ಹೊಸ ಆವೃತ್ತಿಯಲ್ಲಿ 'ವಿವೋ Y11' ಫೋನ್‌ ಬಿಡುಗಡೆ!..ಬೆಲೆಯು 8,990ರೂ!

|

ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿ ವಿವೋ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದೆ. ವಿವೋ ಸಂಸ್ಥೆಯು ಇದೀಗ ತನ್ನ ಜನಪ್ರಿಯ ವಿವೋ Y11 ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಹೊಸ ಆವೃತ್ತಿಯಲ್ಲಿ ಮತ್ತೆ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಲೈಫ್ ಜೊತೆಗೆ ಅಪ್‌ಗ್ರೇಡ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ವಿವೋ Y11

ಹೌದು, ವಿವೋ ಕಂಪನಿಯು ತನ್ನ ವಿವೋ Y11 ಫೋನ್‌ ಅನ್ನು 2019ರ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಈಗಾಗಲೇ ಜನಪ್ರಿಯವಾಗಿರೊ ಈ ಫೋನ್ ಮಾರುಕಟ್ಟೆಯಲ್ಲಿ ಮತ್ತೆ ಕಮಾಲ್ ಮಾಡುವ ಸಾಧ್ಯತೆಗಳಿವೆ ಎಂಬ ಭರವಸೆಯನ್ನು ಸಂಸ್ಥೆಯು ಹೊಂದಿದೆ. ಇನ್ನು ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಡ್ಯುಯಲ್ ಕ್ಯಾಮೆರಾ

ವಿವೋ ವೈ11 ಸ್ಮಾರ್ಟ್‌ಫೋನ್ ಹಿಂಬದಿಯ ಡ್ಯುಯಲ್ ಕ್ಯಾಮೆರಾಗಳಲ್ಲಿ ಒಂದು 13ಎಂಪಿ ಸೆನ್ಸಾರ್ ಪಡೆದಿದ್ದು, ಮತ್ತೊಂದು ಕ್ಯಾಮೆರಾವು 2ಎಂಪಿಯ ಡೆಪ್ತ್ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡದೆ. ಹಾಗೆಯೇ ಮುಂಬದಿಯಲ್ಲಿ ಸೆಲ್ಫಿಗಾಗಿ 8ಎಂಪಿಯ ಸೆನ್ಸಾರ್ ಕ್ಯಾಮೆರಾವನ್ನು ಪಡೆದುಕೊಂಡಿದೆ. ಇದರೊಂದಿಗೆ AI ಫೇಸ್‌ ಬ್ಯುಟಿ ಫೀಚರ್ ಅನ್ನು ಪಡೆದಿದ್ದು, ಫೋಟೊಗಳು ಉತ್ತಮವಾಗಿ ಮೂಡಿಬರಲು ಸಹಕರಿಸುತ್ತದೆ.

5000mAh ಸಾಮರ್ಥ್ಯದ

ಇನ್ನು ವಿವೋ ವೈ11 ಫೋನಿನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ನೀಡಲಾಗಿದ್ದು, ಅದರೊಂದಿಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ಒದಗಿಸಲಾಗಿದೆ. ಹಾಗೆಯೇ ಗೇಮಿಂಗ್‌ಗೆ ಉತ್ತಮ ಸಪೋರ್ಟ್‌ ನೀಡುವ ಸಾಮರ್ಥ್ಯವನ್ನು ಬ್ಯಾಟರಿಯು ಪಡೆದಿದೆ. ಜೊತೆಗೆ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಯುಎಸ್‌ಬಿ, ಓಟಿಜಿ, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನಂತಹ ಅಗತ್ಯ ಫೀಚರ್ಸ್‌ಗಳನ್ನು ಒದಗಿಸಿದೆ.

ದೇಶಿಯ ಮಾರುಕಟ್ಟೆ

ವಿವೋ ವೈ11 ಸ್ಮಾರ್ಟ್‌ಫೋನ್‌ ಮಿನರಲ್ ಬ್ಲೂ, ರೆಡ್‌ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ದೇಶಿಯ ಮಾರುಕಟ್ಟೆಯಲ್ಲಿ ವಿವೋ ವೈ11 ಫೋನಿನ 3GB RAM + 32GB ವೇರಿಯಂಟ್ ಬೆಲೆಯು 8,990ರೂ.ಗಳು ಆಗಿದೆ. ಇನ್ನು ಈ ಫೋನ್ ಇದೇ ಡಿ.28ರಿಂದ ಫ್ಲಿಪ್‌ಕಾರ್ಟ್‌, ಅಮೆಜಾನ್, ಆನ್‌ಲೈನ್ ತಾಣಗಳಲ್ಲಿ ಸೇಲ್‌ಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
Vivo has just introduced a new budget smartphone, called the Vivo Y11 (2019). to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X