Home
ಸುದ್ದಿಜಾಲ

Vivo: ಈ ಸೌಲಭ್ಯ ಪಡೆಯುವ ಮೊದಲ ಫೋನ್‌ ವಿವೋ X200, X200 ಪ್ರೊ ಆಗಿರಲಿವೆ!

ವಿವೋ ಸ್ಮಾರ್ಟ್‌ಫೋನ್‌ಗಳಿಗೆ (Vivo Smartphone) ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಈ ನಡುವೆ ವಿವೋ ಕಡಿಮೆ ಅಂತರದಲ್ಲಿಯೇ ಹೊಸ ಹೊಸ ಫೋನ್‌ಗಳನ್ನು ಲಾಂಚ್‌ ಮಾಡಿಕೊಂಡು ಬರುತ್ತಿದ್ದು, ಈ ನಡುವೆ ವಿವೋ X200, X200 ಪ್ರೊ (Vivo X200, X200 Pro) ಬಗ್ಗೆ ಅಚ್ಚರಿ ಮಾಹಿತಿ ತಿಳಿದುಬಂದಿದೆ.

ಹೌದು, ವಿವೋ X200, X200 ಪ್ರೊ ಸ್ಮಾರ್ಟ್‌ಫೋನ್‌ ಬಗ್ಗೆ ಕೆಲವು ಮಾಹಿತಿ ಈಗಾಗಲೇ ಲೀಕ್ ಆಗಿವೆ. ಅಕ್ಟೋಬರ್ 2023 ರಲ್ಲಿ ಲಾಂಚ್ ಆದ ವಿವೋ X100 ಮತ್ತು X100 ಪ್ರೊ ಫೋನ್‌ ಸಹ ವಿಶೇಷ ಪ್ರಯೋಜನ ಪಡೆಯುವ ಮೂಲಕ ಸದ್ದು ಮಾಡಿದ್ದವು. ಅದರಂತೆ ಈ ಫೋನ್‌ಗಳು ಸಹ ಈ ಹೊಸ ಸೌಲಭ್ಯ ಪಡೆಯುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿವೆ. ಹಾಗಿದ್ರೆ, ಏನಿದು ಹೊಸ ಸೌಲಭ್ಯ?, ಈ ಫೋನ್‌ನ ಇತರೆ ಫೀಚರ್ಸ್‌ಗಳು ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಈ ಸೌಲಭ್ಯ ಪಡೆಯುವ ಮೊದಲ ಫೋನ್‌ ವಿವೋ X200, X200 ಪ್ರೊ ಆಗಿರಲಿವೆ!

ವಿವೋ X200, X200 ಪ್ರೊ ಸ್ಮಾರ್ಟ್‌ಫೋನ್‌: ಅಕ್ಟೋಬರ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 4 ಪ್ರೊಸೆಸರ್‌ ಅನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆದರೆ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್ ಅನ್ನು ಅನಾವರಣಗೊಳಿಸಲು ಎಲ್ಲಾ ತಯಾರಿ ಆಗಿದೆ. ಇಂದು, ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಡೈಮೆನ್ಸಿಟಿ 9400-ಚಾಲಿತ ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸುವ ಮೊದಲ ಬ್ರ್ಯಾಂಡ್ ವಿವೋ ಎಂದು ಬಹಿರಂಗಪಡಿಸಿದೆ.

ಲೀಕ್‌ ಆದ ಮಾಹಿತಿ ಪ್ರಕಾರ, MT6991 ಮಾದರಿ ಸಂಖ್ಯೆಯೊಂದಿಗೆ ಗುರುತಿಸಲಾದ ಡೈಮೆನ್ಸಿಟಿ 9400 ಪ್ರಭಾವಶಾಲಿ ಶಕ್ತಿಯ ದಕ್ಷತೆಯನ್ನು ನೀಡುತ್ತದೆ. ಇದು TSMC ಯ ಎರಡನೇ ತಲೆಮಾರಿನ N3 ಪ್ರಕ್ರಿಯೆಯನ್ನು ಬಳಸುತ್ತದೆ ಮತ್ತು 1 x ಕಾರ್ಟೆಕ್ಸ್-X5 ಸೂಪರ್ ಕೋರ್, 3 x ಕಾರ್ಟೆಕ್ಸ್-X4 ಕೋರ್‌ಗಳು ಮತ್ತು 4 x ಕಾರ್ಟೆಕ್ಸ್-A7 ಕೋರ್‌ಗಳ CPU ಕಾನ್ಫಿಗರೇಶನ್ ಅನ್ನು ಹೊಂದಿದೆ.

ಪ್ರಸ್ತುತ, ಕಾರ್ಟೆಕ್ಸ್-X5 ಸೂಪರ್ ಕೋರ್ ಸರಿಸುಮಾರು 3.4GHz ನಲ್ಲಿ ಚಲಿಸುತ್ತದೆ. ಆದರೆ, ಅಂತಿಮ ಆವರ್ತನವು ಇತರ ಹೈ-ಫ್ರೀಕ್ವೆನ್ಸಿ ಚಿಪ್‌ಗಳೊಂದಿಗೆ ಸ್ಪರ್ಧಿಸಲು ಹೆಚ್ಚಾಗಬಹುದು. ಅಂತಿಮ ಪ್ರದರ್ಶನವನ್ನು ಅಕ್ಟೋಬರ್‌ನಲ್ಲಿ ಬಹಿರಂಗಪಡಿಸಲಾಗುತ್ತದೆ. TSMC ಪ್ರಕಾರ, ಅವರ 3nm ಪ್ರಕ್ರಿಯೆ ತಂತ್ರಜ್ಞಾನವು 5nm ಪ್ರಕ್ರಿಯೆ ತಂತ್ರಜ್ಞಾನದ ನಂತರ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಇದು ಉದ್ಯಮದ ಅತ್ಯಾಧುನಿಕ ಪ್ರಕ್ರಿಯೆ ತಂತ್ರಜ್ಞಾನವಾಗಿ ನಿಂತಿದೆ. ಉನ್ನತ PPA (ಶಕ್ತಿ, ಕಾರ್ಯಕ್ಷಮತೆ ಮತ್ತು ಪ್ರದೇಶ) ಮತ್ತು ಟ್ರಾನ್ಸಿಸ್ಟರ್ ತಂತ್ರಜ್ಞಾನವನ್ನು ಈ ಪ್ರೊಸೆಸರ್‌ ಒಳಗೊಂಡಿದೆ.

ಈ ಸೌಲಭ್ಯ ಪಡೆಯುವ ಮೊದಲ ಫೋನ್‌ ವಿವೋ X200, X200 ಪ್ರೊ ಆಗಿರಲಿವೆ!

ಇನ್ನು ಅಕ್ಟೋಬರ್ 2023 ರಲ್ಲಿ ಲಾಂಚ್ ಮಾಡಲಾದ ವಿವೋ X100 ಮತ್ತು X100 ಪ್ರೊ ಫೋನ್‌ಗಳೂ ಡೈಮೆನ್ಸಿಟಿ 9300 ಚಿಪ್‌ಸೆಟ್‌ನಿಂದ ನಡೆಸಲ್ಪಡುವ ವಿಶ್ವದ ಮೊದಲ ಫೋನ್‌ ಆಗಿ ಗುರುತಿಸಿಕೊಂಡಿವೆ. ಆದ್ದರಿಂದ, ವಿವೋ X200 ಮತ್ತು X200 ಪ್ರೊ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಳ್ಳುವ ಮೊದಲ ಸ್ಮಾರ್ಟ್‌ಫೋನ್‌ಗಳಾಗಬಹುದು ಎಂದು ಊಹಿಸಲಾಗಿದೆ. ಈ ಮೂಲಕ ನಂಬರ್‌ ಒನ್‌ ಸ್ಥಾನಕ್ಕೆ ಏರಲು ವಿವೋ ಎಲ್ಲಾ ಪ್ರಯತ್ನ ಮಾಡುತ್ತಿದೆ.

ಹಾಗೆಯೇ ಡೈಮೆನ್ಸಿಟಿ 9400 ಅನ್ನು ಒಳಗೊಂಡಿರುವ ಒಪ್ಪೋ ಫೈಂಡ್‌ X8 ಅನ್ನು ಅಕ್ಟೋಬರ್‌ನಲ್ಲಿ ಲಾಂಚ್‌ ಮಾಡಲಾಗುತ್ತದೆ ಎಂದು ಇತ್ತೀಚಿನ ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಅದರಂತೆ ವಿವೋ X200 ಹಾಗೂ ಫೈಂಡ್ X8 ಸ್ಮಾರ್ಟ್‌ಫೋನ್‌ಗಳು ಶಿಯೋಮಿ 15 ನೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ. ಈ ಫೋನ್ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಸ್ನಾಪ್‌ಡ್ರಾಗನ್ 8 ಜನ್ 4 ಫೋನ್ ಆಗಿ ಕಾಣಿಸಿಕೊಳ್ಳಲಿದೆ. ಪ್ರಸ್ತುತ ವಿವೋ X200 ಸರಣಿಯ ಫೀಚರ್ಸ್‌ಗಳ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲ. ಅದಾಗ್ಯೂ ಈ ಫೋನ್‌ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅಗತ್ಯ ಎಂದರೆ ನೀವು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
Vivo X200, X200 Pro smartphone has already been leaked. according to leak information these phones may be have Dimensity 940 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+