Vivo: ವಿವೋದ ಈ ಫೋನ್‌ಗೆ ಬೊಂಬಾಟ್ ಆಫರ್: 8GB RAM ಆಯ್ಕೆ.. 48MP ಕ್ಯಾಮೆರಾ
ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ಭಾರತದಲ್ಲಿ ಹೆಚ್ಚು ಸೇಲ್ ಆಗುವ ಫೋನ್‌ಗಳು ಎಂದರೆ ವಿವೋ ಫೋನ್‌ಗಳು. ಇವುಗಳನ್ನು ಹೆಚ್ಚಾಗಿ ಸ್ಮಾರ್ಟ್‌ಫೋನ್ ಫೋಟೋಗ್ರಫಿ ಹಾಗೂ ಉತ್ತಮ ಕಾರ್ಯಕ್ಷಮತೆ ನಿರೀಕ್ಷೆ ಮಾಡುವವರು ಖರೀದಿ ಮಾಡುತ್ತಾರೆ. ಇದರ ಬೆನ್ನಲ್ಲೇ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ವಿವೋ X60 5G ಸ್ಮಾರ್ಟ್‌ಫೋನ್‌ಗೆ ಭರ್ಜರಿ ಆಫರ್ ನೀಡಲಾಗಿದೆ.
ಹೌದು, ವಿವೋ X60 5G (Vivo X60 5G) ಸ್ಮಾರ್ಟ್‌ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ 12% ರಿಯಾಯಿತಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 48MP ಕ್ಯಾಮೆರಾ ದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 8GB RAM ಹೊಂದುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ X60 5G ಆಫರ್ ವಿವರ: ಈ ಮಿಡ್ ರೇಂಜ್ ಬೆಲೆಯ ಫೋನ್ 39,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ನೀವು ಈಗ ಇದನ್ನು 34,99ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಸ್ಮಾರ್ಟ್‌ಫೋನ್‌ಗೆ ಫ್ಲಿಪ್‌ಕಾರ್ಟ್ (Flipkart) ಭರ್ಜರಿ ಆಫರ್ ನೀಡಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಲು ಮುಂದಾದರೆ ಅದಕ್ಕೂ ಅವಕಾಶ ಇದೆ.
ನೀವು ಈ ಫೋನ್ ಖರೀದಿ ಸಮಯದಲ್ಲಿ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ 10% ರಿಯಾಯಿತಿ ಸಿಗಲಿದೆ. ಇದರೊಂದಿಗೆ ವಿಶೇಷ ಬೆಲೆ ಹೆಚ್ಚುವರಿ 2991 ರೂ.ಗಳ ರಿಯಾಯಿತಿ ಸಹ ಈ ಫೋನ್ ಮೇಲೆ ಸಿಗಲಿದೆ. ಇದರೊಂದಿಗೆ 699ರೂ.ಬೆಲೆ ಮೌಲ್ಯದ FreebieSpotify ಪ್ರೀಮಿಯಂ ಸೌಲಭ್ಯ ಸಹ ಸಿಗಲಿದ್ದು, 1,231 ರೂ.ಗಳ ತಿಂಗಳ ಇಎಮ್‌ಐ ಆಯ್ಕೆ ಮೂಲಕವೂ ಈ ಫೋನ್ ಖರೀದಿ ಮಾಡಬಹುದಾಗಿದೆ.
ವಿವೋ X60 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.5 ಇಂಚಿನ ಅಮೋಲೆಡ್ HD+ ಡಿಸ್‌ಪ್ಲೇ ಆಯ್ಕೆ ಪದ್ದಿದಿದ್ದು, 1080x2400px ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಈ ಪಂಚ್-ಹೋಲ್ ಆಯ್ಕೆ ಇರುವ ಪ್ಯಾನೆಲ್ 398 PPI ನ ಪಿಕ್ಸೆಲ್ ಸಾಂದ್ರತೆ ಮತ್ತು 87% ಕ್ಕಿಂತ ಹೆಚ್ಚು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಮತ್ತು HDR10+ ಅನ್ನು ಬೆಂಬಲಿಸುತ್ತದೆ.

ವಿವೋ X60 ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 7nm ಚಿಪ್‌ಸೆಟ್‌ನಲ್ಲಿ ನಿರ್ಮಿಸಲಾದ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಬೃಹತ್ ಕಾರ್ಯಕ್ಕಾಗಿ 8GB RAM ಆಯ್ಕೆ ಪಡೆದಿದ್ದು, ಅಡ್ರಿನೋ 650 GPU ಬಲದೊಂದಿಗೆ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಅಂದರೆ ಗೇಮಿಂಗ್‌ನಲ್ಲಿ ಹಾಗೂ ವಿಡಿಯೋ ಸ್ಕ್ರೀಮಿಂಗ್‌ನಲ್ಲಿ ಉತ್ತಮ ಅನುಭವ ಸಿಗಲಿದೆ.

ವಿವೋ X60 ಕ್ಯಾಮೆರಾ ರಚನೆ: ಇನ್ನು ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 48 ಮೆಗಾಪಿಕ್ಸೆಲ್ ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 13 ಮೆಗಾಪಿಕ್ಸೆಲ್‌ನ ಎರಡು ಎರಡು ಪೋರ್ಟ್ರೇಟ್ ಕ್ಯಾಮೆರಾ ಆಯ್ಕೆಯೊಂದಿಗೆ ಪ್ಯಾಕ್ ಆಗಿದೆ. ಈ ಸೆನ್ಸರ್‌ಗಳು ಆಟೋಫೋಕಸ್, ಅಲ್ಟ್ರಾ-ವೈಡ್ ಸೆನ್ಸರ್, ನೈಟ್-ಮೋಡ್, ಪೋರ್ಟ್ರೇಟ್, ಪ್ಯಾನೋ, ಲೈವ್ ಫೋಟೋ, ಸ್ಲೋ-ಮೋಷನ್, ಟೈಮ್ ಲ್ಯಾಪ್ಸ್ ಮತ್ತು ಹೆಚ್ಚಿನ ಸೌಲಭ್ಯ ನೀಡಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 32 ಮೆಗಾಪಿಕ್ಸೆಲ್ ಪಂಚ್-ಹೋಲ್ ನಾಚ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








