Vivo: ಭಾರತದಲ್ಲಿ ಶೀಘ್ರವೇ ವಿವೋ X ಫೋಲ್ಡ್ 3! ಅತ್ಯಂತ ಹಗುರವಾದ ಫೋನ್
ಸ್ಮಾರ್ಟ್‌ಫೋನ್ (Smartphone) ವಿಭಾಗದಲ್ಲಿ ವಿವೋ (Vivo) ಕಂಪೆನಿಯು ಸಾಕಷ್ಟು ವಿಶೇಷ ಶೈಲಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಫೋನ್‌ಗಳು ಭಾರತವೂ ಸೇರಿದಂತೆ ಜಾಗತಿಕವಾಗಿ ಸಾಕಷ್ಟು ಬೇಡಿಕೆ ಪಡೆದಿದ್ದು, ಈ ನಡುವೆ ವಿವೋ ಅತ್ಯಂತ ಹಗುರವಾದ ಫೋಲ್ಡಬಲ್ ಫೋನ್ (foldable phone) ಅನ್ನು ಭಾರತದಲ್ಲಿ ಶೀಘ್ರವೇ ಲಾಂಚ್ ಮಾಡಲಿದೆ.
ಹೌದು, ಫೋಲ್ಡಬಲ್ ವಿಭಾಗದಲ್ಲಿ ಭಾರತದಲ್ಲಿ ಈಗಾಗಲೇ ಸಾಕಷ್ಟು ಫೋನ್‌ಗಳನ್ನು ನೀವು ಗಮನಿಸಿರಬಹುದು. ಆದರೆ, ವಿವೋ ಲಾಂಚ್ ಮಾಡುತ್ತಿರುವ ಫೋನ್ ಮಾತ್ರ ಈ ಎಲ್ಲಾ ಫೋನ್‌ಗಳಿಗಿಂತ ಭಿನ್ನ ಎನಿಸಿಕೊಳ್ಳಲಿದೆ. ಈಗಾಗಲೆ ಈ ವಿವೋ X ಫೋಲ್ಡ್ 3 (Vivo X Fold 3 Phone) ಫೋನ್ ಸರಣಿ ಚೀನಾದಲ್ಲಿ ಲಾಂಚ್ ಆಗಿದೆ. ಹಾಗಿದ್ರೆ, ಭಾರತದಲ್ಲಿ ಲಾಂಚ್ ಆಗುವ ವೇರಿಯಂಟ್ ಏನೆಲ್ಲಾ ಫೀಚರ್ಸ್ ಹೊಂದಿರಲಿದೆ? ಯಾವಾಗ ಲಾಂಚ್ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ವಿವೋ X ಫೋಲ್ಡ್ 3 ಫೋನ್: ವಿವೋ X ಫೋಲ್ಡ್ 3 ಸರಣಿಯನ್ನು ಚೀನಾದಲ್ಲಿ ಅನಾವರಣ ಮಾಡಲಾಗಿದ್ದು, ಪ್ರಮುಖ ವರದಿಗಳ ಪ್ರಕಾರ ಇದು ಭಾರತದಲ್ಲಿಯೂ ಸಹ ಬಿಡುಗಡೆಯಾಗಲಿದೆ ಎಂದು 91ಮೊಬೈಲ್ಸ್ ವರದಿ ಮಾಡಿದೆ. ಈ ವರದಿಯಲ್ಲಿ ಇರುವಂತೆ ಈ ವಿಭಾಗದಲ್ಲಿ ಅತ್ಯಂತ ತೆಳ್ಳನೆಯ ಫೋನ್ ಇದಾಗಿರಲಿದೆ. ಈ ಫೋನ್‌ನ ಪೂರ್ವವರ್ತಿಯಾದ X ಫೋಲ್ಡ್ 2, 12.9mm ದಪ್ಪ ಇತ್ತು.
ವಿವೋ X ಫೋಲ್ಡ್ 3 ಸರಣಿಯ ಫೀಚರ್ಸ್: ಚೀನಾದಲ್ಲಿ ಈಗಾಗಲೇ ಲಾಂಚ್ ಆಗಿರುವ ಫೋನ್‌ನ ಫೀಚರ್ಸ್ ಕಡೆ ಗಮನಹರಿಸುವುದಾದರೆ ವಿವೋ X ಫೋಲ್ಡ್ 3 ಮತ್ತು X ಫೋಲ್ಡ್ 3 ಪ್ರೊ (Vivo X Fold 3 and X Fold 3 Pro) ಒಂದೇ ರೀತಿಯ OLED ಡಿಸ್‌ಪ್ಲೆ ಆಯ್ಕೆ ಪಡೆದುಕೊಂಡಿವೆ. ಬಾಹ್ಯ ಡಿಸ್‌ಪ್ಲೇ 2,480 x 2,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.53 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಒಳಗಿನ ಡಿಸ್‌ಪ್ಲೇ 2,748 x 1,172 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಎರಡೂ ಡಿಸ್‌ಪ್ಲೇಗಳೂ ಸಹ LTPO 120Hz ರಿಫ್ರೆಶ್ ರೇಟ್, 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, ಬಳಕೆದಾರರಿಗೆ ಅತ್ಯಂತ ಪ್ರೀಮಿಯಂ ಅನುಭವ ನೀಡಲಿವೆ.

ವಿವೋ X ಫೋಲ್ಡ್ 3 ಸರಣಿ ಪ್ರೊಸೆಸರ್ ಮಾಹಿತಿ: ವಿವೋ X ಫೋಲ್ಡ್ 3 ಪ್ರೊ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಅನ್ನು ಹೊಂದಿದ್ದರೆ ಸ್ಟ್ಯಾಂಡರ್ಡ್ ವೇರಿಯಂಟ್ ಹಳೆಯ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್ ಮೂಲಕ ಕಾರ್ಯನಿರ್ವಹಿಸಲಿದೆ. ಎರಡೂ ಫೋನ್‌ಗಳು 16GB LPDDR5 RAM ಮತ್ತು 1TB UFS 4.0 ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, ಉತ್ತಮವಾಗಿ ಕೆಲಸ ಮಾಡಲಿವೆ.
ವಿವೋ X ಫೋಲ್ಡ್ 3 ಸರಣಿ ಕ್ಯಾಮೆರಾ ರಚನೆ: ವಿವೋ X ಫೋಲ್ಡ್ 3 ಸರಣಿಯು ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಎರಡೂ ಫೋನ್‌ಗಳಲ್ಲಿ 50 ಮೆಗಾಪಿಕ್ಸೆಲ್ OV50H OIS-ಸಕ್ರಿಯಗೊಳಿಸಿದ ಮುಖ್ಯ ಸೆನ್ಸರ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಆಯ್ಕೆ ನೀಡಲಾಗಿದೆ. ಆದರೆ ಸ್ಟ್ಯಾಂಡರ್ಡ್ ವೇರಿಯಂಟ್‌ನಲ್ಲಿ ಮೂರನೇ ಘಟಕವು 50 ಮೆಗಾಪಿಕ್ಸೆಲ್ ಸೆನ್ಸರ್ ಇದ್ದು, ಪ್ರೊ ವೇರಿಯಂಟ್ 3x ಆಪ್ಟಿಕಲ್ ಜೂಮ್ ಮತ್ತು 70mm ಫೋಕಲ್ ಲೆಂತ್ ಜೊತೆಗೆ 64 ಮೆಗಾಪಿಕ್ಸೆಲ್ OIS ಪೆರಿಸ್ಕೋಪ್ ಶೂಟರ್ ಅನ್ನು ಹೊಂದಿದೆ.ಇದರ ಜೊತೆಗೆ X ಫೋಲ್ಡ್ 3 ಸರಣಿ ಫೋನ್‌ಗಳು 32 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು, ಇದನ್ನು ಪಂಚ್-ಹೋಲ್ ಕಟೌಟ್‌ನಲ್ಲಿ ಇರಿಸಲಾಗಿದೆ.

ವಿವೋ X ಫೋಲ್ಡ್ 3 ಸರಣಿ ಬ್ಯಾಟರಿ ಹಾಗೂ ಇತರೆ: X ಫೋಲ್ಡ್ 3 80W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಫೋಲ್ಡ್ 3 ಪ್ರೊ 100W ಚಾರ್ಜಿಂಗ್ ಬೆಂಬಲದೊಂದಿಗೆ 5,700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 50W ವೈರ್‌ಲೆಸ್ ಚಾರ್ಜಿಂಗ್ ಅನ್ನೂ ಸಹ ಬೆಂಬಲಿಸುತ್ತದೆ. ಜೊತೆಗೆ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ವೈರ್‌ಲೆಸ್ ಲಾಸ್‌ಲೆಸ್ ಹೈ-ಫೈ ಆಡಿಯೊ ಸೌಲಭ್ಯ ಹೊಂದಿದೆ. ವೈಫೈ-7, ಡ್ಯುಯಲ್-ಸಿಮ್ 5ಜಿ, ಐಆರ್ ಬ್ಲಾಸ್ಟರ್ ಮತ್ತು ಎನ್‌ಎಫ್‌ಸಿ ಕನೆಕ್ಟಿವಿಟಿ ಸೌಲಭ್ಯವನ್ನು ಈ ಫೋನ್‌ನಲ್ಲಿ ಕಾಣಬಹುದು.
ಇನ್ನು ವಿನ್ಯಾಸ ವಿಚಾರಕ್ಕೆ ಬಂದರೆ ವಿವೋ X ಫೋಲ್ಡ್ 3 ಸರಣಿಯು ವೃತ್ತಾಕಾರದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿದೆ. ಸ್ಟ್ಯಾಂಡರ್ಡ್ ವೇರಿಯಂಟ್ ಅನ್ನು ಮಡಿಸಿದಾಗ ಕೇವಲ 4.65mm ಅಳತೆಯ ತೆಳ್ಳನೆಯ ಫೋನ್ ಆಗುತ್ತದೆ. ಇದು ಐಫೋನ್ 15 ಪ್ರೊ ಮ್ಯಾಕ್ಸ್‌ಗಿಂತ ಹಗುರವಾಗಿದೆ, X ಫೋಲ್ಡ್ 3 ಸರಣಿಯು ಕಾರ್ಬನ್-ಫೈಬರ್ ಅಲ್ಟ್ರಾ-ಬಾಳಿಕೆ ಬರುವ ಹಗುರವಾದ ಹಿಂಜ್ ಅನ್ನು ಹೊಂದಿದೆ ಎಂದು ವಿವೋ ಹೇಳುತ್ತದೆ.
ವಿವೋ X ಫೋಲ್ಡ್ 3 ಸರಣಿ ಬೆಲೆ ಹಾಗೂ ಲಭ್ಯತೆ: ಪ್ರೋ ವಿಭಾಗದಲ್ಲಿ 16GB + 512GB ಮತ್ತು 16GB + 1TB RAM ವೇರಿಯಂಟ್‌ನ ಫೋನ್‌ಗಳು ಕ್ರಮವಾಗಿ CNY 9,999 (1,15,294.37 ರೂ.ಗಳು)ಮತ್ತು CNY 10,999 (1,26,824.96 ರೂ.ಗಳು) ಬೆಲೆ ಹೊಂದಿವೆ. ಹಾಗೆಯೇ ಸ್ಟ್ಯಾಂಡರ್ಡ್ X ಫೋಲ್ಡ್ 3 CNY 6,999 (80,698 ರೂ.ಗಳು) ನಿಂದ ಆರಂಭ ಆಗಲಿದೆ. ಈ ಫೋನ್ 16GB + 256GB, 16GB + 512GB, 16GB + 1TB ವೇರಿಯಂಟ್‌ನಲ್ಲಿ ಲಭ್ಯ.


Click it and Unblock the Notifications








