vivo: 256 GB ಆಯ್ಕೆಯ ವಿವೋದ ಬಹು ಬೇಡಿಕೆ ಫೋನ್‌ಗೆ ಬಂಫರ್ ಆಫರ್! 64MP ಕ್ಯಾಮೆರಾ...
ವಿವೋ (vivo) ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿರುವಂತೆಯೇ ಹೊಸ ಹೊಸ ಫೋನ್‌ಗಳು ಅನಾವರಣ ಆಗುತ್ತಲೇ ಇದೆ. ಅದರಲ್ಲೂ ಕೆಲವೇ ದಿನಗಳ ಹಿಂದೆ ವಿವೋ x100 ಸರಣಿ ಸ್ಮಾರ್ಟ್‌ಫೋನ್‌ಗಳು (Vivo x100 series smartphone) ಅನಾವರಣ ಆಗಿದ್ದು, ಗ್ರಾಹಕರು ಈ ಫೋನ್‌ಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಬಹುಬೇಡಿಕೆ ಇರುವ ವಿವೋ ಈ ಫೋನ್‌ಗೂ ಅಫರ್ ನೀಡಲಾಗಿದೆ.
ಹೌದು, ವಿವೋ Y100A ಸ್ಮಾರ್ಟ್‌ಫೋನ್‌ಗೆ (Vivo Y100A smartphone) ಇದೀಗ ಭರ್ಜರಿ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಬರೋಬ್ಬರಿ 256 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಈ ಬೆಲೆಯಲ್ಲಿ ಉತ್ತಮ ಫೋನ್ ಎನಿಸಿಕೊಂಡಿದೆ. ಅಷ್ಟೇ ಅಲ್ಲದೆ ಕ್ಯಾಮೆರಾ ವಿಚಾರದಲ್ಲೂ ಈ ಫೋನ್ ಪ್ರೀಮಿಯಂ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ಬೆಲೆ ವಿವರ ನೋಡೋಣ ಬನ್ನಿ.

ವಿವೋ Y100A ಸ್ಮಾರ್ಟ್‌ಫೋನ್ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 31,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 23,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಿದಂತೆ ಆಗಲಿದೆ. ಈ ವಿಶೇಷ ಆಫರ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಘೋಷಣೆ ಮಾಡಲಾಗಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಬಹುದಾಗಿದೆ.
ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಹಾಗೂ ಆಯ್ದ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ 1000 ರೂ.ಗಳ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಗ್ರಾಹಕರು 699 ರೂ. ಮೌಲ್ಯದ FreebieSpotify ಪ್ರೀಮಿಯಂ ಸೌಲಭ್ಯ ಪಡೆಯಬಹುದಾಗಿದೆ. ಹಾಗಿದ್ರೆ ಈ ಫೋನ್ ಅನ್ನು ಇಷ್ಟು ಬೆಲೆಗೆ ಖರೀದಿ ಮಾಡಲು ಯೋಗ್ಯವೇ ಎಂದು ತಿಳಿದುಕೊಳ್ಳಲು ಇದರ ಫೀಚರ್ಸ್ ಕಡೆ ಕಣ್ಣಾಯಿಸಿ.

ವಿವೋ Y100A ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.38 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಈ ವಿಭಾಗದಲ್ಲಿ ಚಿಕ್ಕ ಡಿಸ್‌ಪ್ಲೇ ಎನ್ನಬಹುದು. ಜೊತೆಗೆ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಉಳಿದಂತೆ ಈ ಫೋನ್ 90 Hz ರಿಫ್ರೆಶ್ ರೇಟ್ ಪಡೆದಿದ್ದು, ಪಂಚ್ ಹೋಲ್ ಡಿಸ್‌ಪ್ಲೇ ಮೂಲಕ ಉತ್ತಮ ಎನಿಸಿದೆ.
ವಿವೋ Y100A ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 8 GB RAM + 8 GB ವರ್ಚುವಲ್ RAM ಆಯ್ಕೆಯೊಂದಿಗೆ 256 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ. ಅಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ಸ್ಟೋರೇಜ್ ಆಯ್ಕೆ ಬೇಕು ಎಂದರೆ ನೀವು ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು ವಿಸ್ತರಣೆ ಮಾಡಿಕೊಳ್ಳಬಹುದು.
ವಿವೋ Y100A ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ 2 ಮೆಗಾಪಿಕ್ಸೆಲ್ + 2 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಕ್ಯಾಮೆರಾ ಮೂಲಕ 4K UHD ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ವಿವೋ Y100A ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ v5.1, ವೈ-ಫೈ, 4G, 5G, VoLTE ನೆಟ್‌ವರ್ಕ್ ಬೆಂಬಲ, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ. ಈ ಮೂಲಕ ಈ ಬೆಲೆಯಲ್ಲಿ ಈ ಫೋನ್ ಉತ್ತಮ ಫೋನ್ ಎಂದೇ ಹೇಳಬಹುದು.


Click it and Unblock the Notifications








