ವಿವೋ X60 ಕರ್ವ್ ಎಡಿಷನ್ ಸ್ಮಾರ್ಟ್‌ಫೋನ್ ಲಾಂಚ್: ವಿಶೇಷತೆ ಏನಿದೆ?
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ವಿವೋ, ಈಗಾಗಲೇ ವಿವೋ X ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಲಾಂಚ್ ಮಾಡಿದೆ. ಅದೇ ಸರಣಿಯಲ್ಲಿ ಇತ್ತೀಚಿಗೆ ವಿವೋ X60, ವಿವೋ X60 ಪ್ರೊ, ವಿವೋ X60 ಪ್ರೊ ಪ್ಲಸ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿ ಫೋನ್ ಪ್ರಿಯರ ಗಮನ ಸೆಳೆದಿತ್ತು. ಅದರ ಮುಂದುವರಿದ ಭಾಗವಾಗಿ ಕಂಪನಿಯು ಇದೀಗ ವಿವೋ X60 ಸರಣಿಯಲ್ಲಿಯೇ ನೂತನವಾಗಿ ವಿವೋ X60 ಕರ್ವ್ ಎಡಿಷನ್ ಮಾಡೆಲ್ ಅನ್ನು ಅನಾವರಣ ಮಾಡಿದೆ.

ಹೌದು, ವಿವೋ ಕಂಪನಿಯು ನೂತನವಾಗಿ ಈಗ ಅನ್ನು ಚೀನಾದಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯದೊಂದಿಗೆ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ವಿವೋ X60 ಕರ್ವ್ ಎಡಿಷನ್ ಸ್ಮಾರ್ಟ್‌ಫೋನ್ ಹಾಗೆಯೇ ಸ್ಕ್ರೀನ್ 120Hz ರೀಫ್ರೇಶ್ ರೇಟ್ ಅನ್ನು ಒಳಗೊಂಡಿದೆ. ಈ ಫೋನಿನ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗಾದರೇ ವಿವೋ X60 ಕರ್ವ್ ಎಡಿಷನ್ ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ವಿವೋ X60 ಕರ್ವ್ ಎಡಿಷನ್ ಫೋನ್ 1,080x2,376 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.56 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.8:9 ಆಗಿದ್ದು, 120Hz ರೀಫ್ರೇಶ್ ರೇಟ್ ಪಡೆದಿದೆ. ಮುಖ್ಯವಾಗಿ ಕರ್ವ್ಡ್ ಸ್ಕ್ರೀನ್ ರಚನೆಯನ್ನು ಪಡೆದಿದೆ.

ಯಾವ ಪ್ರೊಸೆಸರ್
ವಿವೋ X60 ಕರ್ವ್ ಎಡಿಷನ್ ಫೋನ್ Exynos 1080 ಚಿಪ್‌ಸೆಟ್ ಪ್ರೊಸೆಸರ್ ಹೊಂದಿದ್ದು, ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಪಡೆದಿದೆ. ಹಾಗೆಯೇ 8 GB RAM + 128 GB, 8 GB RAM + 256 ಮತ್ತು 12GB RAM + 256GB ಆಯ್ಕೆಯನ್ನು ಒಳಗೊಂಡಿದೆ.

ಕ್ಯಾಮೆರಾ ಸೆನ್ಸಾರ್
ವಿವೋ X60 ಕರ್ವ್ ಎಡಿಷನ್ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 13 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ.

ಬ್ಯಾಟರಿ ಪವರ್ ಏನು
ವಿವೋ X60 ಕರ್ವ್ ಎಡಿಷನ್ ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 33W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇನ್ನುಳಿದಂತೆ 5 ಜಿ ಬೆಂಬಲದೊಂದಿಗೆ ಡ್ಯುಯಲ್ ಸಿಮ್, ವೈ-ಫೈ 6, ಬ್ಲೂಟೂತ್ 5.1, ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್ ಮತ್ತು ಯುಎಸ್ಬಿ ಟೈಪ್-ಸಿ ಸಾಧನದಲ್ಲಿ ಲಭ್ಯವಿರುವ ಸೌಲಭ್ಯಗಳು ಸೇರಿವೆ.

ಬೆಲೆ ಎಷ್ಟು?
ವಿವೋ X60 ಕರ್ವ್ ಎಡಿಷನ್ ಫೋನ್ ಮೂರು ವೇರಿಯಂಟ್ ಮಾಡೆಲ್‌ಗಳ ಆಯ್ಕೆ ಹೊಂದಿದೆ. 8 GB RAM + 128 GB ಸ್ಟೋರೇಜ್‌ನ ಬೇಸ್ ವೇರಿಯಂಟ್ ಬೆಲೆಯು ಚೀನಾದಲ್ಲಿ 3,299 Yuan (~$513) ಆಗಿದೆ. ಮಿಡ್‌ನೈಟ್ ಬ್ಲ್ಯಾಕ್, ಶಿಮ್ಮರ್ ಬ್ಲೂ ಮತ್ತು ಶಿಮ್ಮರ್ ವೈಟ್‌ನಂತಹ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ.


Click it and Unblock the Notifications