Vivo: ಶೀಘ್ರದಲ್ಲೇ ವಿವೋ X100 ಅಲ್ಟ್ರಾ, ವಿವೋ S19 ಪ್ರೊ ಸ್ಮಾರ್ಟ್‌ಫೋನ್‌ಗಳು ಲಾಂಚ್!
ವಿವೋ ಸ್ಮಾರ್ಟ್‌ಫೋನ್‌ಗಳಿಗೆ (For Vivo smartphones) ಜಾಗತಿಕವಾಗಿ ದೊಡ್ಡ ಬೇಡಿಕೆ ಇದೆ. ಈ ಫೋನ್‌ಗಳು ವಿಶೇಷ ಕ್ಯಾಮೆರಾ ಫೀಚರ್ಸ್ ನೊಂದಿಗೆ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತವೆ. ಈ ನಡುವೆ ಶೀಘ್ರದಲ್ಲೇ ವಿವೋ X100 ಅಲ್ಟ್ರಾ, ವಿವೋ S19 ಪ್ರೊ ಸ್ಮಾರ್ಟ್‌ಫೋನ್‌ಗಳು (Vivo X100 Ultra, Vivo S19 Pro Smartphone) ಲಾಂಚ್ ಆಗಲಿವೆ ಎಂದು ತಿಳಿದುಬಂದಿದೆ.
ಹೌದು, ವಿವೋ X100 ಅಲ್ಟ್ರಾ ಫ್ಲ್ಯಾಗ್‌ಶಿಪ್ ಫೋನ್ ಚೀನಾದಲ್ಲಿ ಮೇ ತಿಂಗಳಲ್ಲಿ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ. ಅದರಂತೆ ಚೀನಾದಲ್ಲಿನ 3C ಪ್ರಾಧಿಕಾರವು ಡಿವೈಸ್ ಅನ್ನು ಬಿಡುಗಡೆ ಮಾಡುವ ಮೊದಲು ಅನುಮೋದಿಸಿದೆ ಎಂದು ತಿಳಿದುಬಂದಿದೆ. ಹಾಗೆಯೇ ವಿವೋ S19 ಪ್ರೊ 3C ಯ ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದ್ದು, ಇದೂ ಸಹ ಕೆಲವೇ ದಿನಗಳಲ್ಲಿ ಮಾರುಟ್ಟೆಗೆ ಎಂಟ್ರಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ, ಈ ಫೋನ್‌ಗಳ ಲೀಕ್ ಫೀಚರ್ಸ್ ಬಗ್ಗೆ ತಿಳಿಯೋಣ ಬನ್ನಿ.

ವಿವೋ X100 ಅಲ್ಟ್ರಾ: ವರದಿಗಳ ಪ್ರಕಾರ ಮುಂಬರುವ ವಿವೋ X100 ಅಲ್ಟ್ರಾ ಚೀನೀ ಮಾರುಕಟ್ಟೆಗೆ ಎಂಟ್ರಿ ನೀಡಲಿದ್ದು, V2366GA ಮತ್ತು V2366HA ಮಾದರಿ ಸಂಖ್ಯೆಗಳನ್ನು ಹೊಂದಿದೆ. ಹಾಗೆಯೇ GA ರೂಪಾಂತರವು 5G ಫೋನ್ ಆಗಿದೆ, ಆದರೆ HA ಮಾದರಿಯು ಉಪಗ್ರಹ ಸಂಪರ್ಕವನ್ನು ಬೆಂಬಲಿಸುತ್ತದೆ ಎಂದು ತಿಳಿದುಬಂದಿದೆ. 3C ಪ್ರಾಧಿಕಾರವು X100 ಅಲ್ಟ್ರಾದ 5G ರೂಪಾಂತರವನ್ನು ಅನುಮೋದಿಸಿದ್ದು, ಈ ಫೋನ್ 80W ಚಾರ್ಜಿಂಗ್‌ನೊಂದಿಗೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಜೊತೆಗೆ ಉಪಗ್ರಹ ಸಂಪರ್ಕ ವೇರಿಯಂಟ್ ಮುಂಬರುವ ದಿನಗಳಲ್ಲಿ 3C ಪ್ರಮಾಣೀಕರಣವನ್ನು ಸಹ ಪಡೆಯಬಹುದು ಎಂದು ತಿಳಿದುಬಂದಿದೆ.
ಹಾಗೆಯೇ ಈ ವಿವೋ X100 ಅಲ್ಟ್ರಾ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, 6.78 ಇಂಚಿನ ಸ್ಯಾಮ್‌ಸಂಗ್ ಅಮೋಲೆಡ್ E7 2K 120Hz ಡಿಸ್‌ಪ್ಲೇ ಯನ್ನು ಹೊಂದಿರುತ್ತದೆ ಎಂದು ವರದಿಗಳು ಹೇಳಿವೆ. ಜೊತೆಗೆ ಫೋನ್‌ನ ರಿಯರ್ ಕ್ಯಾಮೆರಾ ವಿಭಾಗದಲ್ಲಿ 50 ಮೆಗಾಪಿಕ್ಸೆಲ್ LYT-900 ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್, 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು ಆಪ್ಟಿಕಲ್ 4 ಅನ್ನು ಬೆಂಬಲಿಸುವ 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಈ ವಿವೋ X100 ಅಲ್ಟ್ರಾ ಸ್ಮಾರ್ಟ್‌ಫೋನ್ ವಿವೋ X100s ಮತ್ತು X100s ಪ್ರೊ ಜೊತೆಗೆ ಮೇ ತಿಂಗಳಲ್ಲಿ ಚೀನಾದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಡಿವೈಸ್ ಅನ್ನು X100 ಅಲ್ಟ್ರಾ ಬದಲಿಗೆ ವಿವೋ X100s ಅಲ್ಟ್ರಾ ಎಂದು ಕರೆಯಲಾಗುವುದು ಎಂದು ಹೇಳಲಾಗುತ್ತಿದೆ. ಈ ಫೋನ್ 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.
ವಿವೋ S19 ಸರಣಿ: ಈ ನಡುವೆ V2364A ಮತ್ತು V2362A ಮಾದರಿ ಸಂಖ್ಯೆಗಳು ವಿವೋ ಫೋನ್‌ಗಳ 3C (Vivo S19 series) ಅನುಮೋದನೆಯನ್ನು ಖಚಿತಪಡಿಸುತ್ತದೆ. ವರದಿಗಳ ಪ್ರಕಾರ, ಚೀನಾ ಈ ಡಿವೈಸ್‌ಗಳನ್ನು ಕ್ರಮವಾಗಿ ವಿವೋ S19 ಮತ್ತು ವಿವೋ S19 ಪ್ರೊ ಎಂದು ಕರೆಯಲಿದೆ. ಪ್ರಸ್ತುತ, ಎರಡೂ ಫೋನ್‌ಗಳ ಫೀಚರ್ಸ್‌ಗಳ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲ. ಅದಾಗ್ಯೂ ವಿವೋ S19e ಜೊತೆಗೆ S19 ಮತ್ತು S19 ಪ್ರೊ ಅನ್ನು ಜೂನ್‌ನಲ್ಲಿ ಲಾಂಚ್ ಮಾಡಲಾಗುವುದು ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ.

ವಿವೋ V30e : ಈ ನಡುವೆ ವಿವೋ V30e (Vivo V30e) ಸ್ಮಾರ್ಟ್‌ಫೋನ್ ಅನ್ನು ಮೇ 2 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.ಕಳೆದ ವಾರವಷ್ಟೇ, ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ವಿವೋ T3X ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಮುಂಬರುವ ಸ್ಮಾರ್ಟ್‌ಫೋನ್, ವಿವೋ V30e, ವಿವೋ V30 ಮತ್ತು ವಿವೋ V30 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುವ ಅಸ್ತಿತ್ವದಲ್ಲಿರುವ V-ಸರಣಿ ಶ್ರೇಣಿಯನ್ನು ಸೇರುತ್ತದೆ ಎಂದು ತಿಳಿದುಬಂದಿದೆ.


Click it and Unblock the Notifications








