Home
ಸುದ್ದಿಜಾಲ

Vivo: ಭಾರತಕ್ಕೆ ಭರ್ಜರಿ ಎಂಟ್ರಿ ನೀಡಿದ ವಿವೋ X100, ವಿವೋ X100 ಪ್ರೊ, ಬೆಂಕಿ ಫೀಚರ್ಸ್‌.. ಬೆಲೆ ಎಷ್ಟು?

ವಿವೋ (Vivo) ಫೋನ್‌ಗಳ ವಿಭಾಗದಲ್ಲಿ ಲಾಂಚ್‌ ಆಗುವ ಮುನ್ನವೇ ಹೆಚ್ಚು ಸದ್ದು ಮಾಡಿದ್ದ ಫೋನ್‌ಗಳು ಎಂದರೆ ವಿವೋ X100, ವಿವೋ X100 ಪ್ರೊ(Vivo X100, Vivo X100 Pro) .ಕೊನೆಗೂ ಇಂದು ಈ ಫೋನ್‌ಗಳನ್ನು ಭಾರತದಲ್ಲಿ ಅನಾವರಣ ಮಾಡಲಾಗಿದೆ. ಈ ಫೋನ್‌ಗಳು 50 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿವೆ.

ಹೌದು, ವಿವೋ ಇದೀಗ ಭಾರತದಲ್ಲಿ ವಿವೋ X100, ವಿವೋ X100 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಫೋನ್‌ಗಳು ಉತ್ತಮ ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಈ ಮೂಲಕ ದೀರ್ಘ ಬ್ಯಾಕಪ್‌ ನೀಡಲಿವೆ. ಜೊತೆಗೆ 16 GB RAM ಆಯ್ಕೆಯನ್ನೂ ಸಹ ಈ ಫೋನ್‌ಗಳಲ್ಲಿ ಕಾಣಬಹುದಾಗಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಫೋನ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇವುಗಳ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ತಿಳಿಯೋಣ.

ಭಾರತಕ್ಕೆ ಭರ್ಜರಿ ಎಂಟ್ರಿ ನೀಡಿದ ವಿವೋ X100, ವಿವೋ X100 ಪ್ರೊ, ಬೆಂಕಿ ಫೀಚರ್ಸ್

ವಿವೋ X100, ವಿವೋ X100 ಪ್ರೊ ಸ್ಮಾರ್ಟ್‌ಫೋನ್‌: ಈ ಎರಡೂ ಫೋನ್‌ಗಳು 6.78 ಇಂಚಿನ 8T LTPO ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120 Hz ವರೆಗಿನ ರಿಫ್ರೆಶ್ ರೇಟ್‌ ಮತ್ತು 3,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಮೂಲಕ ಉತ್ತಮ ಅನುಭವ ನೀಡಲಿವೆ. ಇದರೊಂದಿಗೆ ಎರಡೂ ಫೋನ್‌ಗಳು ಸಹ ಫಿಂಗರ್‌ಪ್ರಿಂಟ್ ರೀಡರ್‌ ಆಯ್ಕೆ ಪಡೆದಿದ್ದು, ಸೆಲ್ಫಿ ಕ್ಯಾಮೆರಾಕ್ಕಾಗಿ ವಿಶೇಷ ಡಿಸ್‌ಪ್ಲೇ ವಿನ್ಯಾಸ ಪಡೆದಿವೆ.

ವಿವೋ X100, ವಿವೋ X100 ಪ್ರೊ ಪ್ರೊಸೆಸರ್ ಮಾಹಿತಿ: ಈ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್‌ನಿಂದ (MediaTek Dimensity 9300 ) ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ವಿವೋ X100 ಎರಡು 12GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಮತ್ತು 16GB RAM ಮತ್ತು 512GB ಸ್ಟೋರೇಜ್‌ನ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ. ಆದರೆ, X100 ಪ್ರೊ 16GB RAM ಮತ್ತು 512GB ಸ್ಟೋರೇಜ್‌ನ ಒಂದೇ ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ.

ಭಾರತಕ್ಕೆ ಭರ್ಜರಿ ಎಂಟ್ರಿ ನೀಡಿದ ವಿವೋ X100, ವಿವೋ X100 ಪ್ರೊ, ಬೆಂಕಿ ಫೀಚರ್ಸ್

ವಿವೋ X100, ವಿವೋ X100 ಪ್ರೊ ಕ್ಯಾಮೆರಾ ರಚನೆ: ಎರಡೂ ಫೋನ್‌ಗಳು ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿವೆ. X100 ಪ್ರೊ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು ವಿಶೇಷ ಪೆರಿಸ್ಕೋಪ್ ಜೂಮ್ ಕ್ಯಾಮೆರಾವನ್ನು ಹೊಂದಿದೆ. ಈ ಜೂಮ್ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ ಸೆನ್ಸರ್‌ ಹೊಂದಿದ್ದು, 100mm ಲೆನ್ಸ್ ಪಡೆದಿದೆ. ಹೆಚ್ಚುವರಿಯಾಗಿ 50 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್ ಆಯ್ಕೆಯನ್ನು ಇದರಲ್ಲಿ ಕಾಣಬಹುದು.

ಈ ಸೆನ್ಸರ್‌ ವಿವೋದ ಇತ್ತೀಚಿನ 6nm V3 ಇಮೇಜಿಂಗ್ ಚಿಪ್ ಅನ್ನು ಬಳಕೆ ಮಾಡುತ್ತದೆ. ಮತ್ತೊಂದೆಡೆ ವಿವೋ X100 ಸ್ಮಾರ್ಟ್‌ಫೋನ್‌ 50 ಮೆಗಾಪಿಕ್ಸೆಲ್‌ ವೈಡ್ ಆಂಗಲ್ ಲೆನ್ಸ್, 64 ಮೆಗಾಪಿಕ್ಸೆಲ್‌ ಸೆನ್ಸರ್‌ನೊಂದಿಗೆ 70mm ಜೂಮ್ ಲೆನ್ಸ್ ಮತ್ತು X100 ಪ್ರೊ ನಂತೆಯೇ 15mm ಅಲ್ಟ್ರಾವೈಡ್ ಲೆನ್ಸ್ ಅನ್ನು ಈ ಫೋನ್‌ ಹೊಂದಿದೆ. ಈ ಲೆನ್ಸ್‌ V2 ಇಮೇಜಿಂಗ್ ಚಿಪ್ ಅನ್ನು ಬಳಕೆ ಮಾಡುತ್ತದೆ. ಎರಡೂ ಸ್ಮಾರ್ಟ್‌ಫೋನ್‌ಗಳು 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿವೆ.

ಭಾರತಕ್ಕೆ ಭರ್ಜರಿ ಎಂಟ್ರಿ ನೀಡಿದ ವಿವೋ X100, ವಿವೋ X100 ಪ್ರೊ, ಬೆಂಕಿ ಫೀಚರ್ಸ್

ವಿವೋ X100, ವಿವೋ X100 ಪ್ರೊ ಬ್ಯಾಟರಿ ಹಾಗೂ ಇತರೆ: ವಿವೋ X100 ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದರೆ X100 ಪ್ರೊ ಸ್ಮಾರ್ಟ್‌ಫೋನ್ 5,400 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಹಾಗೆಯೇ X100 ಫೋನ್ 120 W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದರೆ X100 ಪ್ರೊ 100 W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ.

ವಿವೋ X100, ವಿವೋ X100 ಪ್ರೊ ಬೆಲೆ ಹಾಗೂ ಲಭ್ಯತೆ: ವಿವೋ X100 ಸ್ಮಾರ್ಟ್‌ಫೋನ್‌ನ 12GB RAM + 256GB ಸ್ಟೋರೇಜ್ ಆಯ್ಕೆಯ ಫೋನ್‌ಗೆ 63,999 ರೂ.ಗಳನ್ನು ನಿಗದಿ ಮಾಡಲಾಗಿದ್ದು, 16GB RAM + 512GB ಸ್ಟೋರೇಜ್ ಆಯ್ಕೆಯ ಫೋನ್‌ಗೆ 69,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ ವಿವೋ X100 ಪ್ರೊ ಫೋನ್‌ನ 16GB RAM + 512GB ಸ್ಟೋರೇಜ್ ಆಯ್ಕೆಗೆ 89,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.

ಭಾರತಕ್ಕೆ ಭರ್ಜರಿ ಎಂಟ್ರಿ ನೀಡಿದ ವಿವೋ X100, ವಿವೋ X100 ಪ್ರೊ, ಬೆಂಕಿ ಫೀಚರ್ಸ್

ಈ ಸ್ಮಾರ್ಟ್‌ಫೋನ್‌ಗಳು ಪ್ರಿ-ಬುಕಿಂಗ್‌ಗಾಗಿ ತೆರೆದಿವೆ. ಇವುಗಳನ್ನು ನೀವು ವಿಜಯ್ ಸೇಲ್ಸ್, ರಿಲಯನ್ಸ್ ಡಿಜಿಟಲ್, ಕ್ರೋಮಾ, ಜಿಯೋ ಡಿಜಿಟಲ್ ಸ್ಟೋರ್‌ಗಳಂತಹ ಆಫ್‌ಲೈನ್ ಮತ್ತು ಆನ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಜೊತೆಗೆ ಫ್ಲಿಪ್‌ಕಾರ್ಟ್ ಮೂಲಕವೂ ಈ ಫೋನ್‌ಗಳನ್ನು ಖರೀದಿ ಮಾಡಬಹುದು. ಉಳಿದಂತೆ ಐಸಿಐಸಿಐ ಮತ್ತು ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಮಾಡಿದ ಪಾವತಿಗಳೊಂದಿಗೆ ಗ್ರಾಹಕರಿಗೆ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ. ಅಷ್ಟೇ ಅಲ್ಲದೆ ವಿನಿಮಯ ಆಫರ್ ಸಹ ಇದ್ದು, ಇದರಲ್ಲಿ 8,000 ವರೆಗೆ ರಿಯಾಯಿತಿ ಪಡೆಯಬಹುದು.

Best Mobiles in India

English summary
Vivo X100 and Vivo X100 Pro smartphone with 16 GB RAM, triple rear camera launched in india.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+