Home
ಸುದ್ದಿಜಾಲ

ವಾರೆವ್ಹಾ.. ವಿವೋ Y100A 5G ಫೋನ್‌ ಬೆಲೆಯಲ್ಲಿ ದಿಢೀರ್ ಇಳಿಕೆ!

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ವಿವೋ ಕಂಪೆನಿಯು ಹಲವು ಜನಪ್ರಿಯ ಫೋನ್‌ಗಳನ್ನು ಪರಿಚಯಿಸಿದೆ. ಆ ಪೈಕಿ ಒಂದಾದ ವಿವೋ Y100A 5G ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆದ್ರೆ, ಈ ಮೊಬೈಲ್‌ ಈಗ ಬೊಂಬಾಟ್‌ ಬೆಲೆ ಇಳಿಕೆ ಕಂಡಿದೆ.

ಹೌದು, ವಿವೋ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ವಿವೋ Y100A 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಇದೀಗ 2,000ರೂ. ಗಳ ದಿಢೀರ್ ಇಳಿಕೆ ಆಗಿದೆ. ಈ ಫೋನ್‌ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 695 SoC ಪ್ರೊಸೆಸರ್‌ ನಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಪಡೆದಿದೆ. ಜೊತೆಗೆ 8GB RAM + 128GB ವೇರಿಯಂಟ್‌ ಆಯ್ಕೆ ಹೊಂದಿದೆ.

ವಾರೆವ್ಹಾ.. ವಿವೋ Y100A 5G ಫೋನ್‌ ಬೆಲೆಯಲ್ಲಿ ದಿಢೀರ್ ಇಳಿಕೆ!

ಇದಲ್ಲದೇ ಈ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ನಲ್ಲಿದೆ. ಇದು 4,500mAh ಬ್ಯಾಟರಿ ಬ್ಯಾಕ್‌ಅಪ್‌ ಕೂಡಾ ಪಡೆದಿದೆ. ಅಲ್ಲದೇ ಮೆಟಲ್ ಬ್ಲ್ಯಾಕ್, ಟ್ವಿಲೈಟ್ ಗೋಲ್ಡ್ ಮತ್ತು ಪೆಸಿಫಿಕ್ ಬ್ಲೂ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೆ ವಿವೋ Y100A 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ Y100A 5G ಡಿಸ್‌ಪ್ಲೇ ರಚನೆ ಹೀಗಿದೆ :
ವಿವೋ Y100A 5G ಮೊಬೈಲ್‌ 6.38 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 90Hz ರಿಫ್ರೆಶ್ ರೇಟ್‌ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಡಿಸ್‌ಪ್ಲೇ HDR10+ ಪ್ರಮಾಣೀಕರಣವನ್ನು ಹೊಂದಿದ್ದು, 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ.

ವಿವೋ Y100A 5G ಪ್ರೊಸೆಸರ್‌ ಪವರ್‌ ಮಾಹಿತಿ :
ವಿವೋ Y100A 5G ಮೊಬೈಲ್‌ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ ಫನ್‌ಟಚ್‌ OS 13 ನಲ್ಲಿ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM + 128GB ಆಂತರೀಕ ಸ್ಟೋರೇಜ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ವಿಸ್ತರಿಸಬಹುದಾದ RAM ಫೀಚರ್ಸ್‌ ಅನ್ನು ಕೂಡ ಒಳಗೊಂಡಿದೆ. ಇದರೊಂದಿಗೆ SD ಕಾರ್ಡ್‌ ಮೂಲಕ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ವಿವೋ Y100A 5G ಕ್ಯಾಮೆರಾ ಸೆನ್ಸಾರ್‌ ಮಾಹಿತಿ :
ವಿವೋ Y100A 5G ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ.

ವಿವೋ Y100A 5G ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ :
ವಿವೋ Y100A 5G ಮೊಬೈಲ್‌ 44W ವೇಗದ ಚಾರ್ಜಿಂಗ್‌ ಸಪೋರ್ಟ್‌ನೊಂದಿಗೆ 4,500mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳೊಂದಿಗೆ ಡ್ಯುಯಲ್ ಸಿಮ್, 5G, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.2, ಯುಎಸ್‌ಬಿ ಟೈಪ್-ಸಿ, ಜಿಪಿಎಸ್ ಮತ್ತು ಒಟಿಜಿಯನ್ನು ಬೆಂಬಲ ಇದೆ. ಅಲ್ಲದೇ 3.5mm ಆಡಿಯೊ ಜ್ಯಾಕ್ ಅನ್ನು ಸಪೋರ್ಟ್‌ ಪಡೆದಿದೆ.

Best Mobiles in India

English summary
Vivo Y100A 5G price in India has been dropped by Rs 2,000. specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+