Vivo: ವಿವೋ Y100 5G ಸ್ಮಾರ್ಟ್‌ಫೋನ್ ಲಾಂಚ್! 50MP ಕ್ಯಾಮೆರಾ.. ಬೆಲೆ ಎಷ್ಟು?
ವಿವೋ ಫೋನ್‌ಗಳಿಗೆ (Vivo phone) ವಿಶೇಷವಾದ ದೊಡ್ಡ ಮಟ್ಟದ ಬೇಡಿಕೆ ಇರುವುದು ನಿಮಗೆ ತಿಳಿದ ವಿಚಾರ. ಈ ಫೋನ್‌ಗಳ ಕ್ಯಾಮೆರಾ ಫೀಚರ್ಸ್‌ನಿಂದ ಬಹಳಷ್ಟು ಗ್ರಾಹಕರು ಆಕರ್ಷಿತರಾಗಿದ್ದಾರೆ. ಅದರಂತೆ ಈಗ ವಿವೋ Y100 5G ಸ್ಮಾರ್ಟ್‌ಫೋನ್ (Vivo Y100 5G smartphone) ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಹೌದು, ವಿವೋ ಫೋನ್‌ಗಳು ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಹೆಚ್ಚು ಸೇಲ್ ಆಗುವ ಫೋನ್‌ಗಳ ಸಾಲಿನಲ್ಲಿ ಮುಖ್ಯ ಸ್ಥಾನದಲ್ಲಿವೆ. ಈ ಬೆಳವಣಿಗೆ ನಡುವೆ ವಿವೋ Y100 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನಲ್ಲಿ (Snapdragon 4 Gen 2 processor) ಕಾರ್ಯನಿರ್ವಹಿಸಲಿದ್ದು, 80W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. ಹಾಗಿದ್ರೆ, ಈ ಫೋನ್ ಲಾಂಚ್ ಆಗಿರುವು ಎಲ್ಲಿ?, ಇದರ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ವಿವೋ Y100 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.6 ಇಂಚಿನ ಫುಲ್ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇ (Full HD + AMOLED display) ಹೊಂದಿದ್ದು, 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಹಾಗೂ 1,200 ನಿಟ್ಸ್ ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ.
ವಿವೋ Y100 5G ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ ಓಎಸ್ 14 (FunTouch OS 14) ಅನ್ನು ರನ್ ಮಾಡಲಿದೆ. ಇದರೊಂದಿಗೆ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಈ ಫೋನ್ ಪಡೆದಿದೆ.

ವಿವೋ Y100 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಫ್ಲಿಕರ್ ಸೆನ್ಸರ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ (Triple rear camera) ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ವಿವೋ Y100 5G ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಬ್ಯಾಟರಿ ವಿಚಾರದಲ್ಲಿ ತುಂಬಾ ಪ್ರೀಮಿಯಂ ಅನುಭವ ಪಡೆಯಬಹುದಾಗಿದೆ. ಉಳಿದಂತೆ ಈ ಫೋನ್ ಡ್ಯುಯಲ್ ಸಿಮ್ (ನ್ಯಾನೊ), ಎನ್‌ಎಫ್‌ಸಿ, ಬ್ಲೂಟೂತ್ 5.0, ಯುಎಸ್‌ಬಿ ಟೈಪ್-ಸಿ ಪೋರ್ಟ್, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಕ್ಯೂಝಡ್‌ಎಸ್‌ಎಸ್, ಬಿಡಿಎಸ್ ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ ಅನ್ನು ಬೆಂಬಲಿಸುತ್ತದೆ.

ವಿವೋ Y100 5G ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಫೋನ್ ಅನ್ನು ಇದೀಗ ಇಂಡೋನೇಷ್ಯಾದಲ್ಲಿ (Indonesia) ಮಾತ್ರ ಅನಾವರಣ ಮಾಡಲಾಗಿದ್ದು, ಬ್ಲ್ಯಾಕ್ ಓನಿಕ್ಸ್ ಮತ್ತು ಪರ್ಪಲ್ ಆರ್ಕಿಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಅದರಂತೆ 8GB RAM ಮತ್ತು 128GB ವೇರಿಯಂಟ್ ಸ್ಟೋರೇಜ್ ಆಯ್ಕೆಯ ಫೋನ್‌ಗೆ IDR 3,899,000 (ಸುಮಾರು 20,500ರೂ.ಗಳು) 8GB RAM ಜೊತೆಗೆ 256GB ವೇರಿಯಂಟ್‌ಗೆ IDR 4,199,000 (ಸುಮಾರು 20,000ರೂ.ಗಳು). ಭಾರತದಲ್ಲಿ ಈ ಫೋನ್ ಲಾಂಚ್ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.


Click it and Unblock the Notifications








