ವಿವೋ X90 ಪ್ರೊ ಬೆಲೆಯಲ್ಲಿ ಬರೋಬ್ಬರಿ 10,000ರೂ, ಇಳಿಕೆ!..ಭಾರೀ ಉಳಿತಾಯ!
ಜನಪ್ರಿಯ ವಿವೋ ಕಂಪನಿಯು ದೇಶಿಯ ಮಾರುಕಟ್ಟೆಗೆ ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿರುವ ವಿವೋ X90 ಸ್ಮಾರ್ಟ್‌ಫೋನ್ ಸರಣಿ ಪರಿಚಯಿಸಿತು. ದೈತ್ಯ ಫೀಚರ್ಸ್‌ಗಳಿಂದ ಗಮನ ಸೆಳೆದಿರುವ ಈ ಸ್ಮಾರ್ಟ್‌ಫೋನ್ ಸರಣಿಯು ವಿವೋ X90 ಹಾಗೂ ವಿವೋ X90 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಆ ಪೈಕಿ ಈಗ ವಿವೋ X90 ಪ್ರೊ ಫೋನ್ ಸಿಕ್ಕಾಪಟ್ಟೆ ಬೆಲೆ ಇಳಿಕೆ ಪಡೆದುಕೊಂಡಿದೆ.
ಹೌದು, ವಿವೋ X90 ಪ್ರೊ ಫೋನ್ ಆಕರ್ಷಕ ಬೆಲೆ ಕಡಿತ ಪಡೆದಿದ್ದು, ಗ್ರಾಹಕರು 74,999ರೂ. ಗಳಿಗೆ ಖರೀದಿಸಬಹುದಾಗಿದೆ. ಈ ವಿಶೇಷ ಕೊಡುಗೆಯು ಅಕ್ಟೋಬರ್ 20 ರಿಂದ (ಇಂದಿನಿಂದ) ಅನ್ವಯವಾಗಲಿದೆ. ಆಸಕ್ತ ಖರೀದಿದಾರರು ಈ ಫೋನ್ ಅನ್ನು ಅಧಿಕೃತ ವಿವೋ ವೆಬ್‌ಸೈಟ್‌ನಲ್ಲಿ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ಅಥವಾ ಪ್ರಮುಖ ರಿಟೇಲ್ ಔಟ್‌ಲೇಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ಪಡೆದುಕೊಂಡಿದ್ದು, 4870mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಹಾಗಾದರೆ ವಿವೋ X90 ಪ್ರೊ ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಆಫರ್ ಮಾಹಿತಿ ಹೀಗಿದೆ
ವಿವೋ X90 ಪ್ರೊ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು 10,000ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು ಅಥವಾ ಅವರು ಆಯ್ದ ಬ್ಯಾಂಕ್‌ಗಳ ಮೂಲಕ 24 ತಿಂಗಳ ನೋ-ಕಾಸ್ಟ್ ಇಎಂಐ ಅನ್ನು ಆಯ್ಕೆ ಮಾಡಬಹುದಾಗಿದೆ. ಇದಲ್ಲದೇ ಪ್ರತಿ ಖರೀದಿಯೊಂದಿಗೆ ವಿವೋ V-Shield ಪ್ರೊಟೆಕ್ಷನ್ ಯೋಜನೆ ಮೇಲೆ ಶೇ. 40% ವರೆಗೆ ರಿಯಾಯಿತಿಯೊಂದಿಗೆ ಕ್ಯಾಶಿಫೈ ನಲ್ಲಿ ಸುಮಾರು 8000 ರೂ. ವರೆಗೆ ಎಕ್ಸ್‌ಚೇಂಜ್ ಬೋನಸ್ ಸಹ ಪಡೆಯಲು ಅವಕಾಶ ಇದೆ.
ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೀಗಿದೆ
ವಿವೋ X90 ಪ್ರೊ ಫೋನ್ 6.78 ಇಂಚಿನ ಅಲ್ಟ್ರಾ ವಿಷನ್ AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಸ್ಕ್ರೀನ್ ಕರ್ವ್ ಮಾದರಿಯ ರಚನೆಯನ್ನು ಒಳಗೊಂಡಿದ್ದು, ಹೋಲ್-ಪಂಚ್ ಕಟೌಟ್ ವಿನ್ಯಾಸದಲ್ಲಿ ಇದೆ.
ಪ್ರೊಸೆಸರ್ ಮತ್ತು ಮೆಮೊರಿ ಮಾಹಿತಿ ಇಲ್ಲಿದೆ
ವಿವೋ X90 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ಇದು ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಅನ್ನು ಪಡೆದಿದೆ. ಅಲ್ಲದೇ 12GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದುಕೊಂಡಿದೆ.

ಟ್ರಿಪಲ್ ಕ್ಯಾಮೆರಾ ರಚನೆ ಇದೆ
ವಿವೋ ಕಂಪನಿಯ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ.
ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಪವರ್ ಲಭ್ಯ
ವಿವೋ X90 ಪ್ರೊ ಮೊಬೈಲ್ 4870mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, 120W ಸಾಮರ್ಥ್ಯದ ಫ್ಲಾಶ್ ಚಾರ್ಜ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ 50W ಸಾಮರ್ಥ್ಯದಲ್ಲಿ ವಾಯರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಆಯ್ಕೆ ಪಡೆದಿಕೊಂಡಿದೆ. ಜೊತೆಗೆ ಇದು IP64 ಸೌಲಭ್ಯ ಸಹ ಪಡೆದುಕೊಂಡಿದೆ.


Click it and Unblock the Notifications








