ವಿವೋ X60 ಸ್ಮಾರ್ಟ್‌ಫೋನ್ ಸರಣಿ ಲಾಂಚ್‌ಗೆ ದಿನಾಂಕ ನಿಗದಿ!
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ವಿವೋ ಕಂಪನಿಯು ತನ್ನ ಬಹುನಿರೀಕ್ಷಿತ ವಿವೋ X60 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲು ಇದೀಗ ದಿನಾಂಕ ನಿಗದಿ ಮಾಡಿಕೊಂಡಿದೆ. ಈ ಸರಣಿಯು ವಿವೋ X60, ವಿವೋ X60 ಪ್ರೊ ಮತ್ತು ವಿವೋ X60 ಪ್ರೊ ಪ್ಲಸ್ ಹೆಸರಿನ ಮೂರು ಮಾಡೆಲ್ ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗ್ತಿದೆ. ಮುಖ್ಯವಾಗಿ RAM ಮತ್ತು ಆಂತರೀಕ ಸ್ಟೋರೇಜ್ ಸಂಗ್ರಹ ಫೀಚರ್ಸ್‌ಗಳ ಹೈ ಎಂಡ್ ಮಾದರಿಯಲ್ಲಿರಲಿವೆ.

ಹೌದು ವಿವೋ ಕಂಪನಿಯು ನೂತನವಾಗಿ ವಿವೋ X60 ಸ್ಮಾರ್ಟ್‌ಫೋನ್ ಸರಣಿಯನ್ನು ಇದೇ ಮಾರ್ಚ್ 25ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ಗಳು ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಆಯ್ಕೆಗಳನ್ನು ಪಡೆದಿರಲಿವೆ ಎಂದು ಲೀಕ್ ಹೇಳಲಾಗಿದೆ. ಹಾಗಾದರೇ ವಿವೋ X60 ಪ್ರೊ ಮತ್ತು ವಿವೋ X60 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಿವೋ X60- ಡಿಸ್‌ಪ್ಲೇ ಹಾಗೂ ಪ್ರೊಸೆಸರ್
ವಿವೋ X60 ಫೋನ್ 1,080x2,376 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.56 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.8:9 ಆಗಿದ್ದು, 120Hz ರೀಫ್ರೇಶ್ ರೇಟ್ ಪಡೆದಿದೆ. ಆಕ್ಟಾ ಕೋರ್ Exynos 1080 SoC ಪ್ರೊಸೆಸರ್ ಹೊಂದಿದ್ದು, 12GB RAM ಆಯ್ಕೆಯನ್ನು ಒಳಗೊಂಡಿದೆ.

ವಿವೋ X60- ಕ್ಯಾಮೆರಾ ಹಾಗೂ ಬ್ಯಾಟರಿ
ವಿವೋ X60 ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 13ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ವಿವೋ X60 ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ.

ವಿವೋ X60 ಪ್ರೊ- ಡಿಸ್‌ಪ್ಲೇ ಹಾಗೂ ಪ್ರೊಸೆಸರ್
ವಿವೋ X60 ಪ್ರೊ ಫೋನ್ 1,080x2,376 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.56 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಸಹ ಆಕ್ಟಾ ಕೋರ್ Exynos 1080 SoC ಪ್ರೊಸೆಸರ್ ಹೊಂದಿದ್ದು, ಹಾಗೆಯೇ 12GB RAM ಆಯ್ಕೆಯನ್ನು ಒಳಗೊಂಡಿದೆ. ಈ ಪೋನ್ 256GB ಆಂತರೀಕ ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.

ವಿವೋ X60 ಪ್ರೊ- ಕ್ಯಾಮೆರಾ ಹಾಗೂ ಬ್ಯಾಟರಿ
ವಿವೋ X60 ಪ್ರೊ ಫೋನ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು ಕ್ರಮವಾಗಿ 13ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ ಇನ್ನು ನಾಲ್ಕನೇ ಕ್ಯಾಮೆರಾವು 8ಎಂಪಿ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, 33Wನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

ಬೆಲೆ ಎಷ್ಟು?
ವಿವೋ X60 ಪ್ರೊ ಫೋನಿನ 12 GB + 256 GB ವೇರಿಯಂಟ್ ಫೋನಿನ ಬೆಲೆಯು ಚೀನಾದಲ್ಲಿ CNY 4,498 (ಭಾರತದಲ್ಲಿ ಅಂದಾಜು 50,900ರೂ). ಇನ್ನು ವಿವೋ X60 ಪ್ರೊ ಪ್ಲಸ್ ಫೋನಿನ 8 GB RAM + 128 GB ವೇರಿಯಂಟ್ ದರವು CNY 4,998 (ಭಾರತದಲ್ಲಿ ಅಂದಾಜು 56,500ರೂ. ಎನ್ನಲಾಗಿದೆ). ಅದೇ ರೀತಿ 12GB + 256GBಯ ವೇರಿಯಂಟ್‌ನ ಬೆಲೆಯು CNY 5,998 (ಭಾರತದಲ್ಲಿ ಅಂದಾಜು 67,740ರೂ) ಆಗಿದೆ.


Click it and Unblock the Notifications