Home
ಸುದ್ದಿಜಾಲ

Smartphones: ಹೊಸ ಸ್ಮಾರ್ಟ್‌ಫೋನ್ ಕೊಂಡುಕೊಳ್ಳಲು ಮುಂದಾಗಿದ್ದೀರಾ? ಸ್ವಲ್ಪ ಇರಿ ಹೊಸ ವರ್ಷಕ್ಕೆ ಇವು ಲಾಂಚ್‌ ಆಗಲಿವೆ!

ವರ್ಷಾಂತ್ಯದ ಹಿನ್ನೆಲೆ ಸಾಕಷ್ಟು ಸ್ಮಾರ್ಟ್‌ಫೋನ್‌ಗಳಿಗೆ (Smartphones) ಪ್ರಮುಖ ಇ-ಕಾಮರ್ಸ್ ಸೈಟ್‌ ಮೂಲಕ ಭಾರೀ ಆಫರ್ ಘೋಷಣೆ ಮಾಡಲಾಗಿದೆ. ಪರಿಣಾಮ ಫೋನ್‌ಗಳ ಖರೀದಿ ಜೊತೆಗೆ ಹಣವನ್ನು ಸಹ ಉಳಿತಾಯ ಮಾಡಬಹುದಾಗಿದೆ. ಈ ಕಾರಣಕ್ಕೆ ಜನರು ಹೊಸ ಹೊಸ ಫೋನ್‌ಗಳಿಗೆ ಅಪ್‌ಗ್ರೇಡ್‌ ಆಗಲು ಮುಂದಾಗಿದ್ದಾರೆ.

ಹೌದು, ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳು ಭಿನ್ನ ಫೀಚರ್ಸ್‌ ಆಯ್ಕೆ ಪಡೆದಿದ್ದು, ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಫೋನ್‌ಗಳು ಬಳಕೆದಾರರಿಗೆ ಅಗತ್ಯ ಸೇವೆಗಳನ್ನು ನೀಡುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಮುಂದಿನ ವರ್ಷದ ಆರಂಭದಲ್ಲೇ ಕೆಲವು ಹೊಸ ಫೋನ್‌ಗಳು ಅನಾವರಣ ಆಗಲಿದ್ದು, ಈ ಫೋನ್‌ಗಳು ಲಾಂಚ್‌ ಆಗುವ ಮುನ್ನವೇ ಬಹಳಷ್ಟು ಸದ್ದು ಮಾಡುತ್ತಿವೆ. ನೀವೇನಾದ್ರೂ ಈ ವೇಳೆ ಹೊಸ ಫೋನ್‌ ಖರೀದಿ ಮಾಡಲು ಮುಂದಾದರೆ ಈ ಲೇಖನ ನಿಮಗೆ ಅನುಕೂಲ ಆಗಲಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳು ಮುಂದಿನ ವರ್ಷದ ಆರಂಭದಲ್ಲಿ ಲಾಂಚ್‌ ಆಗಲಿವೆ ಅನ್ನೋದನ್ನು ನೋಡೋಣ.

ಹೊಸ ಸ್ಮಾರ್ಟ್‌ಫೋನ್ ಕೊಂಡುಕೊಳ್ಳಲು ಮುಂದಾಗಿದ್ದೀರಾ?...

ಶಿಯೋಮಿ ರೆಡ್ಮಿ ನೋಟ್‌ 13 ಸರಣಿ: ಈ ಸ್ಮಾರ್ಟ್‌ಫೋನ್‌ಗಳನ್ನು (Xiaomi Redmi Note 13 series) ಜನವರಿ 4 ರಂದು ಬಿಡುಗಡೆ ಮಾಡುವುದಾಗಿ ಈಗಾಗಲೇ ಕಂಪೆನಿ ಮಾಹಿತಿ ನೀಡಿದೆ. ಈ ಫೋನ್‌ಗಳ ವಿಭಾಗದಲ್ಲಿ ಮೂರು ವೇರಿಯಂಟ್‌ ಆಯ್ಕೆ ಇದ್ದು, ಅದರಲ್ಲಿ ರೆಡ್ಮಿ ನೋಟ್ 13, ರೆಡ್ಮಿ ನೋಟ್ 13 ಪ್ರೊ, ಮತ್ತು ರೆಡ್ಮಿ ನೋಟ್ 13 ಪ್ರೊ ಪ್ಲಸ್‌ ಗಳು ಲಾಂಚ್‌ ಆಗಲಿವೆ. ಈ ಸ್ಮಾರ್ಟ್‌ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಅನ್ನು ಹೊಂದಲಿದೆ ಎನ್ನಲಾಗಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿರಲಿದೆ ಎಂದು ತಿಳಿದುಬಂದಿದೆ.

ಒನ್‌ಪ್ಲಸ್ 12 ಸರಣಿ: ಈ ಸ್ಮಾರ್ಟ್‌ಫೋನ್ (OnePlus 12 series) ಅನ್ನು ಭಾರತದಲ್ಲಿ ಜನವರಿ 23 ರಂದು ಅನಾವರಣ ಮಾಡಲಾಗುವುದು ಎಂದು ಕಂಪೆನಿ ಮಾಹಿತಿ ನೀಡಿದೆ. ಈ ಫೋನ್‌ಗಾಗಿ ಜನರು ಬಹಳ ಕಾತುರರಿಂದ ಕಾದು ಕುಳಿತಿದ್ದಾರೆ. ಇನ್ನು ಈ ಫೋನ್ 6.8 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಸ್ನಾಪ್‌ಡ್ರಾಗನ್‌ 8 ಜನ್‌ 3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 100W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಇದು ಬೆಂಬಲಿಸಲಿದ್ದು, ಇದೇ ವೇಳೆ ಒನ್‌ಪ್ಲಸ್‌ 12R (OnePlus 12R) ಸ್ಮಾರ್ಟ್‌ಫೋನ್‌ ಸಹ ಲಾಂಚ್‌ ಆಗಲಿದೆ ಎಂದು ತಿಳಿದುಬಂದಿದೆ.

ಹೊಸ ಸ್ಮಾರ್ಟ್‌ಫೋನ್ ಕೊಂಡುಕೊಳ್ಳಲು ಮುಂದಾಗಿದ್ದೀರಾ?...

ವಿವೋ X100 ಪ್ರೊ ಮತ್ತು X100 : ಈ ಫೋನ್‌ಗಳು (Vivo X100 Pro and X100) ಸಹ ಜನವರಿಯಲ್ಲಿ ಲಾಂಚ್‌ ಆಗಲಿವೆ ಎಂದು ಹೇಳಲಾಗಿದೆ. ಟೀಸರ್ ಪ್ರಕಾರ ವಿವೋ X100 ಸರಣಿ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್ ಅನ್ನು ಹೊಂದಿರಲಿವೆ ಎನ್ನಲಾಗಿದ್ದು, ಈ ಮೂಲಕ ಉತ್ತಮ ಕಾರ್ಯಕ್ಷಮತೆ ನೀಡುವ ಗುರಿ ಹೊಂದಿವೆ ಎನ್ನಲಾಗಿದೆ. ಜೊತೆಗೆ ಈಗಾಗಲೇ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈ ಫೋನ್‌ಗಳ ಬಹಳ ಸದ್ದು ಮಾಡುತ್ತಿವೆ.

ಹೊಸ ಸ್ಮಾರ್ಟ್‌ಫೋನ್ ಕೊಂಡುಕೊಳ್ಳಲು ಮುಂದಾಗಿದ್ದೀರಾ?...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24: ಈ ಸ್ಮಾರ್ಟ್‌ಫೋನ್ (Samsung Galaxy S24) ಅನ್ನು ಭಾರತದಲ್ಲಿ ಜನವರಿ 17 ರಂದು ಲಾಂಚ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಫೋನ್‌ನ ಬಿಡುಗಡೆಗಾಗಿ ಭಾರತದಲ್ಲಿ ಸ್ಯಾಮ್‌ಸಂಗ್‌ ಪ್ರಿಯರು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈ ಫೋನ್ ಪ್ರಮುಖ ಮಟ್ಟದ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಪ್ರಭಾವಶಾಲಿಯಾದ ಬರೋಬ್ಬರಿ 200 ಮೆಗಾಪಿಕ್ಸೆಲ್‌ ಕ್ಯಾಮೆರಾ ಸೆನ್ಸರ್ ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ.

Best Mobiles in India

English summary
Vivo X100 Pro and X100, Samsung Galaxy S24, Xiaomi Redmi Note 13 Series, OnePlus 12 Series Smartphones are making a lot of noise in the market even before their launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+