Home
ಸುದ್ದಿಜಾಲ

Vivo: ವಿವೋ X100 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌! ಬೆಲೆ ಮಾಹಿತಿ ಲೀಕ್‌

ವಿವೋ ಸ್ಮಾರ್ಟ್‌ಫೋನ್‌ಗಳು (Vivo Smartphones) ಮಾರುಕಟ್ಟೆಯಲ್ಲಿ ಸುಂಟರಗಾಳಿಯನ್ನೇ ಎಬ್ಬಿಸುತ್ತವೆ. ಅದರಂತೆ ಈಗ ವಿವೋದ ಬಹು ನಿರೀಕ್ಷಿತ ವಿವೋ X100 ಅಲ್ಟ್ರಾ (Vivo X100 Ultra) ಸ್ಮಾರ್ಟ್‌ಫೋನ್‌ಗೆ ದಿನಾಂಕ ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಸರಣಿಯಲ್ಲಿ ವಿವೋ X100 ಅಲ್ಟ್ರಾ, ವಿವೊ X100s, ಮತ್ತು ವಿವೊ X100 ಪ್ರೊ (Vivo X100 Ultra, Vivo X100s, and Vivo X100 Pro) ಸೇರಿವೆ.

ಹೌದು, ಬಹು ನಿರೀಕ್ಷಿತ ವಿವೋ X100 ಅಲ್ಟ್ರಾ ಸ್ಮಾರ್ಟ್‌ಫೋನ್‌ಗೆ ದಿನಾಂಕ ದೃಢವಾಗಿದ್ದು, ಈ ಫೋನ್ ಶಕ್ತಿಶಾಲಿ ಕ್ಯಾಮೆರಾ ರಚನೆ ಹೊಂದಿರಲಿದೆ. ಹಾಗೆಯೇ ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಏನಿರಬಹುದು?, ಯಾವಾಗ ಈ ಫೋನ್‌ ಲಾಂಚ್‌ ಆಗಲಿದೆ?, ಬೆಲೆ ಎಷ್ಟಿರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ವಿವೋ X100 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌!

ವಿವೋ X100 ಅಲ್ಟ್ರಾ ಸ್ಮಾರ್ಟ್‌ಫೋನ್‌: ಈ ಸ್ಮಾರ್ಟ್‌ಫೋನ್‌ ಅನ್ನು ಮೇ 13 ರಂದು ಅಧಿಕೃತವಾಗಿ ಪ್ರಾರಂಭಿಸಲಾಗುವುದು ಎಂದು ತಿಳಿದುಬಂದಿದೆ. ಈ ಸರಣಿಯಲ್ಲಿ ವಿವೋ X100 ಅಲ್ಟ್ರಾ, ವಿವೋ X100s ಮತ್ತು ವಿವೋ X100 ಪ್ರೊ ಫೋನ್‌ಗಳು ಲಾಂಚ್‌ ಆಗಲಿವೆ ಎನ್ನಲಾಗಿದೆ. ಅಲ್ಟ್ರಾ ವೇರಿಯಂಟ್ ಬೆಲೆ CNY 6,699 ರಿಂದ ಪ್ರಾರಂಭವಾಗಲಿದೆ ಎನ್ನಲಾಗಿದ್ದು, ಇದು 12GB RAM ಮತ್ತು 256GB ಸ್ಟೋರೇಜ್‌ ಹೊಂದಿರಲಿದೆ ಎನ್ನಲಾಗಿದೆ.

ಇದರ ಜೊತೆಗೆ 16GB RAM ಮತ್ತು 512GB ಸ್ಟೋರೇಜ್‌ ಆಯ್ಕೆಯ ಫೋನ್‌ ಸಹ ಲಭ್ಯ ಇದ್ದು, CNY 7,499 ಬೆಲೆ ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಭಾರತದಲ್ಲಿ ಇದರ ಬೆಲೆ ಸರಿಸುಮಾರು 86,700 ರೂ. ಗಳಾಗಿರಲಿದೆ ಎನ್ನಲಾಗಿದೆ. ಇನ್ನು 16GB RAM ಮತ್ತು 1TB ಸ್ಟೋರೇಜ್ ಹೊಂದಿರುವ ಟಾಪ್-ಆಫ್-ಲೈನ್ ಮಾಡೆಲ್ ಸುಮಾರು CNY 8,499 ಆಗಿರಬಹುದು, ಅಂದರೆ ಸುಮಾರು 98,300 ರೂ.ಗಳಲ್ಲಿ ಇದು ಲಭ್ಯ ಇರಬಹುದು ಎನ್ನಲಾಗಿದೆ.

ವಿವೋ X100 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌!

ವಿವೋ X100s ಬೆಲೆ ಬಗ್ಗೆ ಹೇಳುವುದಾದರೆ ಈ ಫೋನ್ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆವೃತ್ತಿಗೆ CNY 3,999 ಬೆಲೆ ನಿಗದಿ ಮಾಡಲಾಗಿದ್ದು, 16/256GB ಗಾಗಿ, CNY 4,699 ಬೆಲೆ ಇರಲಿದೆ ಎನ್ನಲಾಗಿದೆ. ಇದರ ಜೊತೆಗೆ ವಿವೋ X100s ಪ್ರೊ ನ ಸಾಮಾನ್ಯ ವೇರಿಯಂಟ್‌ನ ಬೆಲೆ ಸುಮಾರು CNY 4,999 ಆಗಿರಬಹುದು ಎನ್ನಲಾಗಿದ್ದು, 12/256GB, CNY 5,599 ಬೆಲೆ ಹೊಂದಿರಲಿದೆ ಎಂದು ಲೀಕ್‌ ಮಾಹಿತಿಯಲ್ಲಿ ಉಲ್ಲೇಖ ಮಡಲಾಗಿದೆ.

ಈ ಫೋನ್‌ಗಳು ಕೆಲವು ವಿಶೇಷ ಫೀಚರ್ಸ್‌ ಅನ್ನು ಪಡೆದಿರಲಿವೆ ಎನ್ನಲಾಗಿದ್ದು, ವಿಶೇಷವಾಗಿ ಅಲ್ಟ್ರಾ 200 ಮೆಗಾಪಿಕ್ಸೆಲ್‌ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದರೊಂದಿಗೆ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ರನ್ ಆಗುವ ನಿರೀಕ್ಷೆಯಿದ್ದು, ಇದು ಶಕ್ತಿಯುತ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ. ಅಲ್ಲದೆ ಈ ಡಿವೈಸ್‌ 6.78 ಇಂಚಿನ 1.5K 8T LTPO OLED ಫ್ಲಾಟ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎನ್ನುವ ಮಾತುಗಳು ಇವೆ.

ವಿವೋ X100 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌!

ಕ್ಯಾಮೆರಾ ರಚನೆ ವಿಷಯದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಗಮನಿಸುವುದಾದರೆ ಇದು 200 ಮೆಗಾಪಿಕ್ಸೆಲ್ ಝೈಸ್ ಎಪಿಓ ಸೂಪರ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗಿದ್ದು, ಇದು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಉದ್ಯಮದ ಅತಿದೊಡ್ಡ ಟೆಲಿಫೋಟೋ ಲೆನ್ಸ್ ಎಂದು ಹೆಸರು ಪಡೆದಿದೆ. ಇದರ ಜೊತೆಗೆ 50 ಮೆಗಾಪಿಕ್ಸೆಲ್‌ LYT-900 ಮುಖ್ಯ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಲೆನ್ಸ್ ಅನ್ನು ZEISS ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

Best Mobiles in India

English summary
The date is firm for the much-anticipated Vivo X100 Ultra smartphone, which will feature a powerful camera setup. It is also known that this phone will work on Qualcomm Snapdragon 8 Gen 3 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+