Home
ಸುದ್ದಿಜಾಲ

ವಿವೋ X100 ಮತ್ತು ವಿವೋ X100 ಪ್ರೊ ಲಾಂಚ್!..ಫೀಚರ್ಸ್‌ ಕೇಳಿ ಮಾರುಕಟ್ಟೆ ಶೇಕ್‌!

ವಿವೋ ಸಂಸ್ಥೆಯ ಬಹುನಿರೀಕ್ಷಿತ ವಿವೋ X100 ಸ್ಮಾರ್ಟ್‌ಪೋನ್‌ ಸರಣಿಯು ಇಂದು ಅಧಿಕೃತವಾಗಿ ಚೀನಾದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಸರಣಿಯು ವಿವೋ X100 (Vivo X100) ಮತ್ತು ವಿವೋ X100 ಪ್ರೊ (Vivo X100 Pro) ವೇರಿಯಂಟ್‌ ಮಾಡೆಲ್‌ಗಳನ್ನು ಒಳಗೊಂಡಿದೆ.

ಹೌದು, ಚೀನಾ ಮೂಲದ ವಿವೋ ಸಂಸ್ಥೆಯು ಹೊಸದಾಗಿ ವಿವೋ X100 ಫೋನ್‌ ಸರಣಿ ಲಾಂಚ್ ಮಾಡಿದೆ. ಈ ಸರಣಿಯಲ್ಲಿ ಬಿಡುಗಡೆ ಆದ ವಿವೋ X100 ಹಾಗೂ ವಿವೋ X100 ಪ್ರೊ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9300SoC ಪ್ರೊಸೆಸರ್‌ ಹಾಗೂ Zeiss ಕ್ಯಾಮೆರಾ ಲೆನ್ಸ್‌ಗಳನ್ನು ಒಳಗೊಂಡಿವೆ. ಹಾಗಾದರೆ ವಿವೋ X100 ಫೋನ್‌ ಸರಣಿಯ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ X100 ಮತ್ತು ವಿವೋ X100 ಪ್ರೊ ಲಾಂಚ್!..ಫೀಚರ್ಸ್‌ ಕೇಳಿ ಮಾರುಕಟ್ಟೆ ಶೇಕ್‌!

ವಿವೋ X100 ಫೀಚರ್ಸ್‌ ಹೀಗಿವೆ

ವಿವೋ X100 ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ ಅಧಿಕ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ AMOLED ಮಾದರಿಯ ಸ್ಕ್ರೀನ್‌ ಪಡೆದಿದೆ. ಜೊತೆಗೆ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9300SoC ಪ್ರೊಸೆಸರ್‌ ಕಾರ್ಯ ವೈಖರಿ ಪಡೆದುಕೊಂಡಿದ್ದು, 12GB + 256GB, 16GB + 256GB, 16GB + 512GB ಮತ್ತು 16GB + 1TB ಸ್ಟೋರೇಜ್‌ ಆಯ್ಕೆ ಪಡೆದಿದೆ.

ವಿವೋ X100 ಮತ್ತು ವಿವೋ X100 ಪ್ರೊ ಲಾಂಚ್!..ಫೀಚರ್ಸ್‌ ಕೇಳಿ ಮಾರುಕಟ್ಟೆ ಶೇಕ್‌!

ಹಾಗೆಯೇ ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಇದ್ದು, ಪ್ರಾಥಮಿಕ ಕ್ಯಾಮೆರಾ 50ಎಂಪಿ ಆಗಿದೆ. ಉಳಿದಂತೆ 50ಎಂಪಿ ಅಲ್ಟ್ರಾ-ವೈಡ್-ಆಂಗಲ್ ಯುನಿಟ್ ಮತ್ತು 64ಎಂಪಿ ಟೆಲಿಫೋಟೋ ಲೆನ್ಸ್ ಜೊತೆಗೆ 3x ಆಪ್ಟಿಕಲ್ ಮತ್ತು 100x ಡಿಗ್ಟಿಯಲ್ ಅನ್ನು ಒಳಗೊಂಡಿದೆ. ಇದರೊಂದಿಗೆ 32ಎಂಪಿ ಸೆಲ್ಫಿ ಸ್ನ್ಯಾಪರ್ ಇದೆ. ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ವಿವೋ X100 ಪ್ರೊ ಫೀಚರ್ಸ್‌ ಹೀಗಿವೆ

ವಿವೋ X100 ಪ್ರೊ ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, AMOLED ಮಾದರಿಯ ಸ್ಕ್ರೀನ್‌ ಪಡೆದಿದೆ. ಇದು 120Hz ರಿಫ್ರೆಶ್‌ ರೇಟ್‌ ಪಡೆದಿದ್ದು, ಇನ್‌-ಸ್ಕ್ರೀನ್‌ಫಿಂಗರ್‌ಫ್ರಿಂಟ್‌ ಸ್ಕ್ಯಾನರ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9300SoC ಪ್ರೊಸೆಸರ್‌ ಕಾರ್ಯ ವೈಖರಿ ಪಡೆದುಕೊಂಡಿದ್ದು, ಹೈ ಎಂಡ್ ಆಯ್ಕೆಯ ಮೂರು ಭಿನ್ನ ಸ್ಟೋರೇಜ್‌ ವೇರಿಯಂಟ್ ಪಡೆದಿದೆ.

ವಿವೋ X100 ಮತ್ತು ವಿವೋ X100 ಪ್ರೊ ಲಾಂಚ್!..ಫೀಚರ್ಸ್‌ ಕೇಳಿ ಮಾರುಕಟ್ಟೆ ಶೇಕ್‌!

ಅದೇ ರೀತಿ ಈ ಮೊಬೈಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಇದ್ದು, ಪ್ರಾಥಮಿಕ ಕ್ಯಾಮೆರಾ 50ಎಂಪಿ ಆಗಿದೆ. ಉಳಿದಂತೆ 50ಎಂಪಿ ಮತ್ತು 64ಎಂಪಿ ಟೆಲಿಫೋಟೋ ಲೆನ್ಸ್ ಜೊತೆಗೆ 3x ಆಪ್ಟಿಕಲ್ ಮತ್ತು 100x ಡಿಗ್ಟಿಯಲ್ ಇದ್ದು, 4K ವಿಡಿಯೋ ಸಪೋರ್ಟ್‌ ಕೂಡಾ ಒಳಗೊಂಡಿದೆ. ಇದರೊಂದಿಗೆ 32ಎಂಪಿ ಸೆಲ್ಫಿ ಸ್ನ್ಯಾಪರ್ ಇದೆ. ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಬೆಲೆ ಹಾಗೂ ಲಭ್ಯತೆ

ವಿವೋ X100 ಮತ್ತು ವಿವೋ X100 ಪ್ರೊ ಚೀನಾದಲ್ಲಿ ಲಾಂಚ್ ಆಗಿವೆ. ಈ ಫೋನ್‌ಗಳು ಸ್ಟಾರ್ ಟ್ರಯಲ್ ಬ್ಲೂ, ಸನ್‌ಸೆಟ್ ಆರೆಂಜ್, ವೈಟ್ ಮೂನ್‌ಲೈಟ್ ಮತ್ತು ಚೆಯ್ನೆ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಬ್ಯವಾಗಲಿವೆ.

ವಿವೋ X100 - 12GB + 256GB ವೇರಿಯಂಟ್ ದರವು CNY 3,999
ವಿವೋ X100 - 16GB + 256GB ವೇರಿಯಂಟ್ ದರವು CNY 4,299
ವಿವೋ X100 - 16GB + 512GB ವೇರಿಯಂಟ್ ದರವು CNY 4,999
ವಿವೋ X100 - 16GB + 1TB ವೇರಿಯಂಟ್ ದರವು CNY 5,099
ಅದೇ ರೀತಿ ವಿವೋ X100 ಪ್ರೊ ಫೋನಿನ ಆರಂಭಿಕ ಬೆಲೆಯು CNY 4,999 ಆಗಿದೆ.

Best Mobiles in India

English summary
Vivo X100 and X100 Pro With Dimensity 9300 Launched In China. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+