Home
ಸುದ್ದಿಜಾಲ

Vivo: ವಿವೋದ ಈ ಪ್ರೀಮಿಯಂ ಫೋನ್‌ನಲ್ಲಿ ಭಾರೀ ಉಳಿತಾಯ ಪಕ್ಕಾ, 35% ರಿಯಾಯಿತಿ! 12GB RAM...50 MP ಕ್ಯಾಮೆರಾ

ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಭಾರತದಲ್ಲಿ ಭಾರೀ ಬೇಡಿಕೆ ಕಂಡಿವೆ. ಅದರಲ್ಲೂ ವಿವೋ ಅಗ್ಗದ ದರದಿಂದ ಪ್ರೀಮಿಯಂ ವರೆಗೆ ಸುಧಾರಿತ ಫೀಚರ್ಸ್‌ ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿಕೊಂಡು ಬಂದಿದ್ದು, ಈ ನಡುವೆ ವಿಶೇಷ ಫೀಚರ್ಸ್‌ ಇರುವ ಪ್ರೀಮಿಯಂ ಫೋನ್‌ಗೆ 35% ರಿಯಾಯಿತಿ ಘೋಷಣೆ ಮಾಡಲಾಗಿದೆ.

ಹೌದು, ವಿವೋದ ಬಹು ಬೇಡಿಕೆಯ ಸ್ಮಾರ್ಟ್‌ಫೋನ್‌ ಆಗಿರುವ ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗೆ (Vivo X70 Pro Plus Smartphone) ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಭಾರೀ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, 12GB RAM ಆಯ್ಕೆಯ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

 ವಿವೋದ ಈ ಪ್ರೀಮಿಯಂ ಫೋನ್‌ನಲ್ಲಿ ಭಾರೀ ಉಳಿತಾಯ ಪಕ್ಕಾ, 35% ರಿಯಾಯಿತಿ!

ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ ಆಫರ್ ವಿವರ: ದೀಪಾವಳಿ ವಿಶೇ‍ಷ ಹಿನ್ನೆಲೆ ಫ್ಲಿಪ್‌ಕಾರ್ಟ್‌ ವಿಶೇಷ ಸೇಲ್‌ (Flipkart diwali sale) ಆಯೋಜನೆ ಮಾಡಿದ್ದು, ಈ ಸೇಲ್‌ನಲ್ಲಿ 84,990ರೂ.ಗಳ ಮೂಲ ದರದಲ್ಲಿ ಕಾಣಿಸಿಕೊಂಡಿದ್ದ ಈ ಫೋನ್‌ ಅನ್ನು ಇದೀಗ 54,990 ರೂ.ಗಳಿಗೆ ನೀಡುತ್ತಿದೆ. ಅಂದರೆ ಫ್ಲಿಪ್‌ಕಾರ್ಟ್‌ ಈ ಫೋನ್‌ಗೆ 35% ರಿಯಾಯಿತಿ ನೀಡಿದೆ. ಪರಿಣಾಮ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಇದರೊಂದಿಗೆ ಇನ್ನೂ ಹಣ ಉಳಿತಾಯ ಮಾಡಬೇಕು ಎಂದುಕೊಂಡರೆ ಬ್ಯಾಂಕ್‌ ಆಫರ್ ಬಳಕೆ ಮಾಡಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ 1,750 ರೂ.ಗಳ ರಿಯಾಯಿತಿ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲ 10% ತ್ವರಿತ ರಿಯಾಯಿತಿ, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಲೇಟರ್‌ ಪೇ ಮೂಲಕ ಖರೀದಿ ಮಾಡಿದ್ರೆ 20,000 ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು.ಇದರೊಂದಿಗೆ ಡೆಬಿಟ್ ಕಾರ್ಡ್ ಇಎಮ್‌ಐ ಆಯ್ಕೆ ಸಹ ಇದ್ದು, 3,406 ರೂ.ಗಳನ್ನು ಪ್ರತಿ ತಿಂಗಳು ಪಾವತಿ ಮಾಡಬಹುದಾಗಿದೆ.

 ವಿವೋದ ಈ ಪ್ರೀಮಿಯಂ ಫೋನ್‌ನಲ್ಲಿ ಭಾರೀ ಉಳಿತಾಯ ಪಕ್ಕಾ, 35% ರಿಯಾಯಿತಿ!

ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್ 1500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆಯೊಂದಿಗೆ 6.78 ಇಂಚಿನ LTPO ಅಮೋಲೆಡ್‌ ಡಿಸ್‌ಪ್ಲೇ ಪಡೆದಿದೆ. ಈ ಡಿಸ್‌ಪ್ಲೇ HDR10+ ಅನ್ನು ಬೆಂಬಲಿಸಲಿದ್ದು, ಈ 2K+ ಡಿಸ್ಪ್ಲೇ ಕರ್ವ್ಡ್ ಅಂಚುಗಳನ್ನು ಹೊಂದಿದೆ. ಈ ಮೂಲಕ ವಿಡಿಯೋ ವೀಕ್ಷಣೆಯಲ್ಲಿ ಅಥವಾ ಇತ್ತಿತರೆ ಯಾವುದೇ ಚಟುವಟಿಕೆಯಲ್ಲಿ ಅತ್ಯುದ್ಭುತ ಅನುಭವ ಪಡೆದುಕೊಳ್ಳಬಹುದು.

ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 ಪ್ರೊಸೆಸರ್‌ ಬಲ ಪಡೆದಿಕೊಂಡಿದ್ದು, 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ನಿಂದ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ವಿಶೇಷ ಏನೆಂದರೆ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೀವು 4GB ವರ್ಚುವಲ್ RAM ಅನ್ನು ಸಹ ಈ ಫೋನ್‌ನಲ್ಲಿ ಪಡೆಯಬಹುದಾಗಿದೆ.

 ವಿವೋದ ಈ ಪ್ರೀಮಿಯಂ ಫೋನ್‌ನಲ್ಲಿ ಭಾರೀ ಉಳಿತಾಯ ಪಕ್ಕಾ, 35% ರಿಯಾಯಿತಿ!

ವಿವೋ X70 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅದರಲ್ಲಿ 50 ಮೆಗಾಪಿಕ್ಸೆನ್‌ನ ವೈಡ್-ಆಂಗಲ್ ಕ್ಯಾಮೆರಾ, 48 ಮೆಗಾಪಿಕ್ಸೆಲ್‌ನ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ, 12 ಮೆಗಾಪಿಕ್ಸೆಲ್‌ನ ಟೆಲಿಫೋಟೋ ಕ್ಯಾಮೆರಾ ಮತ್ತು 5x ಆಪ್ಟಿಕಲ್ ಜೂಮ್ ಲೆನ್ಸ, 48 ಮೆಗಾಪಿಕ್ಸೆಲ್‌ನ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವು ಗಿಂಬಲ್‌ನೊಂದಿಗೆ ಪ್ಯಾಕ್‌ ಆಗಿದೆ. ಇದರೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ ಹೊಂದಿದೆ. ಉಳಿದಂತೆ ಇದು 4500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ.

Best Mobiles in India

English summary
Vivo X70 Pro Plus Smartphone, which is the most demanded smartphone of Vivo, has been given a huge offer on the leading e-commerce site.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+