Home
ಸುದ್ದಿಜಾಲ

ವಿವೋ Y15s ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಈಗ ಭರ್ಜರಿ ಸಿಹಿಸುದ್ದಿ!

ವಿವೋ ಮೊಬೈಲ್‌ ಸಂಸ್ಥೆಯು ಎರಡು ತಿಂಗಳ ಹಿಂದೆ ಭಾರತದಲ್ಲಿ ಲಾಮಚ್ ಮಾಡಿದ್ದ ವಿವೋ Y15s ಸ್ಮಾರ್ಟ್‌ಫೋನ್ ಹಲವು ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಬಜೆಟ್‌ ಪ್ರೈಸ್‌ ಟ್ಯಾಗ್‌ ಹೊಂದಿರುವ ವಿವೋ Y15s ಸ್ಮಾರ್ಟ್‌ಫೋನ್ ಇದೀಗ ದಿಢೀರ್ ಬೆಲೆ ಇಳಿಕೆ ಕಂಡಿದ್ದು, ಮತ್ತಷ್ಟು ಅಗ್ಗದ ಬೆಲೆಗೆ ಲಭ್ಯ. ಇನ್ನು ಈ ಸ್ಮಾರ್ಟ್‌ಫೋನ್ 3GB + 32 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್

ಭಾರತದಲ್ಲಿ ವಿವೋ Y15s ಸ್ಮಾರ್ಟ್‌ಫೋನ್ ಬೆಲೆಯು 10,990ರೂ ಆಗಿದ್ದು, ಇದೀಗ 500ರೂ.ಗಳ ಇಳಿಕೆ ಆಗಿದೆ. ಈ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಗ್ರಾಹಕರು ಭಾರತದಲ್ಲಿ ವೇವ್ ಗ್ರೀನ್ ಮತ್ತು ಮಿಸ್ಟಿಕ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು. ಇನ್ನುಳಿದಂತೆ ಈ ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ವಿವೋ Y15s ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ HD + IPS ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು 83.0% ಸ್ಕ್ರೀನ್-ಟು ಬಾಡಿ ಅನುಪಾತವನ್ನು ಒಳಗೊಂಡಿದೆ. ಜೊತೆಗೆ 270 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಪಡೆದುಕೊಂಡಿದೆ.

ಪ್ರೊಸೆಸರ್‌ ಪವರ್ ಹೇಗಿದೆ?

ಪ್ರೊಸೆಸರ್‌ ಪವರ್ ಹೇಗಿದೆ?

ವಿವೋ Y15s ಸ್ಮಾರ್ಟ್‌ಫೋನ್‌ 3GB RAM ಜೊತೆಗೆ ಆಕ್ಟಾ ಕೋರ್ ಮೀಡಿಯಾಟೆಕ್‌ ಹಿಲಿಯೋ P35 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 11 (Go ಆವೃತ್ತಿ) ನಲ್ಲಿ ಫನ್‌ಟಚ್‌ OS 11.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 3GB RAM + 32GB ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಕೂಡ ನೀಡಲಾಗಿದೆ.

ಕ್ಯಾಮೆರಾ ಸೆನ್ಸಾರ್ ವಿಶೇಷ

ಕ್ಯಾಮೆರಾ ಸೆನ್ಸಾರ್ ವಿಶೇಷ

ವಿವೋ Y15s ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಪ್ರೈಮೆರಿ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ f/2.2 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ. ಇದು f/2.0 ಲೆನ್ಸ್‌ನೊಂದಿಗೆ ಬರುತ್ತದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5.0, GPS/ A-GPS, FM ರೇಡಿಯೋ, ಮೈಕ್ರೋ-USB ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿರುತ್ತದೆ. ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಬರುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ವಿವೋ Y15s ಸ್ಮಾರ್ಟ್‌ಫೋನ್‌ ಬೆಲೆ 3GB RAM + 32GB ಸ್ಟೋರೇಜ್ ರೂಪಾಂತರಕ್ಕಾಗಿ 10,990ರೂ ಆಗಿದೆ. ಆದ್ರೆ ಇದೀಗ 500ರೂ. ಇಳಿಕೆ ಕಂಡಿದೆ. ಇನ್ನು ಈ ಫೋನ್ ಮಿಸ್ಟಿಕ್ ಬ್ಲೂ ಮತ್ತು ವೇವ್ ಗ್ರೀನ್ ಬಣ್ಣಗಳಲ್ಲಿ ಬರುತ್ತದೆ.

Best Mobiles in India

English summary
Vivo Y15s Price Cut In India: Check New Price Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+