Vivo: ಭಾರತದಲ್ಲಿ ಶೀಘ್ರವೇ ವಿವೋ X ಫೋಲ್ಡ್ 3 ಪ್ರೊ ಸ್ಮಾರ್ಟ್‌ಫೋನ್! ನಿರೀಕ್ಷಿತ ಫೀಚರ್ಸ್, ಬೆಲೆ ಮಾಹಿತಿ
ವಿವೋ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, ಈ ನಡುವೆ ಫೋಲ್ಡಬಲ್ ವಿವೋ ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡಲಿದೆ.
ಹೌದು, ವಿವೋ ತನ್ನ ಮೊದಲ ಫೋಲ್ಡಬಲ್ ಫೋನ್ ವಿವೋ X ಫೋಲ್ಡ್ 3 ಪ್ರೊ (Vivo X Fold 3 Pro smartphone) ಅನ್ನು ಭಾರತದಲ್ಲಿ ಪರಿಚಯಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಹಿಂಜ್ ಕಾರ್ಯವಿಧಾನದಲ್ಲಿ ಕಾರ್ಬನ್ ಫೈಬರ್ ಕೀಲ್ ಘಟಕವನ್ನು ಪಡೆದಿರುವ ಮೊದಲ ಫೋಲ್ಡಬಲ್ ಫೋನ್ ಎಂದು ಕರೆಸಿಕೊಳ್ಳಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ವಿವೋ X ಫೋಲ್ಡ್ 3 ಪ್ರೊ ಸ್ಮಾರ್ಟ್‌ಫೋನ್: ಕಳೆದ ವರ್ಷ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5, ಒನ್‌ಪ್ಲಸ್ ಓಪನ್ , ಮತ್ತು ಒಪ್ಪೋ ಫೈಂಡ್ N2 ಫ್ಲಿಪ್ ಫೋನ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದೆ. ಈಗ, ವಿವೋ ತನ್ನ ಸಾಮರ್ಥ್ಯ ಏನು ಅನ್ನೋದನ್ನು ತೋರಿಸಲು ಸಜ್ಜಾಗಿದೆ. ಈ ಬ್ರ್ಯಾಂಡ್ ಇನ್ನೂ ಭಾರತದಲ್ಲಿ ಮಡಿಸಬಹುದಾದ ಫೋನ್ ಅನ್ನು ಬಿಡುಗಡೆ ಮಾಡಿಲ್ಲವಾದರೂ ಈಗಾಗಲೇ ಇದು ಭಾರೀ ಸೌಂಡ್ ಮಾಡುತ್ತಿದೆ.
ನಿಖರವಾದ ಬಿಡುಗಡೆ ದಿನಾಂಕವನ್ನು ದೃಢೀಕರಿಸದಿದ್ದರೂ ಸಹ, ಈ ವರ್ಷದ ಜೂನ್‌ನಲ್ಲಿ ಫೋನ್ ಈ ಫೋನ್ ಲಾಂಚ್ ಆಗಬಹುದು ಎಂದು ವರದಿಗಳು ಉಲ್ಲೇಖ ಮಾಡಿವೆ. ಇದು ನಿಜವಾಗಿದ್ದರೆ, ಡಿವೈಸ್‌ನ ಉಡಾವಣೆಯಿಂದ ನಾವು ಕೇವಲ ಒಂದೆರಡು ವಾರಗಳ ದೂರದಲ್ಲಿದ್ದೇವೆ ಅಷ್ಟೇ. ಈ ಫೋನ್ ಇತ್ತೀಚೆಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣ ವೆಬ್‌ಸೈಟ್ ಮತ್ತು ಗೀಕ್‌ಬೆಂಚ್ ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದ್ದು, ಇದು ಭಾರತದಲ್ಲಿ ಲಾಂಚ್ ಸೂಚನೆಯನ್ನು ತಿಳಿಸಿದೆ.
ಇನ್ನು ವಿವೋ X ಫೋಲ್ಡ್ 3 ಪ್ರೊ ಸ್ಮಾರ್ಟ್‌ಫೋನ್ ಅನ್ನು ಮಾರ್ಚ್ 2023 ರಲ್ಲಿ ಲಾಂಚ್ ಮಾಡಲಾಗಿದ್ದು, ಚೀನಾದಲ್ಲಿ ಮಾತ್ರ ಈ ಫೋನ್ ಲಭ್ಯ ಇತ್ತು. ಈ ಫೋನ್ ಅನ್ನು ಈಗಾಗಲೇ ಕಳೆದ ವರ್ಷ ಪರಿಚಯಿಸಲಾಗಿರುವುದರಿಂದ, ಇದು ಅದರ ಜಾಗತಿಕ ವೇರಿಯಂಟ್ ಆಗಿರಲಿಲದೆ. ಅದರಂತೆ ಅದೇ ರೀತಿಯ ಫೀಚರ್ಸ್ ಅನ್ನು ಹೊಂದಿರಬಹುದು ಎಂದು ಹೇಳಲಾಗಿದೆ.
ಕೆಲವು ವರದಿಗಳ ಪ್ರಕಾರ, ಈ ಫೋನ್‌ನ ಹಿಂಜ್ ಕಾರ್ಯವಿಧಾನದಲ್ಲಿ ಕಾರ್ಬನ್ ಫೈಬರ್ ಕೀಲ್ ಘಟಕವನ್ನು ಪಡೆದಿರುವ ಮೊದಲ ಫೋಲ್ಡ್ ಫೋನ್ ಆಗಿರಬಹುದು ಎನ್ನಲಾಗಿದೆ. ಈ ತಂತ್ರಜ್ಞಾನವು ಡಿವೈಸ್‌ನ ವರ್ಧಿತ ಪೋರ್ಟಬಿಲಿಟಿಗಾಗಿ ಹಾಗೂ ಹಗುರವಾದ ಅನುಭವ ನೀಡಲಿದ್ದು, ವ್ಯಾಪಕವಾದ ಬಳಕೆಯನ್ನು ಸಹಿಸಿಕೊಳ್ಳುವಷ್ಟು ದೃಢವಾಗಿರಲಿದೆ. ಅಲ್ಲದೆ TÅ"V Rheinland ನ ಪರೀಕ್ಷೆಯಲ್ಲಿ ಈ ಡಿವೈಸ್ 500,000 ಫೋಲ್ಡ್ ವರೆಗೆ ತಡೆದುಕೊಳ್ಳಬಲ್ಲದು ಎಂದು ದೃಢಪಡಿಸಿದೆ. ಅಂದರೆ ಸುಮಾರು 12 ವರ್ಷಗಳ ವಿಶ್ವಾಸಾರ್ಹ ಬಳಕೆಗೆ ಸಮಾನವಾಗಿದೆ.

ಉಳಿದಂತೆ ಈ ಫೋನ್ ಡ್ಯುಯಲ್ ಡಿಸ್ಪ್ಲೇಗಳೊಂದಿಗೆ ಬರಲಿದ್ದು, 6.53-ಇಂಚಿನ ಕವರ್ ಡಿಸ್ಪ್ಲೇ ಮತ್ತು 8.03 ಇಂಚಿನ ಒಳಗಿನ ಅಮೋಲೆಡ್ LTPO ಫೋಲ್ಡಿಂಗ್ ಡಿಸ್‌ಪ್ಲೇ ಹೊಂದಿರಬಹುದು ಎನ್ನಲಾಗಿದೆ. ಎರಡೂ ಡಿಸ್‌ಪ್ಲೇಗಳು 2480 x 2200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ ಎನ್ನಲಾಗಿದ್ದು, 120Hz ರಿಫ್ರೆಶ್ ದರ ಮತ್ತು ಡಾಲ್ಬಿ ವಿಷನ್ ,ಹೆಚ್‌ಡಿಆರ್10+ ನಂತಹ ಇತರ ಫೀಚರ್ಸ್ ಜೊತೆಗೆ 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ.
ಹಾಗೆಯೇ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಗಾಗಿ ಅಡ್ರಿನೋ ಜಿಪಿಯು ನೊಂದಿಗೆ ಜೋಡಿಸಲಾಗಿದೆ. ಈ ಡಿವೈಸ್ 16GB ವರೆಗೆ LPDDR5X RAM ಮತ್ತು 1TB ವರೆಗೆ UFS4.0 ಸ್ಟೋರೇಜ್ ಆಯ್ಕೆಯನ್ನು ಪಡೆದಿರಲಿದೆ ಎನ್ನಲಾಗಿದೆ. ಇದು ಸುಗಮ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯನ್ನು ಭರವಸೆ ನೀಡುತ್ತದೆ. ಇದಲ್ಲದೆ, ಫೋನ್ ಆಂಡ್ರಾಯ್ಡ್ 14 ಆಧಾರಿತ ಒರ್ಜಿನ್‌ಓಎಸ್ 4 ನಲ್ಲಿ ರನ್ ಆಗುತ್ತದೆ.
ಈ ಫೋನ್ ಕ್ಯಾಮೆರಾ ವಿಚಾರಕ್ಕೆ ಬಂದರೆ ಓಐಎಸ್‌ನೊಂದಿಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ ಸೆನ್ಸಿಂಗ್ ಪ್ರಾಥಮಿಕ ಕ್ಯಾಮೆರಾ, 64 ಮೆಗಾಪಿಕ್ಸೆಲ್ 3x ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಸೆಲ್ಫಿ ವಿಚಾರಕ್ಕೆ ಬಂದರೆ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದೆ ಎನ್ನಲಾಗಿದೆ. ಇದರ ಜೊತೆಗೆ . 5,700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯುವ ನಿರೀಕ್ಷೆ ಇದೆ.
ವಿವೋ X ಫೋಲ್ಡ್ 3 ಪ್ರೊ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾದ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಚಿಲ್ಲರೆ ಚಾನೆಲ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ ಎನ್ನಲಾಗಿದ್ದು, ಚೀನಾದಲ್ಲಿ 9,999 ಯುವಾನ್‌ಗಳ ಬೆಲೆಯನ್ನು ಹೊಂದಿದೆ. ಹಾಗಾಗಿ ಭಾರತದಲ್ಲಿ ಫೋನ್‌ನ ಬೆಲೆ 1.5 ಲಕ್ಷಕ್ಕಿಂತ ಕಡಿಮೆ ಇರುತ್ತದೆ ಎನ್ನಲಾಗಿದೆ.


Click it and Unblock the Notifications








