Home
ಸುದ್ದಿಜಾಲ

ದೇಶಿಯ ಮಾರುಕಟ್ಟೆಗೆ 'ವಿವೋ ವೈ15' ಬಿಡುಗಡೆ!.ಬೆಲೆ 13,990ರೂ!

ವಿವೋ ಕಂಪನಿಯ ಬಹುನಿರೀಕ್ಷಿತ 'ವಿವೋ ವೈ15' ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಇದೇ ಮೇ 28ಕ್ಕೆ(ನೆನ್ನೆ) ಲಾಂಚ್‌ ಆಗಿದ್ದು, ಇದೊಂದು ಬಜೆಟ್‌ ಸ್ಮಾರ್ಟ್‌ಫೋನ್‌ ಮಾದರಿಯಲ್ಲಿ ಗುರುತಿಸಿಕೊಂಡಿದೆ. 5,000mAh ಪವರ್‌ಫುಲ್‌ ಬ್ಯಾಟರಿ ಮತ್ತು ಕೃತಕ ಬುದ್ಧಿಮತ್ತೆಯ ತ್ರಿವಳಿ ಕ್ಯಾಮೆರಾ ಫೀಚರ್‌ ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್‌ ಆಗಿದ್ದು, ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ಬಿಗ್‌ ಸರ್ಪೈಸ್‌ ಎನಿಸಿದೆ.

ದೇಶಿಯ ಮಾರುಕಟ್ಟೆಗೆ 'ವಿವೋ ವೈ15' ಬಿಡುಗಡೆ!.ಬೆಲೆ 13,990ರೂ!

ಹೌದು, ವಿವೋ ಕಂಪನಿಯು ತನ್ನ ವೈ15 ಸ್ಮಾರ್ಟ್‌ಫೋನ್‌ ಅನ್ನು 13,990ರೂ.ಗಳ ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಲಾಂಚ್‌ ಮಾಡಿದ್ದು, ಇದು ತನ್ನ ವರ್ಗದಲ್ಲಿಯೇ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿದೆ. ಮೀಡಿಯಾ ಟೆಕ್‌ ಹಿಲಿಯೊ P22 ಪ್ರೊಸೆಸರ್‌ ಶಕ್ತಿಯನ್ನು ಹೊಂದಿದ್ದು, ಅಕ್ವಾ ಬ್ಲೂ ಮತ್ತು ಬರ್ಗಂಡಿ ಕಲರ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೇ ವಿವೋ ವೈ15 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ವಿವೋ ವೈ15 ಸ್ಮಾರ್ಟ್‌ಫೋನ್‌ 720x1544 ಪಿಲ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.35 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ವಾಟರ್‌ ನಾಚ್‌ ಮಾದರಿ ರಚನೆಯನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 268 PPI ಆಗಿದ್ದು, ಡಿಸ್‌ಪ್ಲೇಯ ಅನುಪಾತವು 19.3:9 ಆಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಆಕ್ಟಾ ಕೋರ್‌ ಮೀಡಿಯಾ ಟೆಕ್‌ ಹಿಲಿಯೊ MT6762 P22 ಸಾಮರ್ಥ್ಯದ ಪ್ರೊಸೆಸರ್ ಅನ್ನು ಹೊಂದಿದ್ದು, ಪವರ್‌VR GE8320 ಗ್ರಾಫಿಕ್ಸ್‌ ಹೊಂದಿದೆ. ಆಂಡ್ರಾಯ್ಡ್‌ 9 ಓಎಸ್‌ನ ಫನ್‌ಟಚ್‌ 9 ಓಎಸ್‌ ಇದರಲ್ಲಿ ಕಾರ್ಯನಿರ್ವಹಿಸುತ್ತದೆ. 4GB RAM ಸಾಮರ್ಥ್ಯದ ಜೊತೆಗೆ 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾ ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 13ಎಂಪಿಯಲ್ಲಿದ್ದು, f/2.2 ಅಪಾರ್ಚರ್‌ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿಯೊಂದಿಗೆ ಸೂಪರ್‌ ವೈಲ್ಡ್ ಆಂಗಲ್‌ ಲೆನ್ಸ್‌ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 2ಎಂಪಿಯ ಡೆಪ್ತ್‌ ಸೆನ್ಸಾರ್‌ನಲ್ಲಿದೆ. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ

ಬ್ಯಾಟರಿ

ವಿವೋ ವೈ15 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬಲವಾದ ಬ್ಯಾಟರಿಯನ್ನು ಒಳಗೊಂಡಿದ್ದು, ದೀರ್ಘಕಾಲದ ಬಾಳಿಕೆ ಒದಗಿಸಲಿದೆ. ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿಲ್ಲ ಆದರೆ ಅತ್ಯುತ್ತಮ ಬೆಂಬಲ ನೀಡುವ ಚಾರ್ಜರ್‌ ನೀಡಿದೆ. ಗೇಮಿಂಗ್‌ ಮತ್ತು ವಿಡಿಯೊ ವೀಕ್ಷಣೆಗೆ ಬ್ಯಾಟರಿ ಉತ್ತಮ ಎನಿಸಲಿದೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಫಿಂಗರ್‌ಪ್ರಿಂಟ್ ಸೆನ್ಸಾರ್‌ ಫೀಚರ್‌ ಅನ್ನು ಒಳಗೊಂಡಿರುವ ವಿವೋ ವೈ15 ಸ್ಮಾರ್ಟ್‌ಫೋನ್‌ ಇದರೊಂದಿಗೆ ಅತ್ಯುತ್ತಮ ಬ್ಲೂಟೂತ್‌ 5 ಕನೆಕ್ಟಿವಿಟಿ, ವೈಪೈ ಕನೆಕ್ಟಿಕಟ್, ಮೈಕ್ರೋ ಯುಎಸ್‌ಬಿ ಪೋರ್ಟ್‌ ಆಯ್ಕೆಗಳನ್ನು ಸಹ ಹೊಂದಿದೆ. ಇದರೊಂದಿಗೆ ಜಿಪಿಎಸ್‌ ಸೇವೆಯು ಲಭ್ಯವಿರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ ವೈ 15 ಸ್ಮಾರ್ಟ್‌ಫೋನ್‌ ಬೆಲೆಯು 13,990ರೂ.ಗಳು ಆಗಿದ್ದು, ಇ ಕಾಮರ್ಸ್ ತಾಣಗಳಾದ, ಅಮೆಜಾನ್, ಪೇಟಿಎಮ್, ಫ್ಲಿಪ್‌ಕಾರ್ಟ್, ವಿವೋ ಎ ಸ್ಟೋರ್‌ ಮತ್ತು ಅಧಿಕೃತ ವಿವೋ ರೀಟೈಲ್‌ ಮಳಿಗೆಗಳಲ್ಲಿ ಖರೀದಿಗೆ ದೊರೆಯಲಿದೆ.

Best Mobiles in India

English summary
Vivo Y15 with AI triple rear camera, 5000mAh battery launched in India for Rs 13,990.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+