ವಿವೋ Y02A ಸ್ಮಾರ್ಟ್‌ಫೋನ್ ಲಾಂಚ್: ಅಗ್ಗದ ಬೆಲೆಗೆ ಲಭ್ಯ!
ವಿವೋದ ಸ್ಮಾರ್ಟ್ ಫೋನ್‌ಗಳಲ್ಲಿ ಬಹುಪಾಲು ಫೋನ್‌ಗಳು ಬಜೆಟ್ ಬೆಲೆಗೆ ಲಭ್ಯವಾಗುವುದರಿಂದ ಭಾರತದಲ್ಲಿ ಇವುಗಳಿಗೆ ಸಾಕಷ್ಟು ಬೇಡಿಕೆ ಇದೆ. ಇದರ ನಡುವೆ ವಿವೋ ಮತ್ತೊಂದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದ್ದು, ಈ ಫೋನ್ ಹಿಲಿಯೋ P35 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ.
ಹೌದು, ವಿವೋ ಇದೀಗ ವಿವೋ Y02A (Vivo Y02A) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಈ ಫೋನ್ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಹಾಗೆಯೇ ಈ ಹಿಂದೆ ಲಾಂಚ್ ಮಾಡಲಾದ ವಿವೋ Y02 ನಂತೆಯೇ ಕೆಲವು ಪ್ರಮುಖ ಫೀಚರ್ಸ್‌ಗಳನ್ನೂ ಸಹ ಹೊಂದಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಫೋನ್‌ನ ವಿಶೇಷ ಫೀಚರ್ಸ್ ಹಾಗೂ ಬೆಲೆ ವಿವರವನ್ನು ತಿಳಿದುಕೊಳ್ಳೋಣ.

ವಿವೋ Y02A ಡಿಸ್‌ಪ್ಲೇ ವಿವರ: ಈ ವಿವೋ Y02A ಸ್ಮಾರ್ಟ್‌ಫೋನ್ 6.51-ಇಂಚಿನ IPS LCD HD+ ಡಿಸ್‌ಪ್ಲೇ ಹೊಂದಿದ್ದು, ಇದು 720 x 1600 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದರ ಜೊತೆಗೆ 60Hz ರಿಫ್ರೆಶ್ ರೇಟ್ ಆಯ್ಕೆ ಇದ್ದು, ಸೆಲ್ಫಿ ಕ್ಯಾಮೆರಾದ ಉದ್ದೇಶಕ್ಕಾಗಿ ವಾಟರ್ ಡ್ರಾಪ್ ಶೈಲಿಯ ನಾಚ್ ಅನ್ನು ಹೊಂದಿದೆ.
ವಿವೋ Y02A ಪ್ರೊಸೆಸರ್ ಯಾವುದು?: ಈ ಹೊಸ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಫನ್‌ಟಚ್ ಓಎಸ್ 12 ನೊಂದಿಗೆ ಆಂಡ್ರಾಯ್ಡ್ 12 ಗೋ ಆವೃತ್ತಿಯಲ್ಲಿ ರನ್ ಆಗಲಿದೆ. ಇನ್ನು 3GB RAM ಹಾಗೂ 32GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಸ್ಟೋರೇಜ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಬಳಕೆ ಮಾಡಿಕೊಳ್ಳಬಹುದು.
ವಿವೋ Y02A ಕ್ಯಾಮೆರಾ ರಚನೆ: ವಿವೋ Y02A ಸ್ಮಾರ್ಟ್‌ಫೋನ್ ಸಿಂಗಲ್ ರಿಯಲ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ ಎಲ್ಇಡಿ ಫ್ಲ್ಯಾಶ್ ಆಯ್ಕೆಯೊಂದಿಗೆ 8 ಮೆಗಾಪಿಕ್ಸೆಲ್ ಸೆನ್ಸರ್ ಆಯ್ಕೆ ನೀಡಲಾಗಿದೆ. ಹಾಗೆಯೇ ವಿಡಿಯೋ ಕರೆ ಹಾಗೂ ಸೆಲ್ಫಿ ಫೋಟೋ ಸೆರೆಹಿಡಿಯಲು 5 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿದೆ.

ವಿವೋ Y02A ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಇದು 10W ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಈ ಮೂಲಕ ಅತ್ಯುತ್ತಮವಾದ ಬ್ಯಾಟರಿ ಬ್ಯಾಕಪ್ ಸಿಗಲಿದೆ. ಇನ್ನುಳಿದಂತೆ ಡ್ಯುಯಲ್ ಸಿಮ್ ಕಾರ್ಡ್ ಬೆಂಬಲ, 4G VoLTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ಆವೃತ್ತಿ 5.0, ಜಿಪಿಎಸ್, ಮೈಕ್ರೋ ಯುಎಸ್‌ಬಿ ಪೋರ್ಟ್ ಹಾಗೂ 3.5 ಎಂಎಂ ಆಡಿಯೊ ಜ್ಯಾಕ್‌ಸೇರಿದಂತೆ ಹಲವಾರು ಕನೆಕ್ಟಿವಿಟಿ ಆಯ್ಕೆ ಪಡೆದಿದೆ.
ವಿವೋ Y02A ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ BDT 12,499 ಬೆಲೆ ಹೊಂದಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ 9,630ರೂ. ಗಳಾಗಿದೆ. ಅಂತೆಯೇ ಕಾಸ್ಮಿಕ್ ಗ್ರೇ ಮತ್ತು ಆರ್ಕಿಡ್ ಬ್ಲೂ ಸೇರಿದಂತೆ ವಿವಿಧ ಬಣ್ಣದ ಆಯ್ಕೆಯಲ್ಲಿ ಈ ಫೋನ್ ಕಾಣಿಸಿಕೊಳ್ಳಲಿದೆ. ಇದನ್ನು ಸದ್ಯಕ್ಕೆ ಬಾಂಗ್ಲಾದಲ್ಲಿ ಲಾಂಚ್ ಮಾಡಲಾಗಿದ್ದು, ಭಾರತಕ್ಕೆ ಈ ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಪದಾರ್ಪಣೆ ಮಾಡಲಿದೆ.

ಇದರೊಂದಿಗೆ ಭಾರತದಲ್ಲಿ ವಿವೋ ಸಂಸ್ಥೆಯು ವಿವೋ T2 ಮತ್ತು ವಿವೋ T2x ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಎಲ್ಲಾ ತಯಾರಿ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರಂತೆ ಈ ಫೋನ್‌ಗಳು 5G ಬೆಂಬಲ ಹೊಂದಿರಲಿದ್ದು, ಅಮೋಲೆಡ್ ಡಿಸ್‌ಪ್ಲೇಯೊಂದಿಗೆ 64MP ಕ್ಯಾಮೆರಾ ಹೊಂದಿರಲಿವೆ ಎನ್ನಲಾಗುತ್ತಿದೆ. ಜೊತೆಗೆ ಡೈಮೆನ್ಸಿಟಿ 700 ಹಾಗೂ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಬಲ ಪಡೆಯಲಿವೆ ಎಂದು ತಿಳಿದುಬಂದಿದ್ದು, ಈ ಫೋನ್‌ಗಳು 20,000ರೂ. ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರಲಿವೆ.


Click it and Unblock the Notifications








