ಇಂದು Vivo X200 ಸರಣಿ ಲಾಂಚ್; 200MP ಕ್ಯಾಮೆರಾ.. 32MP ಸೆಲ್ಫಿ ಕ್ಯಾಮೆರಾ.. ಬೆಲೆ ಇಷ್ಟೊಂದಾ?
ವಿವೋ ಸಂಸ್ಥೆಯು ಭಾರತದಲ್ಲಿ ಇಂದು (ಡಿಸೆಂಬರ್ 12) ಹೊಸ ವಿವೋ X200 (Vivo X200) ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ ವಿವೋ X200 (Vivo X200) ಮತ್ತು ವಿವೋ X200 ಪ್ರೊ (Vivo X200 Pro) ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಕಂಪನಿಯು ಇವುಗಳ ಜೊತೆಗೆ ವಿವೋ X200 ಪ್ರೊ ಮಿನಿ (Vivo X200 Pro Mini) ಫೋನನ್ನು ಪರಿಚಯಿಸುವ ಸಾಧ್ಯತೆಯಿದೆ. ಈ ಫೋನ್‌ಗಳ ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ವಿವೋ X200 ಸರಣಿಯು ವಿವೋ X100 ಸರಣಿಯ ಉತ್ತರಾಧಿಕಾರಿಯಾಗಿ ಬಿಡುಗಡೆಯಾಗಲಿದೆ. ಕಂಪನಿಯು, ಇಂದು ಮಧ್ಯಾಹ್ನ 12 ಗಂಟೆಗೆ ವಿವೋ X200 ಸರಣಿಯ ಫೋನ್‌ಗಳನ್ನು ರಿಲೀಸ್ ಮಾಡಲಿದೆ. ಈ ಸರಣಿಯು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ವಿವೋ X200 ಪ್ರೊ ಮೊಬೈಲ್ 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತವೆ. ಜೊತೆಗೆ 512GB ಸ್ಟೋರೇಜ್, 6.78 ಇಂಚಿನ ಡಿಸ್ಪ್ಲೇ, 6000mAh ಬ್ಯಾಟರಿ ಲಭ್ಯವಿರುತ್ತದೆ.

ವಿವೋ X200 ಫೋನಿನ ಬೆಲೆ
12GB + 256GB ಸ್ಟೋರೇಜ್ ಬೆಲೆ = 65,999 ರೂ.
16GB + 512GB ಸ್ಟೋರೇಜ್ ಬೆಲೆ = 71,999 ರೂ.
ವಿವೋ X200 ಪ್ರೊ ಫೋನಿನ ಬೆಲೆ
16GB + 512GB ಸ್ಟೋರೇಜ್ ಬೆಲೆ = 94,999 ರೂ.
ವಿವೋ X200 ಸರಣಿಯ ಫೋನ್‌ಗಳು ಬಿಡುಗಡೆಯ ಬಳಿಕ ಅಮೆಜಾನ್, ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮೂಲಕ ಮಾರಾಟವಾಗಲಿವೆ. ನೀವು, ವಿವೋ X200 ಫೋನನ್ನು ಕಾಸ್ಮೊಸ್ ಬ್ಲಾಕ್ ಮತ್ತು ನ್ಯಾಚುರಲ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು. ವಿವೋ X200 ಪ್ರೊ ಸ್ಮಾರ್ಟ್‌ಫೋನ್ ಟೈಟಾನಿಯಂ ಗ್ರೇ ಮತ್ತು ಕಾಸ್ಮೊಸ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.
ವಿವೋ X200 ಸರಣಿ ಬಿಡುಗಡೆ ಸಮಾರಂಭವನ್ನು ಕಂಪನಿಯ ಯೂಟ್ಯೂಬ್ ಚಾನೆಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ.
ವಿವೋ X200 ಸರಣಿಯ ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿರಲಿದೆ
ವಿವೋ X200 ಮೊಬೈಲ್ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಆದರೆ, ವಿವೋ X200 ಪ್ರೊ ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 120Hz ಡೈನಾಮಿಕ್ ರಿಫ್ರೆಶ್ ದರ ಮತ್ತು 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿರುತ್ತದೆ. ವಿವೋ X200 ಪ್ರೊ ಮೊಬೈಲ್ LTPO ತಂತ್ರಜ್ಞಾನ ಮತ್ತು 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ವಿವೋ X200 ಮೊಬೈಲ್ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ.
ಮೀಡಿಯಾಟೆಕ್ ಪ್ರೊಸೆಸರ್
ವಿವೋ X200 ಮತ್ತು ವಿವೋ X200 ಪ್ರೊ ಎರಡು ಮೊಬೈಲ್‌ಗಳು ಮೀಡಿಯಾಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿವೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ FunTouch ಓಎಸ್ 15 ನಲ್ಲಿ ಕೆಲಸ ನಿರ್ವಹಿಸುತ್ತವೆ. ಇವು 16GB RAM ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿವೆ.
200 ಮೆಗಾಪಿಕ್ಸೆಲ್ ಕ್ಯಾಮೆರಾ
ವಿವೋ X200 ಸ್ಮಾರ್ಟ್‌ಫೋನ್ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ, 50 ಮೆಗಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಹೊಂದಿದೆ. ವಿವೋ X200 ಪ್ರೊ ಸ್ಮಾರ್ಟ್‌ಫೋನ್ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 200 ಮೆಗಾಪಿಕ್ಸೆಲ್ Zeiss APO ಟೆಲಿಫೋಟೋ ಲೆನ್ಸ್ ಹೊಂದಿದೆ. ಎರಡೂ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
6000mAh ದೊಡ್ಡ ಬ್ಯಾಟರಿ
ವಿವೋ X200 ಫೋನ್ 5800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆದರೆ ವಿವೋ X200 ಪ್ರೊ ಫೋನಿನಲ್ಲಿ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.


Click it and Unblock the Notifications