Home
ಸುದ್ದಿಜಾಲ

ವಿವೋದ ಈ ದುಬಾರಿ ಫೋನ್ ಈಗ ಕೈಗೆಟಕುವ ದರದಲ್ಲಿ; ಬೊಂಬಾಟ್‌ ಡಿಸ್ಕೌಂಟ್‌!

ಸ್ಮಾರ್ಟ್‌ಫೋನ್‌ಗಳ ಖರೀದಿ ಈ ಹಿಂದೆಂದಿಗಿಂತಲೂ ಸರಳವಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಆಫರ್‌ ಬೆಲೆಗೆ ಫೋನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಇನ್ನೂ ಕಡಿಮೆ ಬೆಲೆಗೆ ಫೋನ್‌ಗಳನ್ನು ಖರೀದಿ ಮಾಡಬಹುದು. ಈ ನಡುವೆ ವಿವೋದ ಈ ಜನಪ್ರಿಯ ಫೋನ್‌ಗೂ ದೊಡ್ಡ ಆಫರ್‌ ನೀಡಲಾಗಿದೆ.

ಹೌದು, ವಿವೋದ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದ್ದು, ಅದರಂತೆ ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಫೋನ್‌ಗಳನ್ನು ಲಾಂಚ್‌ ಮಾಡಿಕೊಂಡು ಬರಲಾಗುತ್ತಿದೆ. ಈ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ವಿವೋ X80 ಪ್ರೊ ಫೋನ್‌ಗೆ ಬರೋಬ್ಬರಿ 31% ಡಿಸ್ಕೌಂಟ್‌ ನೀಡಲಾಗಿದೆ. ಈ ಫೋನ್ 12GB RAM ಆಯ್ಕೆ ಹೊಂದಿದ್ದು, ಕ್ವಾಡ್‌ ಕ್ಯಾಮೆರಾ ರಚನೆ ಮೂಲಕ ವಿಶೇ‍ಷ ಎನಿಸಿದೆ. ಹಾಗಿದ್ರೆ, ತಡಯಾಕೆ ಬನ್ನಿ ಈ ಫೋನ್‌ನ ಸಂಪೂರ್ಣ ವಿವರ ತಿಳಿಯೋಣ.

ವಿವೋದ ಈ ದುಬಾರಿ ಫೋನ್ ಈಗ ಕೈಗೆಟಕುವ ದರದಲ್ಲಿ; ಬೊಂಬಾಟ್‌ ಡಿಸ್ಕೌಂಟ್‌!

ವಿವೋ X80 ಪ್ರೊ ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್ 6.56 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 1080 x 2400 ಪಿಕ್ಸೆಲ್‌ನ ಫುಲ್ ಹೆಚ್‌ಡಿ+ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 401 PPI ಪಿಕ್ಸೆಲ್ ಸಾಂದ್ರತೆ ಹೊಂದಿದ್ದು, 20: 9 ಆಕಾರ ಅನುಪಾತದೊಂದಿಗೆ ಪ್ಯಾಕ್‌ ಆಗಿದೆ. ಜೊತೆಗೆ ಕ್ಯಾಮೆರಾ ಉದ್ದೇಶಕ್ಕೆ ಪಂಚ್-ಹೋಲ್ ವಿನ್ಯಾಸ ಪಡೆದಿದೆ.

ವಿವೋ X80 ಪ್ರೊ ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಡೈಮೆನ್ಸಿಟಿ 1200 CPU ಬಲ ಹೊಂದಿದ್ದು, ಮಾಲಿ G77 MC9 GPU ಗ್ರಾಫಿಕ್ಸ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 12GB RAM ಹಾಗೂ 256GB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಸ್ಟೋರೇಜ್‌ ಸಾಮರ್ಥ್ಯ ಪಡೆಯಬಹುದು.

ವಿವೋ X80 ಪ್ರೊ ಫೋನ್‌ನ ಕ್ಯಾಮೆರಾ ರಚನೆ: ಈ ವಿಶೇಷ ಫೋನ್ ಕ್ವಾಡ್‌ ಕ್ಯಾಮೆರಾ ರಚನೆಯೊಂದಿಗೆ ಕಾಣಿಸಿಕೊಂಡಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, ಎರಡು 12 ಮೆಗಾಪಿಕ್ಸೆಲ್‌ ಸೆನ್ಸರ್‌ ಹಾಗೂ 8 ಮೆಗಾಪಿಕ್ಸೆಲ್‌ ಲೆನ್ಸ್ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ವಿವೋ X80 ಪ್ರೊ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಹಾಗೂ ಇತರೆ: ಉಳಿದಂತೆ ಈ ಫೋನ್ 4,700mAh ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, ಇದು 80W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದರೊಂದಿಗೆ ಎರಡು SIM ಕಾರ್ಡ್ ಸ್ಲಾಟ್‌ ಆಯ್ಕೆ, 5G, 4G VoLTE, ವೈ ಫೈ 802.11 b/g/n/ac, ಬ್ಲೂಟೂತ್ ಆವೃತ್ತಿ v5.2, ಜಿಪಿಎಸ್‌, ಓಟಿಜಿ ಬೆಂಬಲ, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್-ಸಿ ಯ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ವಿವೋ X80 ಪ್ರೊ ಸ್ಮಾರ್ಟ್‌ಫೋನ್‌ನ ಆಫರ್‌ ವಿವರ: ಈ ಫೋನ್‌ ಪ್ರಮುಖ ವಿಚಾರಕ್ಕೆ ಬರುವುದಾದರೆ ಇದು 86,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು. ಆದರೆ, ನೀವು ಇದನ್ನು 59,999 ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಪ್ರಮುಖ ಇಕಾಮರ್ಸ್‌ ಸೈಟ್‌ ಫ್ಲಿಪ್‌ಕಾರ್ಟ್‌ ಈ ಫೋನ್‌ಗೆ 31% ರಿಯಾಯಿತಿ ನೀಡಿದೆ. ಇದರೊಂದಿಗೆ ಕೆಲವು ಬ್ಯಾಂಕ್‌ ಕೊಡುಗೆಗಳು ಸಹ ಲಭ್ಯ.

ವಿವೋದ ಈ ದುಬಾರಿ ಫೋನ್ ಈಗ ಕೈಗೆಟಕುವ ದರದಲ್ಲಿ; ಬೊಂಬಾಟ್‌ ಡಿಸ್ಕೌಂಟ್‌!

ಇದರೊಂದಿಗೆ ವಿವೋ X80 5G ಸ್ಮಾರ್ಟ್‌ಫೋನ್‌ಗೂ ಸಹ 21% ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ. ಈ ಫೋನ್‌ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 518ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 1440 x 3200 ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 1 ಪ್ರೊಸೆಸರ್‌ ಬಲ ಹೊಂದಿದ್ದು, ಅಡ್ರಿನೋ 730 ಜಿಪಿಯು ಶಕ್ತಿ ಪಡೆದಿದೆ.

ಉಳಿದಂತೆ ಈ ಫೋನ್ 46,990ರೂ.ಗಳ ಆಫರ್‌ ಬೆಲೆ ಪಡೆದುಕೊಂಡಿದೆ. ಇದರ ಸಾಮಾನ್ಯ ದರ 59,999 ರೂ.ಗಳು. ಇದರೊಂದಿಗೆ ಬಳಕೆದಾರರು ಕೆಲವು ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದರೆ ಇನ್ನೂ ಹೆಚ್ಚಿನ ಡಿಸ್ಕೌಂಟ್‌ ಲಭ್ಯ ಇರಲಿದೆ.

Best Mobiles in India

English summary
The leading e-commerce site has offered a whopping 31% discount on the Vivo X80 Pro phone. This phone has a 12GB RAM option and is unique with a quad camera setup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+