Home
ಸುದ್ದಿಜಾಲ

Vivo: ಆಫರ್ ಬೆಲೆಗೆ ವಿವೋ X100 ಸ್ಮಾರ್ಟ್‌ಫೋನ್‌! ಭರ್ಜರಿ ಫೀಚರ್ಸ್‌

ವಿವೋ (Vivo) ಸ್ಮಾರ್ಟ್‌ಫೋನ್‌ ಇದೀಗ ಭಾರತದಲ್ಲಿ ಹೆಚ್ಚಿಗೆ ಸೇಲ್‌ ಆಗುತ್ತಿವೆ. ಈ ನಡುವೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳಿಗೂ ಸಹ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಭರ್ಜರಿ ಆಫರ್ ನೀಡಲಾಗುತ್ತಿದ್ದು, ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ವಿವೋ X100 ಸ್ಮಾರ್ಟ್‌ಫೋನ್‌ (Vivo X100 smartphone) ಅನ್ನು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ಇದ್ದು, ಮೀಡಿಯಾ ಟೆಕ್‌ ಡೈಮೆನ್ಸಿಟಿ 9300 4nm ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

Vivo: ಆಫರ್ ಬೆಲೆಗೆ ವಿವೋ X100 ಸ್ಮಾರ್ಟ್‌ಫೋನ್‌! ಭರ್ಜರಿ ಫೀಚರ್ಸ್‌

ವಿವೋ X100 ಸ್ಮಾರ್ಟ್‌ಫೋನ್‌: ವಿವೋ X100 ಸ್ಮಾರ್ಟ್‌ಫೋನ್‌ನ 12GB +256GB ವೇರಿಯಂಟ್‌ 63,999 ರೂ.ಗಳ ಬೆಲೆಯಲ್ಲಿ ಅನಾವರಣ ಆಗಿದ್ದು, 16GB + 512GB ವೇರಿಯಂಟ್‌ ಫೋನ್‌ 69,999 ರೂ.ಗಳ ಬೆಲೆಯಲ್ಲಿ ಲಾಂಚ್‌ ಮಾಡಲಾಗಿತ್ತು. ಆದರೆ, ಈಗ ಈ ಫೋನ್‌ಗಳನ್ನು 60 ಸಾವಿರ ರೂ.ಗಳಿಗಿಂತ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಆಫರ್ ಈಗಾಗಲೇ ಲೈವ್ ಆಗಿದ್ದು, ಫೆಬ್ರವರಿ 15, 2024 ರವರೆಗೆ ಇರುತ್ತದೆ.

ವಿವೋ X100 ಸರಣಿಯು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಲಾಂಚ್‌ ಆಗಿದ್ದು, ಮೀಡಿಯಾಟೆಕ್‌ ಡೈಮೆನ್ಸಿಟಿ 9300 4nm ಪ್ರೊಸೆಸರ್‌ ಬಲ ಪಡೆದು ಮೊದಲ ಫೋನ್‌ಗಳಾಗಿವೆ. ಅಲ್ಲದೆ ಈ ಫೋನ್‌ 50 ಮೆಗಾಪಿಕ್ಸೆಲ್‌ ಸೋನಿ IMX920 VCS ಬಯೋನಿಕ್ ಪ್ರಾಥಮಿಕ ಸೆನ್ಸರ್‌ ಆಯ್ಕೆ ಪಡೆದಿದ್ದು, ಫ್ಲಿಪ್‌ಕಾರ್ಟ್ ಬ್ಯಾಂಕ್ ರಿಯಾಯಿತಿ ಸೇರಿದಂತೆ 60,000 ರೂ.ಗಳಿಗಿಂತ ಕಡಿಮೆ ಬೆಲೆಗೆ ಫೋನ್ ಲಭ್ಯ ಆಗುತ್ತಿದೆ.

ಆಯ್ದ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಫ್ಲಿಪ್‌ಕಾರ್ಟ್ (Flipkart) 5,000ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. ಅಲ್ಲದೆ ಯಾವುದೇ ವೆಚ್ಚದ ಇಎಮ್‌ಐ ಆಯ್ಕೆಯೂ ಸಹ ಇದ್ದು, ಎರಡೂ ಮಾದರಿಗಳಿಗೆ ಕ್ರಮವಾಗಿ 58,999 ರೂ.ಗಳು ಮತ್ತು 64,999 ರೂ.ಗಳ ಬೆಲೆಗೆ ಲಭ್ಯ ಇದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷ ಫೀಚರ್ಸ್‌ ಹೊಂದಿದೆ ಅನ್ನೋದನ್ನು ನೋಡೋಣ ಬನ್ನಿ.

Vivo: ಆಫರ್ ಬೆಲೆಗೆ ವಿವೋ X100 ಸ್ಮಾರ್ಟ್‌ಫೋನ್‌! ಭರ್ಜರಿ ಫೀಚರ್ಸ್‌

ವಿವೋ X100 ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 6.78 ಇಂಚಿನ LTPO ಅಮೋಲೆಡ್‌ ಡಿಸ್‌ಪ್ಲೇ ಜೊತೆಗೆ 1.5K ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 20:9 ಆಕಾರ ಅನುಪಾತ, HDR10+, 120Hz ವೇರಿಯೇಬಲ್ ರಿಫ್ರೆಶ್ ರೇಟ್, 3000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 2160Hz PWM ಡೈವಿಂಗ್‌ ಫೀಚರ್ಸ್‌ ಪಡೆದಿದೆ.

ಜೊತೆಗೆ ಈ ಫೋನ್‌ ಮೊದಲೇ ತಿಳಿಸಿದಂತೆ ಮೀಡಿಯಾಟೆಕ್‌ ಡೈಮೆನ್ಸಿಟಿ 9300 4nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇಮ್ಮಾರ್ಟಲಿಸ್-G720 GPU ಬಲ ಪಡೆದುಕೊಂಡಿದೆ. ಇದರೊಂದಿಗೆ 12GB/16GB LPDDR5X/LPDDR5T RAM ಮತ್ತು 256GB/512GB/1TB UFS 4.0 ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಆಂಡ್ರಾಯ್ಡ್‌ 14-ಆಧಾರಿತ ಫನ್‌ಟಚ್‌ ಓಎಸ್‌ 14 ನಲ್ಲಿ ರನ್‌ ಆಗಲಿದೆ.

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 50 ಮೆಗಾಪಿಕ್ಸೆಲ್‌ ಸೋನಿ IMX920 VCS ಬಯೋನಿಕ್ ಪ್ರೈಮರಿ ಸೆನ್ಸಾರ್ ಜೊತೆಗೆ f/1.57 ಅಪರ್ಚರ್, OIS ಮತ್ತು ಎಲ್‌ಇಡಿ ಫ್ಲ್ಯಾಶ್‌, f/2.0 ಅಪರ್ಚರ್ ಜೊತೆಗೆ 50 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು f/2 ನೊಂದಿಗೆ 64 ಮೆಗಾಪಿಕ್ಸೆಲ್‌ ಟೆಲಿಫೋಟೋ ಕ್ಯಾಮೆರಾ ಆಯ್ಕೆ ಪಡೆದಿದೆ. ಹಾಗೆಯೇ ಓಐಎಸ್‌, 100x ಡಿಜಿಟಲ್ ಜೂಮ್, ಮತ್ತು ಟೆಲಿಫೋಟೋ ಮ್ಯಾಕ್ರೋ ಸೆನ್ಸರ್‌ ಉತ್ತಮ ಅನುಭವ ನೀಡಲಿವೆ. ಸೆಲ್ಫಿ ಕ್ಯಾಮೆರಾಕ್ಕಾಗಿ 32 ಮೆಗಾಪಿಕ್ಸೆಲ್‌ ಸೆನ್ಸರ್‌ ನೀಡಲಾಗಿದೆ.

Vivo: ಆಫರ್ ಬೆಲೆಗೆ ವಿವೋ X100 ಸ್ಮಾರ್ಟ್‌ಫೋನ್‌! ಭರ್ಜರಿ ಫೀಚರ್ಸ್‌

ಹಾಗೆಯೇ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದ್ದು, 120W ಅಲ್ಟ್ರಾ-ಫಾಸ್ಟ್ ಫ್ಲಾಶ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ 5G SA/NSA, ಡ್ಯುಯಲ್ 4G VoLTE, ವೈ-ಫೈ ಆವೃತ್ತಿ 7, ಬ್ಲೂಟೂತ್ ಆವೃತ್ತಿ 5.4, ಜಿಪಿಎಸ್‌, ಎನ್‌ಎಫ್‌ಸಿ, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲ ಪಡೆದಿದೆ.

Best Mobiles in India

English summary
Vivo X100 smartphone can be bought at an offer price. This smartphone is available in a choice of two storage variants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+