ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾದ 'ವಿವೋ X70 ಪ್ರೊ' ಮತ್ತು 'ವಿವೋ X70 ಪ್ರೊ ಪ್ಲಸ್‌'!

|

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವ ವಿವೋ ಕಂಪೆನಿ ಭಿನ್ನ ಮಾದರಿಯ ಸ್ಮಾರ್ಟ್‌ ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಬಜೆಟ್‌ ದರದಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ವಿವೋ ಇತ್ತೀಚಿಗೆ ವಿವೋ X 70 ಸರಣಿಯನ್ನು ಅನಾವರಣ ಮಾಡಿ ಭಾರೀ ಸದ್ದು ಮಾಡಿದೆ. ವಿವೋ X 70 ಸರಣಿಯ ವಿವೋ X 70 ಪ್ರೊ ಮತ್ತು ವಿವೋ X 70 ಪ್ರೊ+ ಸ್ಮಾರ್ಟ್‌ಫೋನ್‌ಗಳು ಈಗ ಭಾರತಕ್ಕೆ ಗ್ರ್ಯಾಂಡ್ ಎಂಟ್ರಿ ನೀಡುವುದಕ್ಕೆ ಸಜ್ಜಾಗಿದ್ದು, ಅದಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ.

ಭಾರತದಲ್ಲಿ

ಹೌದು, ವಿವೋ ಕಂಪೆನಿಯ ವಿವೋ X 70 ಸ್ಮಾರ್ಟ್‌ಫೋನ್‌ ಸರಣಿಯ ವಿವೋ X 70 ಪ್ರೊ ಮತ್ತು ವಿವೋ X 70 ಪ್ರೊ+ ಸ್ಮಾರ್ಟ್‌ಫೋನ್‌ಗಳು ಇದೇ ಸೆಪ್ಟೆಂಬರ್ 30 ರಂದು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಆಗಲಿವೆ. ಈ ಬಗ್ಗೆ ವಿವೋ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೌಂಟ್‌ಡೌನ್‌ ಡೈಮರ್ ಸೂಚಿಸಿದೆ. ವಿವೋ X 70 ಪ್ರೊ ಮತ್ತು ವಿವೋ X 70 ಪ್ರೊ + ಈ ಎರಡು ಸ್ಮಾರ್ಟ್‌ಫೋನ್‌ಗಳು ಹೈ ಎಂಡ್‌ ಮಾದರಿಯ ಫೀಚರ್ಸ್‌ಗಳನ್ನು ಪಡೆದಿದ್ದು, ಗ್ರಾಹಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ಹಾಗಾದಾರೇ ವಿವೋ X 70 ಪ್ರೊ ಮತ್ತು ವಿವೋ X 70 ಪ್ರೊ+ ಫೋನ್‌ಗಳ ಫೀಚರ್ಸ್‌ಗಳು ಯಾವುವು ಎಂಬುದರ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ X70 ಪ್ರೊ ಫೀಚರ್ಸ್‌ಗಳು

ವಿವೋ X70 ಪ್ರೊ ಫೀಚರ್ಸ್‌ಗಳು

ವಿವೋ X70 ಪ್ರೊ ಸ್ಮಾರ್ಟ್‌ಫೋನ್‌ ಕೂಡ 6.56 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಎಕ್ಸಿನೋಸ್ 1080SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 4,450mAh ಬ್ಯಾಟರಿಯನ್ನು ಹೊಂದಿದ್ದು, 44W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಜೊತೆಗೆ 32 ಮೆಗಾ ಪಿಕ್ಸೆಲ್ ಸೆನ್ಸರ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ವಿವೋ X70 ಪ್ರೊ+ ಫೀಚರ್ಸ್‌ಗಳು

ವಿವೋ X70 ಪ್ರೊ+ ಫೀಚರ್ಸ್‌ಗಳು

ವಿವೋ X 70 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ 6.78 ಇಂಚಿನ ಅಲ್ಟ್ರಾ-ಹೆಚ್‌ಡಿ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಹಾಗೂ 120Hz ರಿಫ್ರೇಶ್‌ ರೇಟ್‌ ಅನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 888+ SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದು ಕೊಂಡಿದೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 55W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.

ವಿವೋ X70 ವಿಶೇಷತೆ

ವಿವೋ X70 ವಿಶೇಷತೆ

ವಿವೋ X70 ಸ್ಮಾರ್ಟ್‌ ಫೋನ್‌ 6.56 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು 19.8:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು ಮೀಡಿಯಾ ಟೆಕ್‌ ಡೈಮೆನ್ಸಿಟಿ 1200 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಆಧಾರಿತ ಒರಿಜಿನೋಸ್ 1.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 40 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 32 ಮೆಗಾ ಪಿಕ್ಸೆಲ್ ಸೆನ್ಸರ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 44W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

Best Mobiles in India

English summary
Vivo X70 Pro And Vivo X70 Pro+ Are Launching In India On September 30: Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X