Home
ಸುದ್ದಿಜಾಲ

vivo: ವಿವೋದ ಈ ಪ್ರೀಮಿಯಂ ಫೋನ್‌ ಬೆಲೆಯಲ್ಲಿ ಇಳಿಕೆ! 8GB RAM, ಕ್ವಾಡ್ ಕ್ಯಾಮೆರಾ ಸೌಲಭ್ಯ!

ವಿವೋ (vivo) ಈಗಷ್ಟೇ ವಿವೋ X100 ಹಾಗೂ ವಿವೋ X100 ಪ್ರೊ (Vivo X100, Vivo X100 Pro) ಅನ್ನು ಅನಾವರಣ ಮಾಡುವ ಮೂಲಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಉಂಟು ಮಾಡಿದೆ. ಈ ಫೋನ್‌ಗಳು ಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಸಖತ್‌ ಕ್ಯಾಮೆರಾ ಫೀಚರ್ಸ್‌ ಅನ್ನು ಪಡೆದುಕೊಂಡಿವೆ. ಈ ಬೆಳವಣಿಗೆ ನಡುವೆ ವಿವೋದ ಪ್ರೀಮಿಯಂ ಫೋನ್ ಒಂದಕ್ಕೆ ಪ್ರಮುಖ ಇ- ಕಾಮರ್ಸ್‌ ಸೈಟ್‌ನಲ್ಲಿ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ವಿವೋದ ವಿವೋ X50 ಸ್ಮಾರ್ಟ್‌ಫೋನ್‌ (Vivo X50 smartphone) ಬೆಲೆ ಇದೀಗ ಇಳಿಕೆ ಆಗಿದೆ. ಈ ಫೋನ್‌ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆಯೊಂದಿಗೆ ಕ್ವಾಡ್‌ ರಿಯರ್ ಕ್ಯಾಮೆರಾ ಹಾಗೂ 8GB RAM ಆಯ್ಕೆ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋದ ಈ ಪ್ರೀಮಿಯಂ ಫೋನ್‌ ಬೆಲೆಯಲ್ಲಿ ಇಳಿಕೆ! 8GB RAM, ಕ್ವಾಡ್ ಕ್ಯಾಮೆರಾ ...

ವಿವೋ X50 ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 44,990ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 33,990 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ (Flipkart) ಈ ಫೋನ್‌ ಮೇಲೆ 24% ರಿಯಾಯಿತಿ ಘೋಷಣೆ ಮಾಡಿದೆ. ಅಷ್ಟೇ ಅಲ್ಲೆ ಕೆಲವು ಬ್ಯಾಂಕ್‌ ಆಫರ್ ಸಹ ಇದ್ದು ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ.

ವಿವೋ X50 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್‌ ಅನ್ನು ಯಾಕೆ ಖರೀದಿ ಮಾಡಬೇಕು ಅಥವಾ ಇಷ್ಟು ಹಣಕ್ಕೆ ಈ ಫೋನ್‌ ಯೋಗ್ಯವೇ ಎಂಬ ಮಾಹಿತಿ ತಿಳಿಯಬೇಕು ಎಂದರೆ ನೀವು ಇದರ ಪ್ರಮುಖ ಫೀಚರ್ಸ್ ಕಡೆ ಕಣ್ಣಾಯಿಸಬೇಕಿದೆ. ಅದರಂತೆ ಈ ಫೋನ್ 6.56 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 1,080 x 2,376 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 398 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದರೊಂದಿಗೆ ಪಂಚ್ ಹೋಲ್ ಆಯ್ಕೆ, 19.8:9 ಆಕಾರ ಅನುಪಾತ ಮತ್ತು 90 Hz ರಿಫ್ರೆಶ್ ರೇಟ್‌ ಅನ್ನು ಇದರಲ್ಲಿ ಕಾಣಬಹುದು.

ವಿವೋದ ಈ ಪ್ರೀಮಿಯಂ ಫೋನ್‌ ಬೆಲೆಯಲ್ಲಿ ಇಳಿಕೆ! 8GB RAM, ಕ್ವಾಡ್ ಕ್ಯಾಮೆರಾ ...

ವಿವೋ X50 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಇನ್ನು ಈ ವಿಶೇಷ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಈ ಸಿಪಿಯು 2.2GHz ಕ್ರಿಯೋ 470 ಡ್ಯುಯಲ್ ಕೋರ್ ಮತ್ತು 1.8GHz ಕ್ಯೋ 470 ಹೆಕ್ಸಾ-ಕೋರ್ ಅನ್ನು ಹೊಂದಿದೆ. ಇದರೊಂದಿಗೆ ಅಡ್ರಿನೋ 618 ಗ್ರಾಫಿಕ್ಸ್‌ ಕಾರ್ಡ್‌ ಹೊಂದಿದ್ದು, ಈ ಮೂಲಕ ಉತ್ತಮವಾಗಿ ಕೆಲಸ ಮಾಡಲಿದೆ. ಅಲ್ಲದೆ ಈ ಫೋನ್ 8GB RAM ನಲ್ಲಿ ಕಾಣಿಸಿಕೊಂಡಿದ್ದು, 256 GB ಇಂಟರ್‌ ಸ್ಟೋರೇಜ್ ಪಡೆಯುವ ಮೂಲಕ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಉತ್ತಮ ಫೋನ್‌ ಎನಿಸಿಕೊಂಡಿದೆ.

ವಿವೋದ ಈ ಪ್ರೀಮಿಯಂ ಫೋನ್‌ ಬೆಲೆಯಲ್ಲಿ ಇಳಿಕೆ! 8GB RAM, ಕ್ವಾಡ್ ಕ್ಯಾಮೆರಾ ...

ವಿವೋ X50 ಸ್ಮಾರ್ಟ್‌ಫೋನ್‌ ಕ್ಯಾಮೆರಾ ಮಾಹಿತಿ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದು ಕ್ವಾಡ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಅದರಲ್ಲಿ 48 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಎಕ್ಸ್ಮೋರ್-RS CMOS ಸೆನ್ಸರ್‌ ಮತ್ತು 20x ಡಿಜಿಟಲ್ ಜೂಮ್ ಬೆಂಬಲ ಪಡೆದಿದೆ. ಇದರೊಂದಿಗೆ 13 ಮೆಗಾಪಿಕ್ಸೆಲ್‌, 8 ಮೆಗಾಪಿಕ್ಸೆಲ್‌ ಅಲ್ಟ್ರಾ ಸೆನ್ಸರ್‌ 5 ಮೆಗಾಪಿಕ್ಸೆಲ್‌ ನ ಒಟ್ಟಾರೆ ನಾಲ್ಕು ಕ್ಯಾಮೆರಾಗಳನ್ನು ಇದರಲ್ಲಿ ಕಾಣಬಹುದಾಗಿದೆ. ಇದರೊಂದಿಗೆ 32 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಹೊಂದಿದೆ. ಉಳಿದಂತೆ ಈ ಫೋನ್ 33W v2.0 ಫ್ಲ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 4,200 mAh ಸಾಮರ್ಥ್ಯದ ಬ್ಯಾಟರಿ ಪಡೆದಿದೆ.

Best Mobiles in India

English summary
Vivo X50 smartphone price is now reduced. The phone have quad rear camera with an AMOLED display option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+