Home
ಸುದ್ದಿಜಾಲ

ವಿವೋ X50 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ವಿವೋ ಕಂಪೆನಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ವಿವೋ X50 ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಇದೀಗ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ ಆಗಿದೆ. ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್ 765G SoC ‌ನಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್‌ಫೋನ್‌

ಹೌದು, ವಿವೋ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ವಿವೋ X50 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 5,000ರೂ. ಕಡಿತವಾಗಿದೆ. ಈ ಪೋನಿನ 8GB RAM + 128GB ವೇರಿಯಂಟ್‌ ದರದವು 34,990ರೂ. ಆಗಿತ್ತು. ಆದರೆ ಬೆಲೆ ಇಳಿಕೆಯಿಂದ ಇದೀಗ 29,990ರೂ.ಗಳಿಗೆ ಕಡಿತವಾಗಿದೆ. 8GB RAM ಮತ್ತು 256GB ವೇರಿಯಂಟ್‌ ಫೋನ್ 32,990ರೂ.ಗಳಿಗೆ ಲಭ್ಯವಾಗಲಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ವಿವೋ X50 ಸ್ಮಾರ್ಟ್‌ಫೋನ್‌ 1080x2376 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 6.56 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನ ಹೊಂದಿದೆ. ಡಿಸ್‌ಪ್ಲೇಯು ಫ್ಲ್ಯಾಟ್‌ ಅಲ್ಟ್ರಾ O ಸ್ಕ್ರೀನ್‌ ರಚನೆಯನ್ನು ಪಡೆದಿದೆ. ಇನ್ನು ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, 180Hz ಟಚ್‌ ರೆಸ್ಪಾನ್ಸ್‌ ರೇಟ್ ಒಳಗೊಂಡಿದೆ. ಹಾಗೆಯೇ HDR 10+ ಸಪೋರ್ಟ್‌ ಸಹ ಪಡೆದುಕೊಂಡಿದೆ.

ಪ್ರೊಸೆಸರ್‌ ಕಾರ್ಯ

ಪ್ರೊಸೆಸರ್‌ ಕಾರ್ಯ

ವಿವೋ X50 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನ್ಯಾಪ್‌ಡ್ರಾಗನ್ 765G SoC ಪ್ರೊಸೆಸರ್ ಹೊಂದಿದೆ. ಪೂರಕವಾಗಿ ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 8GB RAM + 128GB ಮತ್ತು 8GB RAM + 256GB ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿರುವ ಎರಡು ವೇರಿಯೆಂಟ್‌ ಆಯ್ಕೆಯನ್ನ ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ವಿಸ್ತರಿಸುವ ಆಯ್ಕೆ ಇಲ್ಲ.

ಕ್ವಾಡ್ ಕ್ಯಾಮೆರಾ

ಕ್ವಾಡ್ ಕ್ಯಾಮೆರಾ

ವಿವೋ X50 ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX598 ಸೆನ್ಸಾರ್‌ ಪಡೆದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೂಪರ್ ವೈಲ್ಡ್‌ ಆಂಗಲ್ ಲೆನ್ಸ್‌ ಹೊಂದಿದೆ. ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸೆನ್ಸಾರ್‌ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ವಿವೋ X50 ಸ್ಮಾರ್ಟ್‌ಫೋನ್‌ 4,315mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಹಾಟ್‌ಸ್ಪಾಟ್‌, ವೈಫೈ, ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್, ಜಿಪಿಎಸ್‌, 3.5mm ಆಡಿಯೊ ಜ್ಯಾಕ್‌ಗೆ ಬೆಂಬಲ ನೀಡಲಿದೆ.

Best Mobiles in India

English summary
The Vivo X50 has received a price cut of Rs. 5,000 which brings the price down to Rs. 29,990 from Rs. 34,990.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+