Vivo: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ವಿವೋ X ಫೋಲ್ಡ್ 3! ಫೀಚರ್ಸ್ ಏನಿರಲಿದೆ?
ವಿವೋ ಫೋನ್‌ಗಳಿಗೆ (For vivo phones) ಭಾರತದಲ್ಲಿ ವಿಶೇಷ ಬೇಡಿಕೆ ಇದೆ. ಈ ಕಾರಣಕ್ಕೆ ವಿವೋ ಆಗಾಗ್ಗೆ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡುತ್ತಲೇ ಇರುತ್ತದೆ. ಈ ನಡುವೆ ಶೀಘ್ರದಲ್ಲೇ ಭಾರತಕ್ಕೆ ವಿವೋ X ಫೋಲ್ಡ್ 3 (Vivo X Fold 3)ಎಂಟ್ರಿ ನೀಡಲಿದೆ ಎಂದು ತಿಳಿದುಬಂದಿದೆ.
ಹೌದು, ವಿವೋ X ಫೋಲ್ಡ್ 3 ಪ್ರೊ ಅನ್ನು ಇತ್ತೀಚೆಗೆ ಚೀನಾದಲ್ಲಿ ಲಾಂಚ್ ಮಾಡಲಾಗಿದೆ. ಈ ಫೋನ್ ಈಗ ಭಾರತೀಯ ಪ್ರಮಾಣೀಕರಣದ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ ಪರಿಣಾಮ ಭಾರತದಲ್ಲಿ ಮುಂಬರುವ ಬಿಡುಗಡೆಯನ್ನು ಸೂಚಿಸಿದೆ. ಹಾಗಿದ್ರೆ, ಈ ಫೋನ್‌ನ ಸುಧಾರಿತ ಫೀಚರ್ಸ್‌ಗಳು ಮತ್ತು ನವೀನ ವಿನ್ಯಾಸ ಹೇಗಿರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ವಿವೋ X ಫೋಲ್ಡ್ 3 ಪ್ರೊ ಸ್ಮಾರ್ಟ್‌ಫೋನ್: ವಿವೋ X ಫೋಲ್ಡ್ 3 ಪ್ರೊ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತಕ್ಕೆ ಬರಬಹುದು ಎಂದು ತಿಳಿದುಬಂದಿದೆ. ಮೊದಲೇ ತಿಳಿಸಿದಂತೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣದ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಈ BIS ಪ್ರಮಾಣೀಕರಣವು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಕಡ್ಡಾಯ ಅವಶ್ಯಕತೆಯಾಗಿದೆ. ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಇದು ಖಚಿತಪಡಿಸುತ್ತದೆ.
ಇನ್ನು ವಿವೋ X ಫೋಲ್ಡ್ 3 ಪ್ರೊ ಸ್ಮಾರ್ಟ್‌ಫೋನ್ ಮಾದರಿ ಸಂಖ್ಯೆ V2330 ನೊಂದಿಗೆ ಗುರುತಿಸಲ್ಪಟ್ಟಿದ್ದು, ಇದನ್ನು ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ನಡುವೆ ಈಗಾಗಲೇ ಚೀನಾದಲ್ಲಿ ಲಾಂಚ್ ಆದ ಫೋನ್ ಆಧಾರದ ಮೇಲೆ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸೆರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, 16GB ನ LPDDR5X RAM ಮತ್ತು 1TB ವರೆಗಿನ UFS 4.0 ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಈ ಫೋನ್ ಅಮೋಲೆಡ್ LTPO ತಂತ್ರಜ್ಞಾನ ಮತ್ತು 120Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 8.03 ಇಂಚಿನ ಒಳಗಿನ ಡಿಸ್‌ಪ್ಲೇ ಮತ್ತು 6.53 ಇಂಚಿನ ಹೊರ ಡಿಸ್‌ಪ್ಲೇ ಯನ್ನು ಹೊಂದಿರಲಿದ್ದು, ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ನೀಡಲಿದೆ. ಇದರ ಜೊತೆಗೆ ಕ್ಯಾಮೆರಾ ಉತ್ಸಾಹಿಗಳು ಸ್ಮಾರ್ಟ್‌ಫೋನ್‌ನ ಪ್ರಭಾವಶಾಲಿ ಇಮೇಜಿಂಗ್ ಸಾಮರ್ಥ್ಯಗಳನ್ನು ಅನುಭವಿಸಬಹುದಾಗಿದೆ.
ಅಂದರೆ ಇದರಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 64 ಮೆಗಾಪಿಕ್ಸೆಲ್ 3x ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಆಯ್ಕೆ ಪಡೆದಿರಲಿದ್ದು, ಈ ಸೆನ್ಸರ್ ಅನ್ನು ಉತ್ತಮ ಗುಣಮಟ್ಟದ ಚಿತ್ರಕ್ಕಾಗಿ Zeiss' T* ಲೇಪನದೊಂದಿಗೆ ವರ್ಧಿಸಲಾಗಿದೆ. ಇದರಿಂದ ಕ್ಯಾಮೆರಾ ಪ್ರಿಯರು ಈ ಫೋನ್ ಅನ್ನು ಕಣ್ಣುಮುಚ್ಚಿಕೊಂಡು ಖರೀದಿ ಮಾಡಬಹುದಾಗಿದೆ.

ಇನ್ನು ಈ ಫೋನ್ ಬೆಲೆಗೆ ವಿಚಾರಕ್ಕೆ ಬಂದರೆ ಭಾರತದಲ್ಲಿ 512GB ಸ್ಟೋರೇಜ್ ವೇರಿಯಟ್ CNY9,999 (ಅಂದಾಜು 1,15,030ರೂ.) ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತೀಯ ಪ್ರಮಾಣೀಕರಣ ವೆಬ್‌ಸೈಟ್‌ಗೆ ಅದರ ಆಗಮನದೊಂದಿಗೆ, ಭಾರತದಲ್ಲಿ ವಿವೋ X ಫೋಲ್ಡ್ 3 ಪ್ರೊನ ಬಿಡುಗಡೆ ದಿನಾಂಕ ಮತ್ತು ಲಭ್ಯತೆಯ ಕುರಿತು ವಿವೋ ಅಧಿಕೃತ ಪ್ರಕಟಣೆಗಾಗಿ ಟೆಕ್ ಉತ್ಸಾಹಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ನಿಮಗೆ ಈ ಫೋನ್‌ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.
ವಿವೋ V40 ಲೈಟ್ ಬಿಡುಗಡೆ ಸನ್ನಿಹಿತವಾಗಿದೆ: ಈ ಫೋನ್ (Vivo V40 Lite) ಬ್ಲೂಟೂತ್ SIG, GCF ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿದೆ. ಅದರಂತೆ ಜಾಗತಿಕವಾಗಿ ವಿವೋ V40 SE 5G ಅನ್ನು ಪರಿಚಯಿಸಿದ ನಂತರ, ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೋ V40 ಲೈಟ್ 5G ಅನ್ನು ತರಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಮುಂಬರುವ ಈ ಫೋನ್ SIG ಡೇಟಾಬೇಸ್‌ನಲ್ಲಿ ಮಾದರಿ ಸಂಖ್ಯೆ V2341 ನೊಂದಿಗೆ ಕಾಣಿಸಿಕೊಂಡಿದೆ. ಅದರಂತೆ ಬ್ಲೂಟೂತ್ 5.1 ಸಂಪರ್ಕದೊಂದಿಗೆ ಬರುತ್ತದೆ ಎಂದು ತಿಳಿದುಬಂದಿದೆ.


Click it and Unblock the Notifications








