ವಿವೋ X60 ಸ್ಮಾರ್ಟ್‌ಫೋನ್ ಸರಣಿ ಲಾಂಚ್‌ಗೆ ಮುಹೂರ್ತ ನಿಗದಿ!

|

ಜನಪ್ರಿಯ ಮೊಬೈಲ್‌ ತಯಾರಿಕಾ ಕಂಪೆನಿ ವಿವೋ X ಸರಣಿಯಲ್ಲಿ ಈಗಾಗಲೇ ಕೆಲವು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಗ್ರಾಹಕರನ್ನು ಸೆಳೆದಿದೆ. ಆ ಪೈಕಿ ವಿವೋ X50 ಸ್ಮಾರ್ಟ್‌ಫೋನ್‌ ವಿಶೇಷ ಫೀಚರ್ಸ್‌ಗಳಿಂದ ಆಕರ್ಷಕ ಲುಕ್ ಪಡೆದಿದೆ. ವಿವೋ ಕಂಪನಿಯು ಅದೇ ಸರಣಿಯಲ್ಲಿ ವಿವೋ X60 ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಕಂಪನಿಯು

ಹೌದು ವಿವೋ ಕಂಪನಿಯು ಇದೀಗ ವಿವೋ X60 ಸ್ಮಾರ್ಟ್‌ಫೋನ್‌ ಸರಣಿಯನ್ನು ಅನಾವರಣ ಮಾಡಲು ಸಿದ್ಧವಾಗಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ಚೀನಾದಲ್ಲಿ ಇದೇ ಡಿಸೆಂಬರ್‌ 29 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸರಣಿಯು ವಿವೋ X60 ಹಾಗೂ ವಿವೋ X60 ಪ್ರೊ ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ಫೋನ್

ವಿವೋದ ಹೊಸ ಸರಣಿಯಲ್ಲಿ ವಿವೊ X60 ಸ್ಮಾರ್ಟ್‌ಫೋನ್ 6.56-ಇಂಚಿನ FHD + ಅಮೋಲೆಡ್ ಕೇಂದ್ರಿತ ಪಂಚ್-ಹೋಲ್ ಪ್ರದರ್ಶನವನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಇದು 120Hz ರಿಫ್ರೆಶ್ ದರ ಮತ್ತು 2376 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ ಎನ್ನಲಾಗಿದೆ. ಅದೇ ರೀತಿ ವಿವೋ X60 ಪ್ರೊ + ಸ್ನ್ಯಾಪ್‌ಡ್ರಾಗನ್ 888 ಜೋಡಿಯಾಗಿ ವೇಗವಾಗಿ ಎಲ್‌ಪಿಡಿಡಿಆರ್ 5 ಮತ್ತು ಯುಎಫ್‌ಎಸ್ 3.1 ಸಂಗ್ರಹಣೆ, ಸ್ಯಾಮ್‌ಸಂಗ್ ಜಿಎನ್ 1 50 ಎಂಪಿ 1 / 1.3-ಇಂಚಿನ ಸಿಐಎಸ್ (ಸಿಎಮ್‌ಒಎಸ್ ಇಮೇಜ್ ಸೆನ್ಸಾರ್) ಜೊತೆಗೆ ZEISS, ಹೈ-ಫೈ ಡಿಎಸಿ ಮತ್ತು ಹೆಚ್ಚಿನದನ್ನು ಒಳಗೊಂಡಿರುತ್ತದೆ.

ಬ್ಲೂಟೂತ್

ಹಾಗೆಯೇ ಗ್ಲಾಸ್ ಬಿಲ್ಡ್, ಎಸ್‌ಎ / ಎನ್‌ಎಸ್‌ಎ 5 ಜಿ, ವೈ-ಫೈ, ಡ್ಯುಯಲ್ ಸಿಮ್, ಟೈಪ್-ಸಿ ಪೋರ್ಟ್, LPDDR 4 ಎಕ್ಸ್ / 5 ಎಕ್ಸ್ ರಾಮ್, ಯುಎಫ್‌ಎಸ್ 2.1 / 3 ಸ್ಟೋರೇಜ್, ಬ್ಲೂಟೂತ್, ಎನ್‌ಎಫ್‌ಸಿ, ಜಿಪಿಎಸ್, ಬೀಡೌ, ಕ್ಯಾಮೆರಾ ವೈಶಿಷ್ಟ್ಯಗಳು ಇತರ ನಿರೀಕ್ಷಿತ ವೈಶಿಷ್ಟ್ಯಗಳಾಗಿವೆ ಒಐಎಸ್, ಇಐಎಸ್ 4 ಕೆ ವಿಡಿಯೋ ರೆಕಾರ್ಡಿಂಗ್, ಆಪ್ಟಿಕಲ್ ಜೂಮ್ (ಪೆರಿಸ್ಕೋಪ್-ಎಕ್ಸ್ 60 ಪ್ರೊ), ಬೊಕೆ, ಒರಿಜಿನೋಸ್ (ಆಂಡ್ರಾಯ್ಡ್ 11) ಹೊಂದಿದೆ.

ವಿವೋ X50

ವಿವೋ X50 ಸ್ಮಾರ್ಟ್‌ಫೋನ್‌ 1,080x2,376 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.56-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 765 G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ ಫಂಟೌಚ್ ಓಎಸ್ 10.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೇಯೇ 8GB RAM ಮತ್ತು 256GB ಇಂಟರ್‌ ಸ್ಟೊರೇಜ್‌ ಸಾಮರ್ಥ್ಯವನ್ನ ಹೊಂದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇನ್ನು 4,200mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದೆ.

Best Mobiles in India

English summary
Vivo X60 Series launching On December 29: Expected Specs, Features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X