Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಜ್ಜಾಗಿದೆ ವಿವೋ ವಾಚ್‌ 3; ಅಚ್ಚರಿಯ ಫೀಚರ್ಸ್‌!

ಜನಪ್ರಿಯ ವಿವೋ (Vivo) ಬ್ರ್ಯಾಂಡ್‌ ಈಗಾಗಲೇ ಭಿನ್ನ ಶ್ರೇಣಿಯ ಮೊಬೈಲ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿದೆ. ಹಾಗೆಯೇ ವಿವೋ ಸ್ಮಾರ್ಟ್‌ವಾಚ್‌ ಡಿವೈಸ್‌ ನಲ್ಲಿ ಅಬ್ಬರಿಸಲು ಸಜ್ಜಾಗಿದೆ. ವಿವೋ ಸಂಸ್ಥೆಯು ವಿವೋ ವಾಚ್‌ 3 (Vivo Watch 3) ಡಿವೈಸ್‌ ಅನ್ನು ಗ್ಲೋಬಲ್‌ ವೇರಿಯಂಟ್‌ ಅನ್ನು ತೈವಾನ್‌ನ NCC ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಗುರುತಿಸಿರುವುದರಿಂದ ಬಿಡುಗಡೆಗೆ ಸಿದ್ಧವಾಗುತ್ತಿರುವಂತೆ ತೋರುತ್ತಿದೆ ಎಂದು ವರದಿ ಆಗಿದೆ.

ಹೌದು, ವಿವೋ ಸಂಸ್ಥೆಯು ಹೊಸದಾಗಿ ವಿವೋ ವಾಚ್‌ 3 (Vivo Watch 3) ಡಿವೈಸ್‌ ಅನ್ನು ಗ್ಲೋಬಲ್‌ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸೂಚನೆ ಇದೆ. ಸಿಂಗಾಪುರದ ಪ್ರಮಾಣೀಕರಣ ಸೈಟ್‌ನಲ್ಲಿ ಕಾಣಿಸಿಕೊಂಡಂತೆ, SDPPI ಒಂದೆರಡು ವಾರಗಳ ಹಿಂದೆ, NCC ಪಟ್ಟಿಯು ವಾಚ್‌ನ ಪ್ರಮುಖ ಆಯ್ಕೆಗಳ ಅನ್ನು ತೋರಿಸುತ್ತದೆ. ನೂತನವಾಗಿ ಬಹಿರಂಗಪಡಿಸಿದ ವಿವರಗಳು ಸ್ಮಾರ್ಟ್‌ ವಾಚ್‌ನ ಚೀನೀ ವೇರಿಯಂಟ್‌ನ ವಿಶೇಷಣಗಳಿಗೆ ಹೊಂದಿಕೆಯಾಗುವಂತೆ ಇದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಜ್ಜಾಗಿದೆ ವಿವೋ ವಾಚ್‌ 3; ಅಚ್ಚರಿಯ ಫೀಚರ್ಸ್‌!

ಬರಲಿರುವ ವಿವೋ ವಾಚ್‌ 3 (Vivo Watch 3) ಕಳೆದ ನವೆಂಬರ್‌ ತಿಂಗಳಿನಲ್ಲಿ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿತ್ತು. ಅಂದಹಾಗೆ ಈ ವಾಚ್ ಈಗಾಗಲೇ ಚೀನಾದಲ್ಲಿ ಖರಿದಿಗೆ ಲಭ್ಯವಿದ್ದು, ಇದರ ಬೆಲೆ ಚೀನಾದಲ್ಲಿ CNY 1099 (ಭಾರತದಲ್ಲಿ ಅಂದಾಜು 12,601.74ರೂ) ಎನ್ನಲಾಗಿದೆ. ಹಾಗಾದರೇ ವಿವೋ ವಾಚ್‌ 3 ವಾಚ್‌ನ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ ವಾಚ್ 3 ಫೀಚರ್ಸ್‌

ವಿವೋ ವಾಚ್ 3 ಡಿವೈಸ್‌ 1.43 ಇಂಚಿನ ವೃತ್ತಾಕಾರದ ಡಿಸ್‌ಪ್ಲೇ ಅನ್ನು ಪಡೆದಿದ್ದು, ಡಿಸ್‌ಪ್ಲೇ ಮೇಲ್ಭಾಗದಲ್ಲಿ 3D ಕರ್ವ್ಡ್‌ ಗ್ಲಾಸ್‌ ಅನ್ನು ಹೊಂದಿದೆ. ಅಲ್ಲದೇ ಇದು 466 x 466 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ವಾಚ್‌ AOD ಮೋಡ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ 5 ಮೀಟರ್ ವರೆಗೆ ನೀರು ನಿರೋಧಕ ವ್ಯವಸ್ಥೆಯನ್ನು ಹೊಂದಿದೆ.

ಹಾಗೆಯೇ ಇದು ಇಂಟರ್‌ಫೇಸ್, ಫಂಕ್ಷನ್‌ಗಳನ್ನು ನ್ಯಾವಿಗೇಟ್ ಮಾಡಲು ಡಿವೈಸ್‌ನ ಬಲಭಾಗದಲ್ಲಿ ಮೇಲ್ಭಾಗದಲ್ಲಿ ಸ್ಟೇನ್ಲೆಸ್ ಸ್ಟೀಲ್ ತಿರುಗುವ ಕೀ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಕೆಳಭಾಗದಲ್ಲಿ ಫಿಸಿಕಲ್‌ ಬಟನ್ ಪಡೆದಿದೆ. ಇದರ ಜೊತೆಗೆ ಸ್ಮಾರ್ಟ್‌ವಾಚ್‌ ಹೆಲ್ತ್‌ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ. ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌ ಪಡೆದಿದೆ.

ನೂತನ ವಿವೋ ವಾಚ್‌ 3 ಸ್ಮಾರ್ಟ್‌ವಾಚ್‌ ಪ್ಯಾಕ್ ಕಸ್ಟಮೈಸ್ ಮಾಡಿದ 100 ಕ್ಕೂ ಹೆಚ್ಚು ವರ್ಕ್‌ಔಟ್ ಮೋಡ್‌ಗಳಿಗೆ ಬೆಂಬಲವನ್ನು ನೀಡುತ್ತದೆ. ಇದರೊಂದಿಗೆ ರಸ್ಟ್ ಪ್ರೋಗ್ರಾಮಿಂಗ್ ಭಾಷೆಯ ಆಧಾರದ ಮೇಲೆ ಬ್ಲೂಓಎಸ್ ಆಪರೇಟಿಂಗ್ ಸಿಸ್ಟಂನಲ್ಲಿ ಎನ್‌ಎಫ್‌ಸಿ ಕಾರ್ ಕೀಗಳು, ಕ್ಯಾಮೆರಾ ನಿಯಂತ್ರಣದಂತಹ ಫೀಚರ್ಸ್‌ಗಳೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್ ವಾಚ್ ಕಾರ್ಡ್‌ಗಳನ್ನು ಸಹ ಸ್ಟೋರೇಜ್‌ ಮಾಡುವುದಕ್ಕೆ ಅವಕಾಶವನ್ನು ಸಹ ಪಡೆದಿದೆ.

ಇನ್ನು ಬಳಕೆದಾರರು ತಮ್ಮ ಮಣಿಕಟ್ಟನ್ನು ಎತ್ತುವ ಮೂಲಕ ಅದನ್ನು ಸ್ವೈಪ್ ಮಾಡಬಹುದು. ಪಾವತಿಯನ್ನು ಸ್ವೀಕರಿಸಲು ಇದು QR ಕೋಡ್ ಅನ್ನು ಸಹ ಕಾಣಿಸಲಿದೆ. ಇನ್ನು ಸ್ಮಾರ್ಟ್ ವಾಚ್ ಹ್ಯಾಂಡ್ಸ್-ಫ್ರೀ ಧ್ವನಿ ಕರೆಗಾಗಿ eSIM ಸಪೋರ್ಟ್‌ ಇದೆ. ಹಾಗೆಯೇ ಈ ವಾಚ್‌ 3 ಮ್ಯೂಸಿಕ್‌ ಸಂಗ್ರಹಣೆಗಾಗಿ 64MB RAM ಮತ್ತು 4GB ಲೋಕಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇದು TWS ಇಯರ್‌ಬಡ್‌ಗಳಿಗೆ ಸಹ ಕನೆಕ್ಟ್‌ ಮಾಡುವ ಅವಕಾಶವನ್ನು ಸಹ ಪಡೆದುಕೊಂಡಿದೆ.

Best Mobiles in India

English summary
Vivo Watch 3 launch soon globally: Spotted on a NCC certification website. check out specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+