ಸದ್ಯದಲ್ಲೇ ಲಾಂಚ್ ಆಗಲಿದೆ ವಿವೋ X60 ಸ್ಮಾರ್ಟ್‌ಫೋನ್ ಸರಣಿ!
ಜನಪ್ರಿಯ ವಿವೋ ಕಂಪನಿಯು ವಿವೋ X ಸರಣಿಯಲ್ಲಿ ಈಗಾಗಲೇ ಹಲವು ಸ್ಮಾರ್ಟ್‌ಫೋನ್ ಆವೃತ್ತಿಗಳನ್ನು ಪರಿಚಯಸಿದೆ. ಕಂಪನಿಯು ಇದೀಗ ಹೊಸದಾಗಿ ವಿವೋ X60 ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ತಯಾರಿ ನಡೆಸಿದೆ. ಇನ್ನು ಬರಲಿರುವ ಈ ಹೊಸ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 875 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಹೌದು ವಿವೋ ಕಂಪನಿಯು ನೂತನವಾಗಿ ವಿವೋ X60 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿಯು ವಿವೋ X60 ಮತ್ತು ವಿವೋ X60 ಪ್ರೊ ಮಾಡೆಲ್‌ಗಳನ್ನು ಹೊಂದಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಈ ಸರಣಿಯ ಫೋನ್‌ಗಳು ಅಧಿಕ ಬ್ಯಾಟರಿ, ಹೆಚ್ಚಿನ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಸೇರಿದಂತೆ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಲೀಕ್ ಮಾಹಿತಿಯಂತೆ ಈ ಸ್ಮಾರ್ಟ್‌ಫೋನ್ ಸರಣಿಯು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಿವೋ X60 ಮತ್ತು ವಿವೋ X60 ಪ್ರೊ ಸ್ಮಾರ್ಟ್‌ಫೋನ್ ಮಾಡೆಲ್‌ಗಳು ಪಂಚ್ ಹೋಲ್ ಡಿಸೈನ್ ಪಡೆದಿರಲಿವೆ. ಹಾಗೆಯೇ ವಿವೋ X60 ಫ್ಲಾಟ್ ಸ್ಕ್ರೀನ್ ರಚನೆ ಹೊಂದಿರಲಿದ್ದು, ವಿವೋ X60 ಪ್ರೊ ಮಾಡೆಲ್ ಕರ್ವಡ್ ಸ್ಕ್ರೀನ್ ರಚನೆ ಹೊಂದಿರುವ ಸಾಧ್ಯತೆಗಳು ಹೆಚ್ಚು. ಈ ಫೋನಿನ ಡಿಸ್‌ಪ್ಲೇಯು 6.65 ಇಂಚಿನಲ್ಲಿರಲಿದ್ದು, ಸ್ಕ್ರೀನ್ ರೀಫ್ರೇಶ್ ರೇಟ್ 120Hz ಆಗಿರಲಿದೆ.

ವಿವೋ X60 ಪ್ರೊ Exynos 1080 SoC ಬದಲಿಗೆ ಸ್ನಾಪ್‌ಡ್ರಾಗನ್ 875 SoC ಯೊಂದಿಗೆ ಬರುವ ಸಾಧ್ಯತೆಯಿದೆ. ಹಾಗೆಯೇ ಈ ಎರಡೂ ಫೋನ್‌ಗಳು OriginOS ಆಧಾರಿತ ಆಂಡ್ರಾಯ್ಡ್ 11 ಓಎಸ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.

ಹಾಗೆಯೇ ಈ ಸರಣಿಯಲ್ಲಿ ವಿವೋ X60s 5G ಎಂಬ ಆವೃತ್ತಿಯೂ ಸಹ ಅನಾವರಣ ಆಗಲಿದೆ ಎನ್ನಲಾಗಿದೆ. ವಿವೋ X60s 5G ಹೆಸರಿನ ಫೋನ್ 8 ಜಿಬಿ RAM ಮತ್ತು ಸ್ನಾಪ್ಡ್ರಾಗನ್ 765 SoC ಯೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.


Click it and Unblock the Notifications




