Home
ಸುದ್ದಿಜಾಲ

Vivo: ವಿವೋದ ಈ ಬಜೆಟ್ ಬೆಲೆಯ ಫೋನ್‌ಗೆ 38% ರಿಯಾಯಿತಿ!

ವಿವೋ ಫೋನ್‌ಗಳು (Vivo phones) ಭಾರತದಲ್ಲಿ ಭಾರೀ ಬೇಡಿಕೆ ಹೊಂದಿದೆ. ಅದರಲ್ಲೂ ಬಜೆಟ್‌ ಬೆಲೆಯ ಫೋನ್‌ಗಳು ಇನ್ನೂ ಹೆಚ್ಚಿನ ಬೇಡಿಕೆ ಇದ್ದು, ಈ ಮೂಲಕ ಸ್ಮಾರ್ಟ್‌ಫೋನ್‌ ವಲಯದಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ಗಳಾಗಿ ಗುರುತಿಸಿಕೊಂಡಿವೆ. ಈ ನಡುವೆ ವಿವೋದ ಬಜೆಟ್‌ ಬೆಲೆಯ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ವಿವೋ Y02 ಸ್ಮಾರ್ಟ್‌ಫೋನ್‌ಗೆ (Vivo Y02 smartphone) ಇದೀಗ ಆಫರ್ ನೀಡಲಾಗಿದೆ. ಈ ಫೋನ್‌ 32 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಮೀಡಿಯಾಟೆಕ್ MT6762 ಹಿಲಿಯೊ P22 (12 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ಗೆ ಇರುವ ಆಫರ್ ಏನು?, ಇದರ ಪ್ರಮುಖ ಫೀಚರ್ಸ್‌ ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

Vivo: ವಿವೋದ ಈ ಬಜೆಟ್ ಬೆಲೆಯ ಫೋನ್‌ಗೆ 38% ರಿಯಾಯಿತಿ!

ವಿವೋ Y02 ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಫೋನ್ 12,999 ರೂ.ಗಳ ಆಫರ್ ಬೆಲೆ ಹೊಂದಿದ್ದು, ಇದನ್ನು 7,989 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಫ್ಲಿಪ್‌ಕಾರ್ಟ್‌ ಈ ಫೋನ್‌ಗೆ 38% ರಿಯಾಯಿತಿ ಘೋಷಣೆ ಮಾಡಿದೆ. ಇದಲ್ಲದೆ ವಿವಿಧ ಬ್ಯಾಂಕ್‌ ಕೊಡುಗೆ ಆಫರ್ ಸಹ ಇದ್ದು, ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಈ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುವಾಗ ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಇಎಮ್‌ಐ ನಲ್ಲಿ ಖರೀದಿ ಮಾಡಿದ್ರೆ 10% ರಿಯಾಯಿತಿ, ಹೆಚ್‌ಎಸ್‌ಬಿಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಇಎಮ್ಐ ವ್ಯವಹಾರದ ಮೇಲೆ 10% ರಿಯಾಯಿತಿ ಸಿಗಲಿದೆ. ಇದರೊಂದಿಗೆ ನೀವು ಎಸಿ ಖರೀದಿ ಮಾಡಲು ಮುಂದಾದರೆ ಅದಕ್ಕೂ ಆಫರ್ ಲಭ್ಯ ಇದೆ.

Vivo: ವಿವೋದ ಈ ಬಜೆಟ್ ಬೆಲೆಯ ಫೋನ್‌ಗೆ 38% ರಿಯಾಯಿತಿ!

ವಿವೋ Y02 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.51 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ, 20:9 ಅನುಪಾತ, 82.5% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಉತ್ತಮ ವೀಕ್ಷಣೆ ಅನುಭವವನ್ನು ನೀಡಲಿದೆ.

ವಿವೋ Y02 ಸ್ಮಾರ್ಟ್‌ಫೋನ್‌ ಪ್ರೊಸೆಸರ್ ವಿವರ: ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 (ಗೋ ಎಡಿಷನ್), ಫನ್‌ಟಚ್ 12 ಓಎಸ್‌ನಲ್ಲಿ ರನ್‌ ಆಗಲಿದ್ದು, ಮೀಡಿಯಾಟೆಕ್ MT6762 ಹಿಲಿಯೊ P22 (12 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಪವರ್‌ ವಿಆರ್‌ GE8320 ಗ್ರಾಪಿಕ್ಸ್‌ ಕಾರ್ಡ್‌ ಬಲ ಪಡೆದಿದ್ದು, ಮೀಸಲಾದ ಎಸ್‌ಡಿ ಕಾರ್ಡ್ ಬೆಂಬಲದೊಂದಿಗೆ ಈ ಫೋನ್‌ 2GB RAM ಹಾಗೂ 32GB ಇಂಟರ್‌ ಸ್ಟೋರೇಜ್‌ ಬಲ ಪಡೆದಿದೆ.

ವಿವೋ Y02 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಸಿಂಗಲ್‌ ರಿಯರ್ ಕ್ಯಾಮೆರಾ ಹೊಂದಿದ್ದು, ಅದರಲ್ಲಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾದೊಂದಿಗೆ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಅನುಕೂಲ ಮಾಡಿಕೊಡಲಿದೆ. ಅಲ್ಲದೆ ಎಲ್ಇಡಿ ಫ್ಲ್ಯಾಶ್, 1080p@30fps ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಅನ್ನು ಈ ಫೋನ್‌ನಲ್ಲಿ ಮಾಡಬಹುದಾಗಿದೆ.

Vivo: ವಿವೋದ ಈ ಬಜೆಟ್ ಬೆಲೆಯ ಫೋನ್‌ಗೆ 38% ರಿಯಾಯಿತಿ!

ವಿವೋ Y02 ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 10W ವೈರ್ಡ್ ಚಾರ್ಜಿಂಗ್ ಹಾಗೂ 5W ರಿವರ್ಸ್ ವೈರ್ಡ್ ಚಾರ್ಜಿಂಗ್‌ಬೆಂಬಲ ಪಡೆದಿದೆ. ಜೊತಗೆ 3.5 ಎಂಎಂ ಜ್ಯಾಕ್, ವೈ ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್‌, ಗ್ಲೋನಾಸ್, ಗೆಲಿಲಿಯೋ, ಬಿಡಿಎಸ್‌ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

Best Mobiles in India

English summary
Vivo Y02 smartphone is now offered. This phone has 32 GB internal storage option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+