Home
ಸುದ್ದಿಜಾಲ

ಜಬರ್ದಸ್ತ್ ಕ್ಯಾಮೆರಾ ಇರುವ ಈ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಪ್ರಮುಖ ಆನ್‌ಲೈನ್‌ ಮಾರುಕಟ್ಟೆ ಎನಿಸಿರುವ ಅಮೆಜಾನ್‌ ಇ ಕಾಮರ್ಸ್‌ ಮೊಬೈಲ್‌ಗಳಿಗೆ ಅತ್ಯುತ್ತಮ ರಿಯಾಯಿತಿ ನೀಡುತ್ತ ಸಾಗಿ ಬಂದಿದೆ. ಸದ್ಯ ಅಮೆಜಾನ್‌ ತಾಣದಲ್ಲಿ ವಿವೋ X80 ಪ್ರೊ ಮೊಬೈಲ್‌ ಬಿಗ್ ರಿಯಾಯಿತಿ ಲಭ್ಯ ಮಾಡಿದ್ದು, ವಿವೋ X80 ಪ್ರೊ ಮೊಬೈಲ್‌ ಭಾರೀ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ. ಈ ಫೋನಿನ ಕ್ಯಾಮೆರಾ ಹಾಗೂ 12 GB RAM ಹಾಗೂ 256 GB ಸ್ಟೋರೇಜ್ ಆಯ್ಕೆಯು ಹೈಲೈಟ್ ಎನಿಸಿದೆ.

ಹೌದು, ಅಮೆಜಾನ್‌ ವೆಬ್‌ಸೈಟ್‌ ನಲ್ಲಿ ವಿವೋ X80 ಪ್ರೊ ಮೊಬೈಲ್‌ ಶೇ. 31% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಫೋನಿನ 12GB RAM + 256 GB ಸ್ಟೋರೇಜ್‌ ವೇರಿಯಂಟ್‌ 59,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ ಫೋನಿಗೆ ಲಭ್ಯ ಇತರೆ ಎಲ್ಲ ಆಫರ್‌ಗಳನ್ನು ಸೇರಿದರೆ ಈ ಫೋನ್‌ ಅನ್ನು ಮತ್ತಷ್ಟು ಬೊಂಬಾಟ್ ಬೆಲೆಗೆ ಖರೀದಿಸಲು ಅವಕಾಶ ಇದೆ.

ಜಬರ್ದಸ್ತ್ ಕ್ಯಾಮೆರಾ ಇರುವ ಈ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಅಂದಹಾಗೆ ವಿವೋ X80 ಪ್ರೊ ಮೊಬೈಲ್‌ ನಾಲ್ಕು ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಹಾಗೆಯೇ ಮುಂಭಾಗದಲ್ಲಿ ಈ ಫೋನ್ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಜೊತೆಗೆ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಕೂಡಾ ಒಳಗೊಂಡಿದೆ. ಹಾಗಾದರೇ ವಿವೋ X80 ಪ್ರೊ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌ ಹಾಗೂ ರಚನೆ

ವಿವೋ X80 ಪ್ರೊ ಮೊಬೈಲ್‌ 6.56 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 1080 x 2400 ಪಿಕ್ಸೆಲ್‌ನ ಫುಲ್ ಹೆಚ್‌ಡಿ+ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 401 PPI ಪಿಕ್ಸೆಲ್ ಸಾಂದ್ರತೆ ಹೊಂದಿದ್ದು, 20: 9 ಆಕಾರ ಅನುಪಾತ ಇದೆ. ಇದರ ಜೊತೆಗೆ ಕ್ಯಾಮೆರಾ ಉದ್ದೇಶಕ್ಕೆ ಪಂಚ್-ಹೋಲ್ ವಿನ್ಯಾಸ ಪಡೆದಿದೆ.

ಜಬರ್ದಸ್ತ್ ಕ್ಯಾಮೆರಾ ಇರುವ ಈ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಯಾವ ಪ್ರೊಸೆಸರ್‌ ಪವರ್ ಲಭ್ಯ

ವಿವೋ X80 ಪ್ರೊ ಮೊಬೈಲ್‌ ಆಕ್ಟಾ-ಕೋರ್ ಡೈಮೆನ್ಸಿಟಿ 1200 CPU ಬಲ ಹೊಂದಿದ್ದು, ಮಾಲಿ G77 MC9 GPU ಗ್ರಾಫಿಕ್ಸ್ ಆಯ್ಕೆ ಸಹ ಪಡೆದುಕೊಂಡಿದೆ. ಇದರೊಂದಿಗೆ 12GB RAM ಹಾಗೂ 256 GB ಸ್ಟೋರೇಜ್ ಸಾಮರ್ಥ್ಯ ಪಡೆದಿದ್ದು, ಇದಲ್ಲದೇ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಜಬರ್ದಸ್ತ್ ಕ್ಯಾಮೆರಾ ಇರುವ ಈ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಕ್ವಾಡ್ ಕ್ಯಾಮೆರಾ ಸೆನ್ಸಾರ್

ವಿವೋ X80 ಪ್ರೊ ಮೊಬೈಲ್‌ ಕ್ವಾಡ್‌ ಕ್ಯಾಮೆರಾ ರಚನೆಯೊಂದಿಗೆ ಕಾಣಿಸಿಕೊಂಡಿದ್ದು, 50 ಮೆಗಾ ಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್‌ ಆಗಿದ್ದು, ನಾಲ್ಕನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್ ಲೆನ್ಸ್ ಆಯ್ಕೆ ಒದಗಿಸಲಾಗಿದೆ. ಹಾಗೆಯೇ ಇದರೊಂದಿಗೆ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಬಿಗ್ ಬ್ಯಾಟರಿ ಹಾಗೂ ಇತರೆ ಆಯ್ಕೆಗಳು

ವಿವೋ X80 ಪ್ರೊ ಫೋನ್‌ 4,700mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 80W ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್‌ ಪಡೆದಿದೆ. ಇನ್ನು ಈ ಫೋನ್ 5G, 4G VoLTE, ವೈ ಫೈ 802.11 b/g/n/ac, ಬ್ಲೂಟೂತ್ ಆವೃತ್ತಿ v5.2, ಜಿಪಿಎಸ್‌, ಓಟಿಜಿ ಬೆಂಬಲ, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್-ಸಿ ಯ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.

Best Mobiles in India

English summary
ವಿವೋ X80 ಪ್ರೊ ಮೊಬೈಲ್‌ ಶೇ. 31% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಫೋನಿನ 12GB RAM + 256 GB ಸ್ಟೋರೇಜ್‌ ವೇರಿಯಂಟ್‌ 59,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+