ಗ್ರಾಹಕರಿಗೆ ಸಿಹಿಸುದ್ದಿ!..ಈ ವಿವೋ ಫೋನ್ ಬೆಲೆಯಲ್ಲಿ ಜಬರ್ದಸ್ತ್ ಇಳಿಕೆ!
ವಿವೋ ಮೊಬೈಲ್ ಕಂಪನಿಯು ಭಿನ್ನ ಶ್ರೇಣಿಯ ಹಲವು ಫೋನ್‌ಗಳನ್ನು ಪರಿಚಯಿಸಿ, ದೇಶಿಯ ಮಾರುಕಟ್ಟೆಯಲ್ಲಿ ಅಧಿಕ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ವಿವೋ Y02t ಮೊಬೈಲ್ ಬಜೆಟ್ ಪ್ರೈಸ್‌ಟ್ಯಾಗ್ ನಿಂದ ಹಾಗೂ ಫೀಚರ್ಸ್‌ಗಳಿಂದ ಟ್ರೆಂಡಿ ಲುಕ್ ಪಡೆದುಕೊಂಡಿದೆ. ಆದ್ರೆ, ಇದೀಗ ಈ ಮೊಬೈಲ್ ಈಗ ಭರ್ಜರಿ ರಿಯಾಯತಿ ದರದಲ್ಲಿ ಕಾಣಿಸಿಕೊಂಡಿದೆ.
ಹೌದು, ಜನಪ್ರಿಯ ಇ ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಲಾವಾ ಅಗ್ನಿ 2 5G ಮೊಬೈಲ್ ಶೇ. 44% ರಷ್ಟು ರಿಯಾಯಿತಿ ಪಡೆದಿದೆ. ಈ ಮೊಬೈಲ್ 4GB RAM + 64GB ವೇರಿಯಂಟ್ ಬೆಲೆಯು 15,999 ರೂ. ಆಗಿದ್ದು, ಆದರೆ ಅಮೆಜಾನ್ ತಾಣದಲ್ಲಿ 8,999 ರೂ. ಆಫರ್ ಬೆಲೆಗೆ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಸಿಗಲಿದೆ.

ವಿವೋ Y02t ಮೊಬೈಲ್‌ನ ಪ್ರಾಥಮಿಕ 8 ಮೆಗಾ ಪಿಕ್ಸೆಲ್ ಆಗಿದ್ದು, ಜೊತೆಗೆ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇದು ಮೀಡಿಯಾ ಟೆಕ್ MT6765 ಹಿಲಿಯೊ P35 SoC ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ಈ ಫೋನ್ 5000 mAh ಜೊತೆಗೆ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಹಾಗಾದರೇ ವಿವೋ Y02t ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿವೋ Y02t ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೀಗಿದೆ
ವಿವೋ Y02t ಮೊಬೈಲ್ 6.51 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇನ್ನು ಡಿಸ್‌ಪ್ಲೇ 1600 × 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಅನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 82.5% ಸ್ಕ್ರೀನ್ ಟು ಬಾಡಿ ಅನುಪಾತ ಅನ್ನು ಪಡೆದುಕೊಂಡಿದ್ದು, ಇದರ ಜೊತೆಗೆ ಇದರ ಡಿಸ್‌ಪ್ಲೇಯು 20:9 ರಚನೆಯ ಅನುಪಾತವನ್ನು ಪಡೆದಿದೆ.
ವಿವೋ Y02t ಪ್ರೊಸೆಸರ್ ಪವರ್ ಯಾವುದು
ವಿವೋ Y02t ಮೊಬೈಲ್ ಮೀಡಿಯಾ ಟೆಕ್ MT6765 ಹಿಲಿಯೊ P35 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64 GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ (ಎಸ್‌ಡಿ ಕಾರ್ಡ್) ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಕೂಡ ನೀಡಿದೆ.
ವಿವೋ Y02t ಕ್ಯಾಮೆರಾ ರಚನೆ ಹೇಗಿದೆ
ವಿವೋ Y02t ಮೊಬೈಲ್ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಇದು ಒಳಗೊಂಡಿದೆ. ಇದರೊಂದಿಗೆ ಈ ಫೋನಿನ ಕ್ಯಾಮೆರಾ ಫೀಚರ್ಸ್ ಗಳಲ್ಲಿ ಫೇಸ್ ಬ್ಯೂಟಿ, ಫೋಟೋ, ವಿಡಿಯೋ, ಟೈಮ್ ಲ್ಯಾಪ್ಸ್ ಆಯ್ಕೆಗಳು ಕೂಡಾ ಲಭ್ಯ ಇವೆ.
ವಿವೋ Y02t ಬ್ಯಾಟರಿ ಮತ್ತು ಇತರೆ ಆಯ್ಕೆಗಳು
ವಿವೋ Y02t ಮೊಬೈಲ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಈ ಫೋನ್ 10W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಹಾಟ್‌ಸ್ಪಾಟ್, ಬ್ಲೂಟೂತ್, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications








