Home
ಸುದ್ದಿಜಾಲ

Vivo: ವಿವೋ ವಾಚ್ ಜಿಟಿ ಸ್ಮಾರ್ಟ್‌ವಾಚ್‌ ಲಾಂಚ್‌! ಅಮೋಲೆಡ್‌ ಸ್ಕ್ರೀನ್, eSIM ಬೆಂಬಲ..

ಇತ್ತೀಚೆಗಂತೂ ಹಲವಾರು ಸ್ಮಾರ್ಟ್‌ಫೋನ್‌ ತಯಾರಿಕಾ ಬ್ರ್ಯಾಂಡ್‌ಗಳು ಸ್ಮಾರ್ಟ್‌ಪೋನ್‌ ಜೊತೆಗೆ ಸ್ಮಾರ್ಟ್‌ವಾಚ್‌ಗಳನ್ನೂ ಸಹ ಲಾಂಚ್‌ ಮಾಡಿಕೊಂಡು ಬರುತ್ತಿವೆ. ಈ ನಡುವೆ ಬಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿರುವ ಕಂಪೆನಿ ವಿವೋ ವಾಚ್ ಜಿಟಿ ಸ್ಮಾರ್ಟ್‌ವಾಚ್‌ (Vivo Watch GT Smartwatch) ಲಾಂಚ್‌ ಆಗಿದೆ. ಈ ಸ್ಮಾರ್ಟ್‌ವಾಚ್‌ eSIM ಬೆಂಬಲದೊಂದಿಗೆ ಬರುತ್ತಿದ್ದು, ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಸ್ಮಾರ್ಟ್‌ವಾಚ್‌ ಬಳಕೆದಾರರು ಇದನ್ನು ಸ್ಮಾರ್ಟ್‌ವಾಚ್‌ ನಂತೆಯೇ ಬಳಕೆ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಈ ವಾಚ್‌ ಆಕರ್ಷಕ ಹಾಗೂ ಭಿನ್ನ ಫೀಚರ್ಸ್‌ ಅನ್ನು ಪಡೆದುಕೊಂಡಿದೆ.

ಹೌದು, ವಿವೋ S19 ಸರಣಿಯ (Vivo S19 series) ಸ್ಮಾರ್ಟ್‌ಫೋನ್‌ ಜೊತೆಗೆ ವಿವೋ ವಾಚ್‌ ಜಿಟಿ ಯನ್ನೂ ಸಹ ಘೋ‍ಷಣೆ ಮಾಡಲಾಗಿದೆ. ಇದು ಅಲ್ಯೂಮಿನಿಯಂ ಮಿಶ್ರಲೋಹದ ಕವಚದೊಂದಿಗೆ ಕಂಪನಿಯ ಇತ್ತೀಚಿನ ಸ್ಮಾರ್ಟ್‌ವಾಚ್ ಆಗಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ ಚದರ ಡಯಲ್ ವಿನ್ಯಾಸವನ್ನು ಹೊಂದಿದ್ದು, ಸಿಲಿಕೋನ್ ಮತ್ತು ಲೆದರ್ ಸ್ಟ್ರಾಪ್ ಆಯ್ಕೆಗಳನ್ನು ನೀಡುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್‌ ಬ್ಲೂ ಓಎಸ್‌ನಲ್ಲಿ ರನ್ ಆಗಲಿದ್ದು, ವೃತ್ತಿಪರ ತರಬೇತುದಾರರು ಮತ್ತು ಕೋರ್ಸ್‌ಗಳ ಜೊತೆಗೆ 100 ಕ್ರೀಡಾ ವಿಧಾನಗಳನ್ನು ಬೆಂಬಲಿಸುತ್ತದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರ ಇಲ್ಲಿದೆ ನೋಡಿ.

ವಿವೋ ವಾಚ್ ಜಿಟಿ ಸ್ಮಾರ್ಟ್‌ವಾಚ್‌ ಲಾಂಚ್‌! ಅಮೋಲೆಡ್‌ ಸ್ಕ್ರೀನ್, eSIM ಬೆಂಬಲ..

ವಿವೋ ವಾಚ್ ಜಿಟಿ ಸ್ಮಾರ್ಟ್‌ವಾಚ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ವಾಚ್‌ 1.85 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 390×450 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಅಲ್ಲದೆ ಇದು 2.5D ಕರ್ವ್‌ ಡಿಸ್‌ಪ್ಲೇ ಆಗಿದ್ದು, ಸ್ಮಾರ್ಟ್‌ಫೋನ್‌ನಂತೆಯೇ ನಿಮಗೆ ಅನುಭವ ನೀಡಲಿದೆ. ಇದರಿಂದಾಗಿ ಇದನ್ನು ನಿಮ್ಮ ಚಿಕ್ಕ ಫೋನ್‌ ಎಂದರೆ ತಪ್ಪಾಗಲಾರದು.

ವಿವೋ ವಾಚ್ ಜಿಟಿ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಮಾಹಿತಿ:ಈ ಸ್ಮಾರ್ಟ್‌ವಾಚ್ ಸರಾಸರಿ ಹೃದಯ ಬಡಿತದ ನಿಖರತೆಯನ್ನು 94.58% ಹೊಂದಿದೆ ಎಂದು ಹೇಳಲಾಗುತ್ತದೆ. ಇದು ವಿವೋದದ ಸ್ವಯಂ-ಅಭಿವೃದ್ಧಿಪಡಿಸಿದ ಡೀಪ್‌ ಲರ್ನಿಂಗ್‌ ಕಲಿಕೆಯ ರಕ್ತದ ಆಮ್ಲಜನಕದ ಮಲ್ಟಿ-ಚಾನಲ್ ಫ್ಯೂಷನ್ ವಿಶ್ಲೇಷಣೆ ತಂತ್ರಜ್ಞಾನ. ವೇಗವರ್ಧಕ ಸೆನ್ಸರ್‌, ಗೈರೊಸ್ಕೋಪ್, ಭೂಕಾಂತೀಯ ಸೆನ್ಸರ್‌, ಸುತ್ತುವರಿದ ಬೆಳಕಿನ ಸೆನ್ಸರ್‌ ಸೇರಿದಂತೆ ವಿವಿಧ ಸೆನ್ಸರ್‌ಗಳನ್ನು ಈ ವಾಚ್‌ನಲ್ಲಿ ಕಾಣಬಹುದಾಗಿದೆ.

ವಿವೋ ವಾಚ್ ಜಿಟಿ ಸ್ಮಾರ್ಟ್‌ವಾಚ್‌ ಲಾಂಚ್‌! ಅಮೋಲೆಡ್‌ ಸ್ಕ್ರೀನ್, eSIM ಬೆಂಬಲ..

ಹಾಗೆಯೇ 100+ ಸ್ಪೋರ್ಟ್ಸ್‌ ಮೋಡ್‌ಗಳು, ವೃತ್ತಿಪರ ತರಬೇತುದಾರ ಮತ್ತು ಕೋರ್ಸ್‌ಗಳು, ಇಡೀ ದಿನದ ಹೃದಯ ಬಡಿತ ಮಾನಿಟರಿಂಗ್, ನಿರಂತರ ರಕ್ತದ ಆಮ್ಲಜನಕದ ಶುದ್ಧತ್ವ ಪತ್ತೆ, ನಿದ್ರೆಯ ಮೇಲ್ವಿಚಾರಣೆ, ಒತ್ತಡದ ಮೇಲ್ವಿಚಾರಣೆ, ಉಸಿರಾಟದ ತರಬೇತಿ, ಋತುಚಕ್ರದ ರೆಕಾರ್ಡಿಂಗ್, ಶಬ್ದ ಪತ್ತೆ ಸೆರಿದಂತೆ ಸಾಕಷ್ಟು ಫೀಚರ್ಸ್‌ ಅನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಕಾಣಬಹುದಾಗಿದೆ.

ಇದಲ್ಲದೆ, ಇದು ಹಗುರವಾದ ವಿನ್ಯಾಸವನ್ನು ಹೊಂದಿದ್ದು, ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯ, ವಾಚ್ ಫೇಸ್ ವರ್ಕ್‌ಶಾಪ್‌ನಂತಹ ಎಐ ಫೀಚರ್ಸ್‌, ನ್ಯಾವಿಗೇಷನ್‌ಗಾಗಿ ಕ್ರೌನ್‌ ಬಟನ್‌ ಆಯ್ಕೆ, ಪಡೆದಿದ್ದು, ಎಲ್ಲಕ್ಕಿಂತ ಮಿಗಿಲಾಗಿ eSIM ಸೌಲಭ್ಯ ಸಹ ಇದೆ. ಇದರಿಂದ ಕರೆಗಳಲ್ಲಿ ಸಕ್ರಿಯರಾಗಬಹುದಾಗಿದೆ. ಉಳಿದಂತೆ ಈ ವಾಚ್‌ ಎಲ್‌ಟಿಇ, ಬ್ಲೂಟೂತ್ ಆವೃತ್ತಿ 5.3 ಎಲ್‌ಇ, ಜಿಪಿಎಸ್‌+ಗ್ಲೋನಾಸ್‌+ಗೆಲಿಲಿಯೋ+ಬೈಡು ಅಷ್ಟೇ ಅಲ್ಲದೆ ಎನ್‌ಎಫ್‌ಸಿ ಪಾವತಿ ಸೌಲಭ್ಯಗಳನ್ನೂ ಸಹ ಇದರಲ್ಲಿ ಪಡೆಯಬಹುದಾಗಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ಅನ್ನು eSIM ಸೌಲಭ್ಯ ಸಕ್ರಿಯಗೊಳಿಸಿ ಬಳಕೆ ಮಾಡಲು ಮುಂದಾದರೆ 9 ದಿನಗಳ ಬ್ಯಾಟರಿ ಬ್ಯಾಕಪ್‌ ಅನ್ನು ಪಡೆಯಬಹುದಾಗಿದ್ದು, ಕೇವಲ ಬ್ಲೂಟೂತ್‌ ಸಕ್ರಿಯಗೊಳಿಸಿ ಈ ವಾಚ್‌ ಬಳಕೆ ಮಾಡಲು ಮುಂದಾದರೆ 21 ದಿನಗಳ ಬ್ಯಾಟರಿ ಬ್ಯಾಕಪ್‌ ಅನ್ನು ಪಡೆಯಬಹುದಾಗಿದೆ. ಇನ್ನು ಈ ವಾಚ್‌ 45.8 x 39.6 x 11.2 ಮಿಮೀ ಹಾಗೂ 33g ತೂಕ ಪಡೆದುಕೊಂಡಿದೆ.

ವಿವೋ ವಾಚ್ ಜಿಟಿ ಸ್ಮಾರ್ಟ್‌ವಾಚ್‌ ಲಾಂಚ್‌! ಅಮೋಲೆಡ್‌ ಸ್ಕ್ರೀನ್, eSIM ಬೆಂಬಲ..

ವಿವೋ ವಾಚ್ ಜಿಟಿ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ನ‌ eSIM + ಲೆದರ್ ಸ್ಟ್ರಾಪ್ ವೇರಿಯಂಟ್‌ಗೆ CNY 899 (USD 123 /10,330 ರೂ.ಗಳು.) ಬೆಲೆ ಇದೆ ಆದರೆ eSIM + ರಬ್ಬರ್ ಸ್ಟ್ರಾಪ್ ವೇರಿಯಂಟ್‌ಗೆ CNY 799 (USD 110 / 9,180 ರೂ.ಗಳು) . ಸದ್ಯಕ್ಕೆ ಈ ವಾಚ್‌ ಚೀನಾದಲ್ಲಿ ಆರ್ಡರ್‌ಗೆ ಲಭ್ಯವಿದೆ ಮತ್ತು ಜೂನ್ 14 ರಿಂದ ಸೇಲ್ ಆಗಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ , ಬಿಳಿ, ಗುಲಾಬಿ ಮತ್ತು ನೀಲಿ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.

Best Mobiles in India

English summary
Along with the Vivo S19 series smartphone, the Vivo Watch GT has also been announced. It is the company's latest smartwatch with an aluminum alloy casing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+