Home
ಸುದ್ದಿಜಾಲ

ವಿವೋ X90 ಮತ್ತು ವಿವೋ X90 ಪ್ರೊ ಖರೀದಿಗೆ ಲಭ್ಯ!..ಆಫರ್‌ ಇದೆಯಾ?

ವಿವೋ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ವಿವೋ X90 ಸರಣಿಯ ಫೋನ್‌ಗಳು ಈಗಾಗಲೇ ದೈತ್ಯ ಫೋನ್‌ಗಳಾಗಿ ಬಿಂಬಿತವಾಗಿವೆ. ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಈ ವಿವೋ X90 ಮತ್ತು ವಿವೋ X90 ಪ್ರೊ ಫೋನ್‌ಗಳು ಈಗ ಮಾರಾಟ ಪ್ರಾರಂಭಿಸಿದ್ದು, ಗ್ರಾಹಕರು ಖರೀದಿಸಬಹುದಾಗಿದೆ.

ಹೌದು, ವಿವೋ ಸಂಸ್ಥೆಯ ವಿವೋ X90 ಸರಣಿ ಫೋನ್‌ಗಳು ಮೇ 5, 2023 ರಿಂದ ಮಧ್ಯರಾತ್ರಿಯಲ್ಲಿ ಫ್ಲಿಪ್‌ಕಾರ್ಟ್ ಸೇರಿದಂತೆ ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಇತರೆ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇನ್ನು ಈ ಫೋನ್‌ಗಳು 8GB + 256GB ಮತ್ತು 12GB + 256GB ವೇರಿಯಂಟ್ ಆಯ್ಕೆ ಪಡೆದಿವೆ.

ವಿವೋ X90 ಮತ್ತು ವಿವೋ X90 ಪ್ರೊ ಖರೀದಿಗೆ ಲಭ್ಯ!..ಆಫರ್‌ ಇದೆಯಾ?

ವಿವೋ X90 ಪ್ರೊ ಫೋನಿನ 12GB + 256GB ರೂಪಾಂತರಕ್ಕೆ 84,999 ರೂ. ಆಗಿದೆ. ಇದು ಲೆಜೆಂಡರಿ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಹಾಗೆಯೇ ವಿವೋ X90 ಫೋನ್‌ (8GB+256GB ವೇರಿಯಂಟ್ ಬೆಲೆ 59,999ರೂ. ಆಗಿದ್ದು, 12GB + 256GB ವೇರಿಯಂಟ್‌ 63,999ರೂ. ಆಗಿದೆ. ಹಾಗಾದರೆ ವಿವೋ X90 ಸರಣಿಯ ಫೋನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ವಿವೋ X90 ಮತ್ತು ವಿವೋ X90 ಪ್ರೊ ಖರೀದಿಗೆ ಲಭ್ಯ!..ಆಫರ್‌ ಇದೆಯಾ?

ವಿವೋ X90 ಡಿಸ್‌ಪ್ಲೇ ರಚನೆ : ವಿವೋ X90 ಸ್ಮಾರ್ಟ್‌ಫೋನ್‌ 6.76 ಇಂಚಿನ ಕರ್ವ್ಡ FHD+ Q9 ಅಲ್ಟ್ರಾ-ವಿಷನ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾಗಾಗಿ ಪಂಚ್-ಹೋಲ್ ಕಟೌಟ್‌ ಮಾದರಿಯ ಡಿಸ್‌ಪ್ಲೇ ಇದೆ. ಇದರೊಂದಿಗೆ 2,800 × 1,260 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವುದು ಮತ್ತಷ್ಟು ಪ್ರಮುಖ ಎನಿಸಿದೆ.

ವಿವೋ X90 ಪ್ರೊಸೆಸರ್‌ ಪವರ್‌ : ವಿವೋ X90 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್‌ ಪ್ರೊಸೆಸರ್‌ ಮೂಲಕ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್ ಪಡೆದಿದೆ. ಈ ಫೋನ್‌ ಎರಡು ಮೆಮೊರಿ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB + 256GB ಮತ್ತು 12GB + 256GB ಆಗಿವೆ.

ವಿವೋ X90 ಮತ್ತು ವಿವೋ X90 ಪ್ರೊ ಖರೀದಿಗೆ ಲಭ್ಯ!..ಆಫರ್‌ ಇದೆಯಾ?

ವಿವೋ X90 ಕ್ಯಾಮೆರಾ ಸೆನ್ಸಾರ್ : ವಿವೋ X90 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಆಗಿದೆ. ಉಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್‌ ಹಾಗೂ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇವೆ. ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ.

ವಿವೋ X90 ಬ್ಯಾಟರಿ ಬಲ : ವಿವೋ X90 ಸ್ಮಾರ್ಟ್‌ಫೋನ್‌ 4,810mAh ಸಾಮರ್ಥ್ಯದ ಬ್ಯಾಟರಿ ಪವರ್‌ ಪಡೆದಿದ್ದು, ಇದಕ್ಕೆ ಪೂರಕವಾಗಿ 120W ಡ್ಯುಯಲ್ ಸೆಲ್ ಫಾಸ್ಟ್‌ ಚಾರ್ಜಿಂಗ್ ಬೆಂಬಲ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G LTE, ಡ್ಯುಯಲ್-ಬ್ಯಾಂಡ್ ವೈ ಫೈ 6, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್ ಆಯ್ಕೆ ಪಡೆದಿದೆ. ಜೊತೆಗೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, IP64 ರೇಟಿಂಗ್ ಇದ್ದು, ಧೂಳು ಮತ್ತು ನೀರು ನಿರೋಧಕವಾಗಿದೆ.

ವಿವೋ X90 ಬೆಲೆ : ವಿವೋ X90 ಫೋನ್‌ ಭಾರತದಲ್ಲಿ ಎರಡು ವೇರಿಯಂಟ್‌ ಆಯ್ಕೆಗಳಲ್ಲಿ ಬಿಡುಗಡೆ ಆಗಿದೆ. 8GB + 256GB ವೇರಿಯಂಟ್‌ ಬೆಲೆಯು 59,999ರೂ. ಆಗಿದೆ. ಹಾಗೆಯೇ 12GB + 256GB ವೇರಿಯಂಟ್‌ ದರವು 63,999ರೂ. ಆಗಿದೆ. ಗ್ರಾಹಕರು ಹೆಚ್‌ಡಿಎಫ್‌ಸಿ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಿಸಿ ವಹಿವಾಟು ಬಳಸಿಕೊಂಡು 8,000ರೂ. ಇನ್‌ಸ್ಟಂಟ್‌ ರಿಯಾಯಿತಿ ಲಭ್ಯವಾಗಲಿದೆ.

Best Mobiles in India

English summary
Vivo X90 and X90 Pro sale start in india: check price and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+