Home
ಸುದ್ದಿಜಾಲ

ವಿವೋ X90 ಸ್ಮಾರ್ಟ್‌ಫೋನ್‌ ಲಾಂಚ್‌; ಅಚ್ಚರಿ ಫೀಚರ್ಸ್‌ ಬಗ್ಗೆ ತಿಳಿದುಕೊಳ್ಳಿ!

ಮಾರುಕಟ್ಟೆಯಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ಸ್‌ ತಯಾರಿಕಾ ವಿಭಾಗದಲ್ಲಿ ವಿವೋ ಕಂಪೆನಿಯು ಸಹ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಕಂಪೆನಿಯಿಂದ ಈಗಾಗಲೇ ಲಾಂಚ್ ಆಗಿರುವ ವಿವೋ Y55s 5G ಸ್ಮಾರ್ಟ್‌, ವಿವೋ Y35 ಸೇರಿದಂತೆ ಇನ್ನಿತರೆ ಸ್ಮಾರ್ಟ್‌ಫೋನ್‌ಗಳು ಭಾರೀ ಡಿಸ್ಕೌಂಟ್‌ನೊಂದಿಗೆ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿಕೊಂಡಿವೆ. ಇದರ ನಡುವೆಯೇ ವಿವೋ ಕಂಪೆನಿಯು ವಿವೋ X90 ಸ್ಮಾರ್ಟ್‌ಫೋನ್‌ ಸರಣಿಯನ್ನು ಲಾಂಚ್‌ ಮಾಡಿದೆ. ಈ ಫೋನ್‌ 120W ಸೂಪರ್‌ ಪಾಸ್ಟ್‌ ಚಾರ್ಜಿಂಗ್ ಫೀಚರ್ಸ್‌ ಪಡೆದಿರುವುದು ವಿಶೇಷ.

ವಿವೋ X90 ಸ್ಮಾರ್ಟ್‌ಫೋನ್‌ ಲಾಂಚ್‌; ಅಚ್ಚರಿ ಫೀಚರ್ಸ್‌ ಬಗ್ಗೆ ತಿಳಿದುಕೊಳ್ಳಿ!

ಹೌದು, ಸ್ಮಾರ್ಟ್‌ಫೋನ್ ವಿಭಾಗದಲ್ಲಿ ವಿವೋ ಫೋನ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ಕಾರಣಕ್ಕಾಗಿಯೇ ಕಾಲಕಾಲಕ್ಕೆ ಸುಧಾರಿತ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಿರುವ ವಿವೋ ಇದೀಗ ವಿವೋ X90 (Vivo X90) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ವಿವೋ X90 ಡಿಸ್‌ಪ್ಲೇ

ವಿವೋ X90 ಸ್ಮಾರ್ಟ್‌ಫೋನ್‌ 6.76 ಇಂಚಿನ ಕರ್ವ್ಡ FHD+ Q9 ಅಲ್ಟ್ರಾ-ವಿಷನ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಆಯ್ಕೆ ನೀಡಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ಪಂಚ್-ಹೋಲ್ ಕಟೌಟ್‌ ಶೈಲಿಯಲ್ಲಿ ಈ ಡಿಸ್‌ಪ್ಲೇ ಕಂಡುಬಂದಿದೆ. ಇದರೊಂದಿಗೆ HDR10+ ಹಾಗೂ 2,800×1,260 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವುದು ಮತ್ತಷ್ಟು ಆಕರ್ಷಕವಾಗಿದೆ.

ವಿವೋ X90 ಸ್ಮಾರ್ಟ್‌ಫೋನ್‌ ಲಾಂಚ್‌; ಅಚ್ಚರಿ ಫೀಚರ್ಸ್‌ ಬಗ್ಗೆ ತಿಳಿದುಕೊಳ್ಳಿ!

ವಿವೋ X90 ಸ್ಮಾರ್ಟ್‌ಫೋನ್‌ನ ಪ್ರೊಸೆಸರ್‌ ಯಾವುದು?

ವಿವೋ X90 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್‌ ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಬರೋಬ್ಬರಿ 12GB ವರೆಗಿನ RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿರುವುದರಿಂದ ಈ ಫೋನ್‌ ಕಾರ್ಯಕ್ಷಮತೆ ಹೆಚ್ಚಾಗಿರಲಿದೆ.

ವಿವೋ X90 ಕ್ಯಾಮೆರಾ ರಚನೆ

ಓಐಎಸ್‌ ಸಕ್ರಿಯಗೊಳಿಸಿದ 50MP ಪ್ರಮುಖ ಕ್ಯಾಮೆರಾದ ಆಯ್ಕೆಯೊಂದಿಗೆ ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ. ಇನ್ನುಳಿದಂತೆ 12MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹಾಗೂ 12MP 2x ಪೋರ್ಟ್ರೇಟ್ ಲೆನ್ಸ್‌ ಕ್ಯಾಮೆರಾ ಪ್ರಿಯರಿಗೆ ಖಂಡಿತಾ ಇಷ್ಟವಾಗಲಿದೆ. ಇನ್ನು ಸೆಲ್ಫಿಗಾಗಿ ಈ ಫೋನ್ 32 MP ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ವಿವೋ X90 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ವಿವೋ X90 ಸ್ಮಾರ್ಟ್‌ಫೋನ್‌ 4,810mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯ ಜೊತೆಗೆ 120W ಡ್ಯುಯಲ್ ಸೆಲ್ ಫ್ಲ್ಯಾಶ್‌ ಚಾರ್ಜಿಂಗ್ ಬೆಂಬಲ ಹೊಂದಿದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಈ ಹೊಸ ಫೋನ್‌ 5G, 4G LTE, ಡ್ಯುಯಲ್-ಬ್ಯಾಂಡ್ ವೈ ಫೈ 6, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್ ಮತ್ತು ಚಾರ್ಜಿಂಗ್ ಮತ್ತು ಡೇಟಾ ಸಂಪರ್ಕಕ್ಕಾಗಿ ಯುಎಸ್‌ಬಿ ಟೈಪ್-ಸಿ 2.0 ಪೋರ್ಟ್ ಅನ್ನು ಹೊಂದಿದೆ. ಇದರೊಂದಿಗೆ ಭದ್ರತೆಗಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿರುವುದು ಬಳಕೆದಾರರಿಗೆ ಹಲವು ಅನುಕೂಲ ಮಾಡಿಕೊಡಲಿದೆ. ಇದಿಷ್ಟೇ ಅಲ್ಲದೆ, IP64 ರೇಟಿಂಗ್ ಇದ್ದು, ಧೂಳು ಮತ್ತು ನೀರು ನಿರೋಧಕವಾಗಿದೆ.

ವಿವೋ X90 ಸ್ಮಾರ್ಟ್‌ಫೋನ್‌ ಲಾಂಚ್‌; ಅಚ್ಚರಿ ಫೀಚರ್ಸ್‌ ಬಗ್ಗೆ ತಿಳಿದುಕೊಳ್ಳಿ!

ಬೆಲೆ ಹಾಗೂ ಲಭ್ಯತೆ

ವಿವೋ X90 ಅನ್ನು ಇಂದು ಅಧಿಕೃತವಾಗಿ ಮಲೇಷ್ಯಾದಲ್ಲಿ ಲಾಂಚ್‌ ಮಾಡಲಾಗಿದ್ದು, ಈ ಫೋನ್‌ 12GB RAM ಹಾಗೂ 256GB ROM ನ ಒಂದೇ ವೇರಿಯಂಟ್‌ನಲ್ಲಿ ಲಭ್ಯ. ಹಾಗೆಯೇ ಈ ಫೋನ್‌ ಮಲೇಷ್ಯಾದಲ್ಲಿ 70,000 ರೂ. ಗಳಲ್ಲಿ ಲಭ್ಯವಿದೆ. ಆದರೆ ಭಾರತದಲ್ಲಿ ಈ ಫೋನ್‌ಗೆ ಬೆಲೆ ಎಷ್ಟಿರಲಿದೆ ಎನ್ನುವ ಮಾಹಿತಿ ತಿಳಿದುಬಂದಿಲ್ಲ. ಹಾಗೆಯೇ ಬ್ರೀಜ್ ಬ್ಲೂ ಮತ್ತು ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಈ ಫೋನ್ ಲಭ್ಯವಿದೆ. ಈ ಫೋನ್‌ ಖರೀದಿಯ ಮೇಲೆ ಬಳಕೆದಾರರು 1 ವರ್ಷದ ವಿಸ್ತೃತ ವಾರಂಟಿ ಪಡೆಯಬಹುದಾಗಿದೆ. ಜೊತೆಗೆ 1 ವರ್ಷದ ಸ್ಕ್ರೀನ್ ಕ್ರ್ಯಾಕ್ ರಕ್ಷಣೆ ಮತ್ತು 1 ವರ್ಷದ ಬ್ಯಾಟರಿ ವಾರಂಟಿ ಸಹ ಲಭ್ಯವಾಗುವುದರಿಂದ ಗ್ರಾಹಕರಿಗೆ ಸಾಕಷ್ಟು ಅನುಕೂಲ ಉಂಟಾಗಲಿದೆ.

Best Mobiles in India

English summary
Vivo has launched the X90 smartphone series globally. the VivoX90 smartphone has got a triple rear camera option and 120W super fast charging features. details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+