ಭಾರತದಲ್ಲಿ ವಿವೋ X90 ಬಿಡುಗಡೆ!..ಈ ದೈತ್ಯ ಫೋನ್ ಬೆಲೆ ಎಷ್ಟು ಗೊತ್ತಾ?
ವಿವೋ ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ ವಿವೋ X90 ಸ್ಮಾರ್ಟ್‌ಫೊನ್ ಸರಣಿ (Vivo X90) ಇಂದು ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸರಣಿಯು ವಿವೋ X90 ಮತ್ತು ವಿವೋ X90 ಪ್ರೊ ಹೆಸರಿನ ಎರಡು ದೈತ್ಯ ಫೋನ್‌ಗಳನ್ನು ಹೊಂದಿದ್ದು, ಆ ಪೈಕಿ ವಿವೋ X90 ಗಮನ ಸೆಳೆದಿದೆ.
ಹೌದು, ವಿವೋ ಹೊಸದಾಗಿ ವಿವೋ X90 ಫೋನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಫೋನ್ ಮೀಡಿಯಾ ಟೆಕ್‌ದ ಡೈಮೆನ್ಸಿಟಿ 9200 SoC ಪ್ರೊಸೆಸರ್ ಒಳಗೊಂಡಿದ್ದು, Zeiss ಆಪ್ಟಿಕ್ಸ್ ಕ್ಯಾಮೆರಾ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಇದು 120W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.

ಇನ್ನು ಈ ನೂತನ ಫೋನ್ ಎರಡು ವೇರಿಯಂಟ್ ಆಯ್ಕೆಗಳೊಂದಿಗೆ ಲಗ್ಗೆ ಇಟ್ಟಿದ್ದು, ಅವುಗಳು ಕ್ರಮವಾಗಿ 8GB + 256GB ಮತ್ತು 12GB + 256GB ಆಗಿವೆ. ಹಿಂಬದಿಯ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಇದೆ. ಇನ್ನು ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗಾದರೆ ವಿವೋ X90 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ X90 ಡಿಸ್‌ಪ್ಲೇ ರಚನೆ : ವಿವೋ X90 ಸ್ಮಾರ್ಟ್‌ಫೋನ್ 6.76 ಇಂಚಿನ ಕರ್ವ್ಡ FHD+ Q9 ಅಲ್ಟ್ರಾ-ವಿಷನ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾಗಾಗಿ ಪಂಚ್-ಹೋಲ್ ಕಟೌಟ್ ಮಾದರಿಯ ಡಿಸ್‌ಪ್ಲೇ ಇದೆ. ಇದರೊಂದಿಗೆ 2,800 × 1,260 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವುದು ಮತ್ತಷ್ಟು ಪ್ರಮುಖ ಎನಿಸಿದೆ.
ವಿವೋ X90 ಪ್ರೊಸೆಸರ್ ಪವರ್ : ವಿವೋ X90 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಈ ಫೋನ್ ಎರಡು ಮೆಮೊರಿ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB + 256GB ಮತ್ತು 12GB + 256GB ಆಗಿವೆ.

ವಿವೋ X90 ಕ್ಯಾಮೆರಾ ಸೆನ್ಸಾರ್ : ವಿವೋ X90 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಆಗಿದೆ. ಉಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಹಾಗೂ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇವೆ. ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ.
ವಿವೋ X90 ಬ್ಯಾಟರಿ ಬಲ : ವಿವೋ X90 ಸ್ಮಾರ್ಟ್‌ಫೋನ್ 4,810mAh ಸಾಮರ್ಥ್ಯದ ಬ್ಯಾಟರಿ ಪವರ್ ಪಡೆದಿದ್ದು, ಇದಕ್ಕೆ ಪೂರಕವಾಗಿ 120W ಡ್ಯುಯಲ್ ಸೆಲ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G LTE, ಡ್ಯುಯಲ್-ಬ್ಯಾಂಡ್ ವೈ ಫೈ 6, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್ ಆಯ್ಕೆ ಪಡೆದಿದೆ. ಜೊತೆಗೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, IP64 ರೇಟಿಂಗ್ ಇದ್ದು, ಧೂಳು ಮತ್ತು ನೀರು ನಿರೋಧಕವಾಗಿದೆ.
ವಿವೋ X90 ಬೆಲೆ : ವಿವೋ X90 ಫೋನ್ ಭಾರತದಲ್ಲಿ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಬಿಡುಗಡೆ ಆಗಿದೆ. 8GB + 256GB ವೇರಿಯಂಟ್ ಬೆಲೆಯು 59,999ರೂ. ಆಗಿದೆ. ಹಾಗೆಯೇ 12GB + 256GB ವೇರಿಯಂಟ್ ದರವು 63,999ರೂ. ಆಗಿದೆ. ಗ್ರಾಹಕರು ಹೆಚ್‌ಡಿಎಫ್‌ಸಿ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಿಸಿ ವಹಿವಾಟು ಬಳಸಿಕೊಂಡು 8,000ರೂ. ಇನ್‌ಸ್ಟಂಟ್ ರಿಯಾಯಿತಿ ಲಭ್ಯವಾಗಲಿದೆ.


Click it and Unblock the Notifications








