ಅಡಿಯಲ್ಲಿ ಕ್ಲಾಸಿ ಲುಕ್‌ನೊಂದಿಗೆ ಪರಿಚಯಿಸಲಾಗಿದೆ. ಈ ಫೋನ್ 3D ಕರ್ವ್ಡ್ ಡಿಸ್ಪ್ಲೇ ಮತ್ತು 0.749 ಸೆಂ.ಮೀ ದಪ್ಪವನ್ನು ಹೊಂದಿದೆ. ಇದು 183 ಗ್ರಾಂ ತೂಕ ಹೊಂದಿದೆ. ಅಂದಹಾಗೆ, ಈ ಫೋನ್ ನಾಳೆ (ಅಕ್ಟೋಬರ್ 2) ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಶುರು ಮಾಡಲಿದೆ.

ವಿವೋ V40e 5G ಫೋನ್ ರಾಯಲ್ ಬ್ರೋಂಜ್ ಮತ್ತು ಮಿಂಟ್ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ಇದು ಓವಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಎಲ್‌ಇಡಿ ಫ್ಲ್ಯಾಷ್ ಹೊಂದಿದೆ. ಜೊತೆಗೆ, ಔರಾ ಲೈಟ್ ಎಲ್ಇಡಿ ಕೂಡ ಲಭ್ಯವಿದೆ. ಈ ಫೋನ್ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಶನ್ 7300 ಚಿಪ್‌ಸೆಟ್ ಹೊಂದಿದೆ. 16GB ಯ RAM, 5500mAh ಸಾಮರ್ಥ್ಯದ ಬ್ಯಾಟರಿ, 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

ನಾಳೆ Vivo V40e ಫಸ್ಟ್ ಸೇಲ್: ಶೇ.20 ರಿಯಾಯಿತಿ.. ಕಡಿಮೆ ಬೆಲೆ!

ವಿವೋ V40e 5G ಬೆಲೆ ಮತ್ತು ಆಫರ್‌ಗಳು

8GB RAM + 128GB = 28,999 ರೂ.
8GB RAM + 256GB = 30,999 ರೂ.

ವಿವೋ V40e 5G ಮೊಬೈಲ್‌ ಅನ್ನು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವು 28,999 ರೂ.ಗೆ ಮಾರಾಟವಾಗಲಿದೆ. 8GB RAM + 256GB ಸ್ಟೋರೇಜ್ ರೂಪಾಂತರವು 30,999 ರೂ.ಗೆ ಲಭ್ಯವಿರಲಿದೆ. ಬಿಡುಗಡೆ ಭಾಗವಾಗಿ ಕಂಪನಿಯು ಕೆಲವು ಆಫರ್‌ಗಳನ್ನು ನೀಡುತ್ತಿದೆ.

ನೀವು, ಬ್ಯಾಂಕ್ ಆಫರ್‌ ಅಡಿಯಲ್ಲಿ ಹೆಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಕಾರ್ಡ್‌ಗಳಲ್ಲಿ ಶೇ.10 ರಷ್ಟು ರಿಯಾಯಿತಿ ಅಥವಾ ಶೇ.10 ರಷ್ಟು ಎಕ್ಸ್‌ಚೇಂಜ್‌ ಆಫರ್‌ ಪಡೆಯಬಹುದು. ಜೊತೆಗೆ, 6 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯ ಪ್ರಯೋಜನ ಪಡೆಯಬಹುದು. ಈ ಫೋನ್, ನಾಳೆಯಿಂದ (ಅಕ್ಟೋಬರ್ 2) ಫ್ಲಿಪ್‌ಕಾರ್ಟ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಇತರೆ ರಿಟೇಲ್ ಔಟ್‌ಲೆಟ್‌ಗಳಲ್ಲಿ ಖರೀದಿಗೆ ಲಭ್ಯವಾಗುತ್ತದೆ.

ವಿವೋ V40e 5G ವೈಶಿಷ್ಟ್ಯಗಳು

ವಿವೋ V40e 5G ಫೋನ್ 6.77 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 2392 x 1080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲವನ್ನು ಹೊಂದಿದೆ. ವಿವೋ V40e 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಶನ್ 7300 ಚಿಪ್‌ಸೆಟ್‌ ಹೊಂದಿದೆ. ಇದು ನಾಲ್ಕು ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ಮಾಡಿದ ಪ್ರೊಸೆಸರ್ ಆಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್ ಟಚ್ ಓಎಸ್ 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ವಿವೋ V40e 5G ಮೊಬೈಲ್ 8GB RAM + 128GB ಮತ್ತು 8GB RAM + 256GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ. 8GB ವಿಸ್ತೃತ RAMಗೆ ಸಹ ಬೆಂಬಲವಿದೆ. ಇದರ ಸಹಾಯದಿಂದ 16GB ವರೆಗಿನ ಒಟ್ಟು ಶಕ್ತಿಯನ್ನು ಬಳಸಬಹುದು. ಈ ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಬೆಂಬಲ ಒದಗಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: Tecno: ಈ 5G ಫೋನ್ ಬೆಲೆ 14,000 ಇಳಿಕೆ; 512GB ಸ್ಟೋರೇಜ್, 108MP ಕ್ಯಾಮೆರಾ.. ಯಾವುದು?

50MP ಸೋನಿ ಕ್ಯಾಮೆರಾ, 50MP ಸೆಲ್ಫಿ ಶೂಟರ್‌

ವಿವೋ V40e 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಇದು ಎಲ್‌ಇಡಿ ಮತ್ತು ಔರಾ ಲೈಟ್‌ನೊಂದಿಗೆ ಬರುತ್ತದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದೆ. 4K ವಿಡಿಯೋ ಸೆರೆಹಿಡಿಯಲು ಎಐ ಪೋರ್ಟ್ರೇಟ್ ಸೂಟ್, ಎಐ ಎರೇಸರ್ ಮತ್ತು ಎಐ ಫೋಟೋ ವರ್ಧಕ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್‌ ಇದೆ.

ವಿವೋ V40e 5G ಮೊಬೈಲ್ ನೀರು ಮತ್ತು ಧೂಳಿನ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸಿಮ್, 5G, 4G, ವೈ-ಫೈ, ಬ್ಲೂಟೂತ್ 5.4 ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.

Best Mobiles in India

English summary
Vivo V40e 5G goes on sale in India Tomorrow via Flipkart : Offer Price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+