Vivo: ವಿವೋದ ಈ ಬಜೆಟ್ ಬೆಲೆ ಫೋನ್‌ಗೆ 30% ರಿಯಾಯಿತಿ! 1 TB ವರೆಗೆ ಸ್ಟೋರೇಜ್ ವಿಸ್ತರಣೆ ಸೌಲಭ್ಯ
ಬಜೆಟ್ ಬೆಲೆ ವಿಭಾಗದಲ್ಲಿ ವಿವೋ ಫೋನ್‌ಗಳಿಗೆ (Vivo phone) ಭರ್ಜರಿ ಬೇಡಿಕೆ ಇದೆ. ಬಜೆಟ್ ಬೆಲೆಯಲ್ಲೇ ಹೆಚ್ಚಿನ ಫೀಚರ್ಸ್ ಆಯ್ಕೆ ನೀಡುವುದರಿಂದ ಅದರಲ್ಲೂ ಉತ್ತಮ ಕ್ಯಾಮೆರಾ ಫೀಚರ್ಸ್ ಇರುವುದರಿಂದ ಈ ಫೋನ್‌ಗಳನ್ನು ಗ್ರಾಹಕರು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಅದರಂತೆ ಈ ವಿವೋ ಫೋನ್‌ಗೆ ಇದೀಗ 30% ರಿಯಾಯಿತಿ ನೀಡಲಾಗಿದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ವಿವೋ Y15c ಸ್ಮಾರ್ಟ್‌ಫೋನ್‌ಗೆ (Vivo Y15c smartphone) ಭರ್ಜರಿ ಆಫರ್ ನೀಡಲಾಗಿದ್ದು, ಈ ಫೋನ್ ಖರೀದಿಯಲ್ಲಿ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಇದು 64 GB ಇಂಟರ್ ಸ್ಟೋರೇಜ್ ಆಯ್ಕೆ ಹೊಂದಿದ್ದು, ಬರೋಬ್ಬರಿ TB ವರೆಗೆ ಸ್ಟೋರೇಜ್ ವಿಸ್ತರಣೆ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರ ಇಲ್ಲಿದೆ ನೋಡಿ.

ವಿವೋ Y15c ಸ್ಮಾರ್ಟ್‌ಫೋನ್ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 14,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 10,390 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಮೊದಲೇ ತಿಳಿಸಿದಂತೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್ (Flipkart) 30% ರಿಯಾಯಿತಿ ಘೋಷಣೆ ಮಾಡಿದೆ. ಅದಾಗ್ಯೂ ನೀವು ಬ್ಯಾಂಕ್ ಆಫರ್ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಖರೀದಿ ಮಾಡಬಹುದು.
ಈ ಫೋನ್ ಖರೀದಿ ಸಮಯದಲ್ಲಿ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, ಈ ಫೋನ್ ಖರೀದಿ ಮಾಡಿ ನಂತರ ಎಸಿ ಏನಾದರೂ ಖರೀದಿ ಮಾಡಲು ಮುಂದಾದರೆ ಅದಕ್ಕೂ ಹೆಚ್ಚಿನ ಆಫರ್ ಅನ್ನು ನೀಡಲಾಗುತ್ತದೆ. ಜೊತೆಗೆ ಉತ್ತಮ ಇಎಮ್‌ಐ ಆಯ್ಕೆ ಇದ್ದು, ಇದರ ದರ 366ರೂ.ಗಳಿಂದ ಆರಂಭ ಆಗಲಿದೆ. ಹಾಗಿದ್ರೆ, ಈ ಫೋನ್‌ನ ಫೀಚರ್ಸ್ ಕಡೆ ಕಣ್ಣಾಯಿಸೋಣ ಬನ್ನಿ.

ವಿವೋ Y15c ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.51 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥಗಯ ಪಡೆದಿದೆ. ಇದರೊಂದಿಗೆ 270 ppi ಸಾಂದ್ರತೆ ಹಾಗೂ 83.0% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಉತ್ತಮ ವೀಕ್ಷಣೆ ಅನುಭವವನ್ನು ಪಡೆಯಬಹುದಾಗಿದೆ.
ವಿವೋ Y15c ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ MT6765 ಹಿಲಿಯೋ P35 (12nm) ಪ್ರೊಸೆಸರ್ ಬಲ ಪಡೆದಿದ್ದು, ಆಂಡ್ರಾಯ್ಡ್ 11 ಅನ್ನು ರನ್ ಮಾಡಲಿದೆ. ಇದರೊಂದಿಗೆ ಪವರ್ ವಿಆರ್ GE8320 ಗ್ರಾಫಿಕ್ಸ್ ಕಾರ್ಡ್ ಬಲ ಪಡೆದಿದ್ದು, 64 GB ಇಂಟರ್ ಸ್ಟೋರೇಜ್ ಆಯ್ಕೆ ಹಾಗೂ 3 GB RAM ಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ.
ವಿವೋ Y15c ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಆಯ್ಕೆ ಹೊಂದಿದ್ದು, ಇದು ಎಲ್ಇಡಿ ಫ್ಲ್ಯಾಶ್, ಪನೋರಮಾ ಫೀಚರ್ಸ್ ಬೆಂಬಲ ಪಡೆದಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ನೋಡಬಹುದಾಗಿದ್ದು, 1080p@30fps ಸಾಮರ್ಥ್ಯದ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ.

ವಿವೋ Y15c ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 10W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ 5W ರಿವರ್ಸ್ ವೈರ್ಡ್ ಚಾರ್ಜರ್ ಸೌಲಭ್ಯ ಸಹ ಇದೆ. ಉಳಿದಂತೆ 3.5 ಎಂಎಂ ಜ್ಯಾಕ್, ವೈ-ಫೈ 802.11 b/g/n, ವೈಫೈ- ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದಿದೆ.


Click it and Unblock the Notifications








