ವಿವೋ X60 ಮತ್ತು ವಿವೋ X60 ಪ್ರೊ ಫೋನ್ ಲಾಂಚ್: ಬೆಲೆ ಎಷ್ಟು? ಫೀಚರ್ಸ್‌ ಏನು?

|

ಬಜೆಟ್‌ ದರದಲ್ಲಿ ಬೆಸ್ಟ್‌ ಫೀಚರ್ಸ್‌ನ ಸ್ಮಾರ್ಟ್‌ಫೋನ್ ಪರಿಚಯಿಸುವ ಕಂಪನಿಗಳ ಲಿಸ್ಟ್‌ಲ್ಲಿ ವಿವೋ ಸಹ ಒಂದಾಗಿದೆ. ವಿವೋ ಈಗಾಗಲೇ ವಿವೋ X ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಲಾಂಚ್ ಮಾಡಿದೆ. ಅದರ ಮುಂದುವರಿದ ಭಾಗವೆಂಬಂತೆ ಸಂಸ್ಥೆಯು ಇದೀಗ ವಿವೋ X60 ಸ್ಮಾರ್ಟ್‌ಫೋನ್‌ ಸರಣಿಯನ್ನು ಅನಾವರಣ ಮಾಡಿದೆ. ಈ ಸರಣಿಯು ವಿವೋ X60 ಮತ್ತು ವಿವೋ X60 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ.

ಹೊಸದಾಗಿ

ಹೌದು ವಿವೋ ಕಂಪನಿಯು ಹೊಸದಾಗಿ ಈಗ ವಿವೋ X60 ಸ್ಮಾರ್ಟ್‌ಫೋನ್‌ ಸರಣಿಯನ್ನು ಚೀನಾದಲ್ಲಿ ಲಾಂಚ್ ಮಾಡಿದೆ. ಈ ಸರಣಿಯು ವಿವೋ X60 ಮತ್ತು ವಿವೋ X60 ಪ್ರೊ ಹೆಸರಿನ ಸ್ಮಾರ್ಟ್‌ಫೋನ್ ವೇರಿಯಂಟ್‌ಗಳನ್ನು ಹೊಂದಿದೆ. ಈ ಎರಡು ಫೋನ್‌ಗಳು Exynos 1080 SoC ಪ್ರೊಸೆಸರ್‌ ಹಾಗೂ Zeiss ಆಪ್ಟಿಕಲ್ ಹೊಂದಿದ್ದು, ವಿವೋ X60 ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ ವಿವೋ X60 ಪ್ರೊ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇನ್ನುಳಿದಂತೆ ವಿವೋ X60 ಮತ್ತು ವಿವೋ X60 ಪ್ರೊ ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಎಂಬದನ್ನು ಮುಂದೆ ನೋಡೋಣ ಬನ್ನಿರಿ.

ವಿವೋ X60- ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌

ವಿವೋ X60- ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌

ವಿವೋ X60 ಫೋನ್ 1,080x2,376 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.56 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.8:9 ಆಗಿದ್ದು, 120Hz ರೀಫ್ರೇಶ್‌ ರೇಟ್‌ ಪಡೆದಿದೆ. ಆಕ್ಟಾ ಕೋರ್ Exynos 1080 SoC ಪ್ರೊಸೆಸರ್‌ ಹೊಂದಿದ್ದು, 12GB RAM ಆಯ್ಕೆಯನ್ನು ಒಳಗೊಂಡಿದೆ.

ವಿವೋ X60- ಕ್ಯಾಮೆರಾ ಹಾಗೂ ಬ್ಯಾಟರಿ

ವಿವೋ X60- ಕ್ಯಾಮೆರಾ ಹಾಗೂ ಬ್ಯಾಟರಿ

ವಿವೋ X60 ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 13ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ವಿವೋ X60 ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.

ವಿವೋ X60 ಪ್ರೊ- ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌

ವಿವೋ X60 ಪ್ರೊ- ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌

ವಿವೋ X60 ಪ್ರೊ ಫೋನ್ 1,080x2,376 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.56 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಸಹ ಆಕ್ಟಾ ಕೋರ್ Exynos 1080 SoC ಪ್ರೊಸೆಸರ್‌ ಹೊಂದಿದ್ದು, ಹಾಗೆಯೇ 12GB RAM ಆಯ್ಕೆಯನ್ನು ಒಳಗೊಂಡಿದೆ. ಈ ಪೋನ್ 256GB ಆಂತರೀಕ ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ.

ವಿವೋ X60 ಪ್ರೊ- ಕ್ಯಾಮೆರಾ ಹಾಗೂ ಬ್ಯಾಟರಿ

ವಿವೋ X60 ಪ್ರೊ- ಕ್ಯಾಮೆರಾ ಹಾಗೂ ಬ್ಯಾಟರಿ

ವಿವೋ X60 ಪ್ರೊ ಫೋನ್ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು ಕ್ರಮವಾಗಿ 13ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿವೆ ಇನ್ನು ನಾಲ್ಕನೇ ಕ್ಯಾಮೆರಾವು 8ಎಂಪಿ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 33Wನ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ವಿವೋ X60 8GB + 128GB ವೇರಿಯಂಟ್‌ ಫೋನಿನ ಬೆಲೆಯು ಚೀನಾದಲ್ಲಿ CNY 3,498 (ಭಾರತದಲ್ಲಿ ಅಂದಾಜು 39,300ರೂ). ಇನ್ನು 8GB + 256GB ವೇರಿಯಂಟ್ ದರವು CNY 3,798 (ಭಾರತದಲ್ಲಿ ಅಂದಾಜು 42,700ರೂ. ಎನ್ನಲಾಗಿದೆ). ಅದೇ ರೀತಿ ವಿವೋ X60 ಪ್ರೊ ಫೋನ್‌ 12GB + 256GBಯ ಒಂದೇ ವೇರಿಯಂಟ್‌ ಹೊಂದಿದ್ದು, ಚೀನಾದಲ್ಲಿ ಬೆಲೆಯು CNY 4,498 (ಭಾರತದಲ್ಲಿ ಅಂದಾಜು 50,600ರೂ) ಆಗಿದೆ.

Best Mobiles in India

English summary
Vivo X60 price starts at CNY 3,498 (roughly Rs. 39,300), while Vivo X60 Pro comes with a price tag of CNY 4,498 (roughly Rs. 50,600).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X