ವಿವೋ X ಫೋಲ್ಡ್ 3 ಪ್ರೊ ಈಗ ಖರೀದಿಗೆ ಲಭ್ಯ; ಬೊಂಬಾಟ್ ಆಫರ್ ಸಿಗಲಿದೆ!
ವಿವೋ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ವಿವೋ X ಫೋಲ್ಡ್ 3 ಪ್ರೊ (Vivo X Fold 3 Pro) ಇಂದಿನಿಂದ ಭಾರತದಲ್ಲಿ ಖರೀದಿಗೆ ಲಭ್ಯ ಇರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ವಿವೋ ಕಂಪನಿಯ ಈ ಫೋಲ್ಡಬಲ್ ಫೋನ್ ಈಗಾಗಲೇ ಗ್ರಾಹಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದ್ದು, ಇದರೊಂದಿಗೆ 3D ಅಲ್ಟ್ರಾ ಸೋನಿಕ್ ಡ್ಯುಯಲ್ ಸ್ಕ್ರೀನ್ ಸೌಲಭ್ಯವನ್ನು ಪಡೆದುಕೊಂಡಿದೆ.
ಹೌದು, ವಿವೋ X ಫೋಲ್ಡ್ 3 ಪ್ರೊ (Vivo X Fold 3 Pro) ಫೋನ್ ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯ ಇದೆ. ಇನ್ನು ಆಸಕ್ತ ಗ್ರಾಹಕರು ಈ ಫೋನ್ ಅನ್ನು ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ವಿವೋ ಇ-ಸ್ಟೋರ್ ಮೂಲಕ ಖರೀದಿ ಮಾಡಬಹುದಾಗಿದೆ. ಅಂದಹಾಗೆ ಈ ಫೋನಿನ 16GB + 512GB ವೇರಿಯಂಟ್ ಆಯ್ಕೆಯ ಬೆಲೆಯು 1,59,999 ರೂ. ಆಗಿದ್ದು, ಇದು ಸೆಲೆಸ್ಟಿಯಲ್ ಬ್ಲ್ಯಾಕ್ ಕಲರ್ ಆಯ್ಕೆ ಲಭ್ಯ ಇದೆ.

ಖರೀದಿದಾರರು ಎಸ್‌ಬಿಐ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ (EMI ಮತ್ತು ಪೂರ್ಣ ಸ್ವೈಪ್) ಮತ್ತು ಡೆಬಿಟ್ (ಪೂರ್ಣ ಸ್ವೈಪ್) ಕಾರ್ಡ್ ಮೂಲಕ ವಹಿವಾಟು ಮಾಡಿದರೆ, 15,000ರೂ. ಗಳ ರಿಯಾಯಿತಿ ಪಡೆಯಬಹುದು. ಹಾಗೆಯೇ ಫೋನ್ ಖರೀದಿಸಿದ 6 ತಿಂಗಳೊಳಗೆ ಒನ್ ಟೈಮ್ ಫ್ರೀ ಸ್ಕ್ರೀನ್ ರಿಪ್ಲೇಸ್ಮೆಂಟ್ ನೀಡುವುದಾಗಿದೆ ಸಂಸ್ಥೆಯು ತಿಳಿಸಿದೆ. ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ ಆಗಲಿದೆ. ಹಾಗಾದರೇ ವಿವೋ X ಫೋಲ್ಡ್ 3 ಪ್ರೊ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿವೋ X ಫೋಲ್ಡ್ 3 ಪ್ರೊ ಫೀಚರ್ಸ್
ವಿವೋ X ಫೋಲ್ಡ್ 3 ಪ್ರೊ ಫೋನ್ 6.53 ಇಂಚಿನ LTPO AMOLED ಸ್ಕ್ರೀನ್ ಪಡೆದಿದ್ದು, ಇದು 2748×1172p ಪಿಕ್ಸಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್, 4500nits ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಇನ್ನು ಫೋಲ್ಡಿಂಗ್ ಡಿಸ್‌ಪ್ಲೇ 8.03 ಇಂಚಿನ LTPO AMOLED ಸ್ಕ್ರೀನ್ ಹೊಂದಿದ್ದು, 2480 × 2200 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಪಡೆದುಕೊಂಡಿದೆ.
ವಿವೋ X ಫೋಲ್ಡ್ 3 ಪ್ರೊ ಮೊಬೈಲ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಇದು 16GB RAM + 512GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ.
ವಿವೋ X ಫೋಲ್ಡ್ 3 ಪ್ರೊ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ದ್ವಿತೀಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹಾಗೂ ತೃತೀಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ದಲ್ಲಿ ಇವೆ. ಇದರೊಂದಿಗೆ ಮುಂಭಾಗದಲ್ಲಿ ಈ ಫೋನ್ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ವಿವೋ X ಫೋಲ್ಡ್ 3 ಪ್ರೊ ಮೊಬೈಲ್ 5,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಇದು 100W ಫಾಸ್ಟ್ ಚಾರ್ಜಿಂಗ್ ಹಾಗೂ 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 5G, ವೈಫೈ 7 802.11, ಬ್ಲೂಟೂತ್, NFC, GPS ಅನ್ನು ಪಡೆದಿದೆ. ಹಾಗೆಯೇ IPX8 ರೇಟಿಂಗ್ ಆಯ್ಕೆ ಕೂಡಾ ಪಡೆದುಕೊಂಡಿದೆ.


Click it and Unblock the Notifications








