Home
ಸುದ್ದಿಜಾಲ

ವಿವೋ Y02 ಸ್ಮಾರ್ಟ್‌ಫೋನ್‌ಗೆ 34% ಡಿಸ್ಕೌಂಟ್‌: ಈ ಆಫರ್‌ ಎಲ್ಲಿ ಲಭ್ಯ!?

ಸ್ಮಾರ್ಟ್‌ಫೋನ್‌ಗಳು ಇಂದು ಬಳಕೆದಾರರಿಗೆ ಭಿನ್ನ ಸೇವೆ ನೀಡುತ್ತಾ ಬರುತ್ತಿವೆ. ಅದರಲ್ಲೂ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಆಗಾಗ್ಗೆ ಸುಧಾರಿತ ಫೀಚರ್ಸ್‌ನೊಂದಿಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿರುವುದು ಒಂದು ಕಡೆಯಾದರೆ, ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಜನಪ್ರಿಯ ಫೋನ್‌ಗಳಿಗೆ ಭಾರೀ ಡಿಸ್ಕೌಂಟ್‌ ನೀಡುತ್ತಾ ಬರುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ಹೌದು, ಪ್ರಮುಖ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ನಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವಿವೋ ಸಂಸ್ಥೆ ಈಗಾಗಲೇ ಸಾಕಷ್ಟು ಫೋನ್‌ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಪಡೆದಿಕೊಂಡಿದೆ. ಈ ನಡುವೆ ವಿವೋದ ವಿವೋ Y02 ಸ್ಮಾರ್ಟ್‌ಫೋನ್‌ (Vivo Y02) 34%ರಿಯಾಯಿತಿ ಪಡೆಯುವುದರೊಂದಿಗೆ ಭಾರೀ ಸದ್ದು ಮಾಡುತ್ತಿದೆ. ಇದು ಮೀಡಿಯಾಟೆಕ್‌ ಹಿಲಿಯೋ P22 ಚಿಪ್‌ಸೆಟ್‌ ಬಲ ಹೊಂದಿದ್ದು,5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಗಮನಿಸೋಣ ಬನ್ನಿ.

ವಿವೋ Y02 ಸ್ಮಾರ್ಟ್‌ಫೋನ್‌ಗೆ 34% ಡಿಸ್ಕೌಂಟ್‌: ಈ ಆಫರ್‌ ಎಲ್ಲಿ ಲಭ್ಯ!?

ವಿವೋ Y02 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಆಫರ್‌ ಬೆಲೆಗೆ ಖರೀದಿ ಮಾಡುವ ಮುನ್ನ ಪ್ರಮುಖ ಫೀಚರ್ಸ್‌ ಅನ್ನು ತಿಳಿದುಕೊಳ್ಳಿ. ಅದರಂತೆ ಈ ಫೋನ್ 6.51 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 404 ppi ಪಿಕ್ಸೆಲ್ ಸಾಂದ್ರತೆ ಹಾಗೂ 2400 x 1080 ಪಿಕ್ಸೆಲ್‌ಗಳ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ಕ್ಯಾಮೆರಾ ಉದ್ದೇಶಕ್ಕಾಗಿ ವಾಟರ್‌ ಡ್ರಾಪ್‌ ನಾಚ್ ಶೈಲಿ ಹೊಂದಿದೆ.

ವಿವೋ Y02 ಪ್ರೊಸೆಸರ್‌ ಮಾಹಿತಿ: ಉಳಿದಂತೆ ಆಕ್ಟಾ ಕೋರ್ ಕಾರ್ಟೆಕ್ಸ್ A53 CPU ಮತ್ತು ಮೀಡಿಯಾಟೆಕ್‌ ಹಿಲಿಯೋ P22 ಚಿಪ್‌ಸೆಟ್‌ಗಳು ಫೋನ್‌ನಲ್ಲಿ ಉತ್ತಮ ಕಾರ್ಯಕ್ಷಮತೆ ನೀಡಲಿದ್ದು, ಇದರೊಂದಿಗೆ ಪವರ್‌ವಿಆರ್‌ GE8320 GPU ಗ್ರಾಫಿಕ್ಸ್ ಚಿಪ್ ಆಯ್ಕೆ ಗೇಮರ್‌ಗಳಿಗೆ ಅತ್ಯುತ್ತಮ ಅನುಭವ ನೀಡಲಿದೆ. ಇದರೊಂದಿಗೆ 3GB RAM ಆಯ್ಕೆಯಲ್ಲಿ ಕಾಣಿಸಿಕೊಂಡಿರುವ ಈ ಫೋನ್‌ ಅನ್ನು ಈಗಾಗಲೇ ಸಾಕಷ್ಟು ಜನ ಬಳಕೆ ಮಾಡುತ್ತಿದ್ದಾರೆ.

ವಿವೋ Y02 ಕ್ಯಾಮೆರಾ ರಚನೆ: ಈ ಫೋನ್‌ ಸಿಂಗಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿದೆ. ಅಂದರೆ f/2.0 ಅಪರ್ಚರ್‌ನೊಂದಿಗೆ 8ಮೆಗಾಪಿಕ್ಸೆಲ್‌ ಸೆನ್ಸರ್‌ ಆಯ್ಕೆ ನೀಡಲಾಗಿದ್ದು, ಇದು ಫೇಸ್‌ ಬ್ಯೂಟಿ, ಫೋಟೋ, ವಿಡಿಯೋ, ಟೈಮ್‌ಲ್ಯಾಪ್ಸ್ ಫೀಚರ್ಸ್‌ ಪಡೆದಿದೆ. ಜೊತೆಗೆ ಎಲ್‌ಇಡಿ ಪ್ಲ್ಯಾಶ್‌ ಲೈಟ್‌ ಆಯ್ಕೆ ಸಹ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 5 f/2.2 ಅಪರ್ಚರ್‌ನ 5 ಮೆಗಾಪಿಕ್ಸೆಲ್‌ ವೈಡ್ ಆಂಗಲ್ ಕ್ಯಾಮೆರಾ ಸೆನ್ಸರ್‌ ಆಯ್ಕೆ ನೀಡಲಾಗಿದೆ.

ವಿವೋ Y02 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 55W ವೇಗದ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಬೆಂಬಲ ನೀಡಲಿದೆ. ಇದರೊಂದಿಗೆ 4G, 3G, 2G ನೆಟ್‌ವರ್ಕ್‌ ಬೆಂಬಲ. ಬ್ಲೂಟೂತ್ ಆವೃತ್ತಿ v5.0, ವೈ-ಫೈ ಆವೃತ್ತಿ 2.4 GHz, 5 GHz, ಎನ್‌ಎಫ್‌ಸಿ ಹಾಗೂ ಜಿಪಿಎಸ್‌ ತಂತ್ರಜ್ಞಾನ ಸೇರಿದಂತೆ ಹಲವಾರು ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ವಿವೋ Y02 ಸ್ಮಾರ್ಟ್‌ಫೋನ್‌ಗೆ 34% ಡಿಸ್ಕೌಂಟ್‌: ಈ ಆಫರ್‌ ಎಲ್ಲಿ ಲಭ್ಯ!?

ವಿವೋ Y02 ಬೆಲೆ ಹಾಗೂ ಆಫರ್‌ ವಿವರ: ಈ ಫೋನ್‌ನ ಸಾಮಾನ್ಯ ದರ 12,999 ರೂ.ಗಳಾಗಿದೆ. ಆದರೆ, ನೀವು ಫ್ಲಿಪ್‌ಕಾರ್ಟ್‌ನಲ್ಲಿ 8,499ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಇದೀಗ 34% ರಿಯಾಯಿತಿ ನೀಡಲಾಗಿದೆ. ಇದರೊಂದಿಗೆ ಬ್ಯಾಂಕ್ ವ್ಯವಹಾರಗಳು ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯ ಇದ್ದು, ಈ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಅನ್ನು ಕೊಂಡುಕೊಳ್ಳಬಹುದು.

Best Mobiles in India

English summary
Vivo, which has gained popularity in the list of flagship smartphones, has already carved its own niche in the market by introducing quite a few phones. Meanwhile, Vivo Y02 smartphone is making a lot of noise with a 34% discount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+