Home
ಸುದ್ದಿಜಾಲ

ಸದ್ದಿಲ್ಲದೆ ವಿವೋ Y02 ಫೋನ್‌ ಬಿಡುಗಡೆ!..ಇದರ ಬೆಲೆ ಎಷ್ಟು?..ಫೀಚರ್ಸ್‌ ಏನು?

ವಿವೋ ಕಂಪೆನಿಯು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗಟ್ಟಿ ಸ್ಥಾನ ಪಡೆದಿದೆ. ಮುಖ್ಯವಾಗಿ ಕ್ಯಾಮೆರಾ ಹಾಗೂ ಅಧಿಕ ಬ್ಯಾಟರಿ ಬ್ಯಾಕ್ಅಪ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸ್ಮಾರ್ಟ್‌ಫೋನ್‌ಗಳಿಂದ ಕಂಪೆನಿ ಜನಪ್ರಿಯ ಪಡೆದಿದೆ. ಈಗಾಗಲೇ ವಿವೋ ಸಂಸ್ಥೆಯ ಹಲವು ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ. ಇದೀಗ ವಿವೋ ಸಂಸ್ಥೆಯು ನೂತನವಾಗಿ ವಿವೋ Y02 (Vivo Y02) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಮೀಡಿಯಾ ಟೆಕ್‌ ಹಿಲಿಯೋ P22

ಹೌದು, ವಿವೋ ಕಂಪೆನಿಯು ಮಾರುಕಟ್ಟೆಗೆ ಹೊಸದಾಗಿ ವಿವೋ Y02 (Vivo Y02) ಸ್ಮಾರ್ಟ್‌ಫೋನ್‌ ಅನ್ನು ಇಂಡೋನೇಷ್ಯಾದಲ್ಲಿ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 720 x 1600 ಪಿಕ್ಸಲ್‌ ರೇಟ್‌ ಅನ್ನು ಬೆಂಬಲಿಸುವ ಡಿಸ್‌ಪ್ಲೇ ಯನ್ನು ಹೊಂದಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್‌ ಹಿಲಿಯೋ P22 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 10W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ.

ವಿವೋ Y02 (Vivo Y02)

ಇನ್ನು ವಿವೋ Y02 (Vivo Y02) ಸ್ಮಾರ್ಟ್‌ಫೋನ್‌ 2GB ಮತ್ತು 3GB RAM ಜೊತೆಗೆ 32GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ನೀಡಲಾಗಿದೆ. ಈ ಫೋನ್ ಆರ್ಚಿಡ್‌ ಬ್ಲೂ ಮತ್ತು ಕಾಸ್ಮಿಕ್‌ ಗ್ರೇ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ. ಇನ್ನುಳಿದಂತೆ ವಿವೋ Y02 (Vivo Y02) ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ವಿವೋ Y02 ಸ್ಮಾರ್ಟ್‌ಫೋನ್‌ 6.51 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 720 × 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 20:9 ಅನುಪಾತವನ್ನು ಹೊಂದಿದ್ದು, ತನ್ನ ವರ್ಗದಲ್ಲೇ ಉತ್ತಮ ರಿಫ್ರೆಶ್‌ ರೇಟ್ ಸಹ ಪಡೆದಿದೆ.

ಪ್ರೊಸೆಸರ್‌ ಕಾರ್ಯವೈಖರಿ ಏನು?

ಪ್ರೊಸೆಸರ್‌ ಕಾರ್ಯವೈಖರಿ ಏನು?

ವಿವೋ Y02 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ P22 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಓಎಸ್‌ ನಲ್ಲಿ (ಗೋ ಎಡಿಷನ್) ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಈ ಫೋನ್ 2GB ಮತ್ತು 3GB RAM ಜೊತೆಗೆ 32GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳ ಪಡೆದಿದೆ.

ಕ್ಯಾಮೆರಾ ಸೆಟ್‌ಅಪ್‌ ಯಾವುದು?

ಕ್ಯಾಮೆರಾ ಸೆಟ್‌ಅಪ್‌ ಯಾವುದು?

ವಿವೋ Y02 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಅದು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದಲ್ಲದೆ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ವಿವೋ Y02 ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5.0, GPS, FM ರೇಡಿಯೋ ಮತ್ತು USB ಟೈಪ್ C ಪೋರ್ಟ್ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ Y02 ಫೋನ್‌ 2GB ಮತ್ತು 3GB RAM ಜೊತೆಗೆ 32GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ನೀಡಲಾಗಿದ್ದು, ಆರಂಭಿಕ ಬೆಲೆ IDR 1,499,000 (ಭಾರತದಲ್ಲಿ ಅಂದಾಜು 7,800ರೂ. ಆಗಿದೆ). ಇನ್ನು ಈ ಫೋನ್ ಆರ್ಚಿಡ್‌ ಬ್ಲೂ ಮತ್ತು ಕಾಸ್ಮಿಕ್‌ ಗ್ರೇ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.

Best Mobiles in India

English summary
Vivo Y02 launched with 5000mAh battery: Price under Rs 8,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+