Home
ಸುದ್ದಿಜಾಲ

ಆತುರ ಬೇಡ! ಬರಲಿದೆ ಹೊಸ Vivo 5G ಫೋನ್; ಬೆಲೆ ಮತ್ತು ಫೀಚರ್ಸ್ ಸೋರಿಕೆ

ಬಹುನಿರೀಕ್ಷಿತ ವಿವೋ V50e (Vivo V50e) ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ಈ ವಿವೋ ಫೋನನ್ನು 30,000 ಕ್ಕಿಂತ ಕಡಿಮೆ ಬೆಲೆಗೆ ಪರಿಚಯಿಸಲಿದೆ. ಹೌದು, ವಿವೋ V50e ಮೊಬೈಲ್ Vivo V40e ಅಪ್‌ಗ್ರೇಡ್ ಆಗಿದೆ. ಕಂಪನಿಯು ಇದರ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಈ ಫೋನ್ ವಿವಿಧ ಪ್ರಮಾಣೀಕರಣ ವೇದಿಕೆಗಳಲ್ಲಿ ಕಂಡುಬಂದಿದೆ. ಈ ಮೂಲಕ ಪ್ರಮುಖ ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ. ಪ್ರಸ್ತುತ, ವಿವೋ V50e ಫೋನಿನ ಬಿಡುಗಡೆ ದಿನಾಂಕ, ವಿಶೇಷತೆಗಳು ಮತ್ತು ಬೆಲೆ ಶ್ರೇಣಿಯ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವರದಿಯ ಪ್ರಕಾರ, ಏಪ್ರಿಲ್ ಮೊದಲ ವಾರದಲ್ಲಿ ವಿವೋ V50e ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತತ್ತಿದೆ. ಆದರೆ, ಕಂಪನಿಯು ನಿಖರವಾದ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಈ ಫೋನ್ ಈಗಾಗಲೇ BIS ಪ್ರಮಾಣೀಕರಣವನ್ನು ಪಡೆದಿದೆ. ವರದಿಯ ಪ್ರಕಾರ, ಈ ಫೋನ್ ಎರಡು ಬಣ್ಣಗಳಲ್ಲಿ ಬರುತ್ತದೆ. ನೀವು ಸಫೈರ್ ಬ್ಲೂ ಮತ್ತು ಪರ್ಲ್ ವೈಟ್‌ ಬಣ್ಣದಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ವಿವೋ V40e ಫೋನಿನಂತೆಯೇ ಇರುವ ಸಾಧ್ಯತೆಯಿದೆ.

ಆತುರ ಬೇಡ! ಬರಲಿದೆ ಹೊಸ Vivo 5G ಫೋನ್; ಬೆಲೆ ಮತ್ತು ಫೀಚರ್ಸ್ ಸೋರಿಕೆ

ವಿವೋ V50e ಬೆಲೆ (ನಿರೀಕ್ಷಿತ)

ವಿವೋ V50e ಫೋನಿನ ಬೆಲೆ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಇದು 25,000 ರಿಂದ 30,000 ರೂ. ಬಜೆಟ್‌ನಲ್ಲಿ ಬರುತ್ತದೆ. ಗಮನಿಸಬೇಕಾದ ವಿಷಯವೆಂದರೆ, Vivo V40e ಫೋನಿನ ಮೂಲ ಮಾದರಿಯನ್ನು 28,999 ರೂ.ಗೆ ಬಿಡುಗಡೆ ಮಾಡಲಾಗಿದೆ.

ವಿವೋ V50e ವೈಶಿಷ್ಟ್ಯಗಳು (ಸೋರಿಕೆ)

ಡಿಸ್ಪ್ಲೇ ವಿವರ

ವಿವೋ V50e ಮೊಬೈಲ್ 6.77 ಇಂಚಿನ 1.5K ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇ ಗಾತ್ರವು Vivo V40e ಫೋನಿನಂತೆಯೇ ಇರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ವಿವೋ V50e ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಇದು ವಿವೋ V40e ಮೊಬೈಲ್‌ನಂತೆಯೇ ಇರುತ್ತದೆ. ಇದು ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ ಓಎಸ್ 15 ಕಸ್ಟಮ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 8GB RAM ಮತ್ತು 256GB ಆಂತರಿಕ ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿರುತ್ತದೆ.

ಆತುರ ಬೇಡ! ಬರಲಿದೆ ಹೊಸ Vivo 5G ಫೋನ್; ಬೆಲೆ ಮತ್ತು ಫೀಚರ್ಸ್ ಸೋರಿಕೆ

ಕ್ಯಾಮೆರಾ ಸೆಟಪ್

ವಿವೋ V50e ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಸೋನಿ IMX882 ಪ್ರಾಥಮಿಕ ಕ್ಯಾಮೆರಾ ಹೊಂದಿರುತ್ತದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಲಭ್ಯವಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾ ಸೆಟಪ್ ಕೂಡ Vivo V40e ಫೋನಿನಂತೆಯೇ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ V50e ಮೊಬೈಲ್ 5,600mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದನ್ನು ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಇದು Vivo V40e ಫೋನಿನನ 5,500mAh ಬ್ಯಾಟರಿ ಮತ್ತು 80W ಚಾರ್ಜಿಂಗ್ ಗಿಂತ ಸ್ವಲ್ಪ ಅಪ್‌ಗ್ರೇಡ್ ಆಗಲಿದೆ.

ಇತರ ವೈಶಿಷ್ಟ್ಯಗಳು

ವಿವೋ V50e ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿರುತ್ತದೆ. ಈ ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 / IP69 ರೇಟಿಂಗ್ ಹೊಂದಿರುವ ಸಾಧ್ಯತೆಯಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G LTE, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್, ಜಿಪಿಎಸ್‌ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

Best Mobiles in India

English summary
Vivo V50e india launch timeline, price range and specifications leaked: What to Expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+