ವಿವೋದ ಈ ಫೋನ್‌ಗೆ 31% ರಿಯಾಯಿತಿ; ಆಫರ್ ಬೆಲೆ ಎಷ್ಟು ಗೊತ್ತಾ!?
ಸ್ಮಾರ್ಟ್‌ಫೋನ್‌ಗಳ (smartphone) ವಿಭಾಗದಲ್ಲಿ ವಿವೋ (Vivo) ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಅದರಂತೆ ಸಾಕಷ್ಟು ಸುಧಾರಿತ ಫೀಚರ್ಸ್ ಆಯ್ಕೆ ಇರುವ ವಿವೋ ಫೋನ್‌ಗಳು ಕೈಗೆಟಕುವ ದರದಲ್ಲಿ ಲಭ್ಯ ಇದ್ದು, ಬಳಕೆದಾರರಿಗೆ ವಿವಿಧ ಪ್ರಯೋಜನ ನೀಡುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ವಿವೋದ ಈ ಫೋನ್‌ಗೆ ಭಾರೀ ರಿಯಾಯಿತಿ ನೀಡಲಾಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ಅಗ್ಗದ ಬೆಲೆಯಿಂದ ದುಬಾರಿ ಬೆಲೆಯಲ್ಲಿ ಲಭ್ಯ ಇವೆ. ಆದರೆ ಕೆಲವರಿಗೆ ಹೆಚ್ಚಿನ ಬೆಲೆ ಕೊಟ್ಟು ಸ್ಮಾರ್ಟ್‌ಫೋನ್ ಖರೀದಿ ಮಾಡಲು ಸಾಧ್ಯ ಆಗಿರುವುದಿಲ್ಲ ಅಂತಹವರು ವಿಶೇಷ ಸೇಲ್‌ಗಳ ಮೂಲಕ ಹೊಸ ಫೋನ್ ಖರೀದಿ ಮಾಡಲು ಮುಂದಾಗುತ್ತಾರೆ. ಅದರಂತೆ ಈಗ ವಿವೋ Y16 (Vivo Y16) ಸ್ಮಾರ್ಟ್‌ಫೋನ್‌ಗೆ 31% ಡಿಸ್ಕೌಂಟ್ ನೀಡಲಾಗಿದೆ. ಈ ಮೂಲಕ ಗ್ರಾಹಕರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಫೋನ್‌ನ ಆಫರ್ ಬೆಲೆ ಎಷ್ಟು?, ಇದರ ಫೀಚರ್ಸ್ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ವಿವೋ Y16 ಗೆ ಆಫರ್: ವಿವೋದ ಈ ಫೋನ್ ಅನ್ನು ನೀವು ಈಗ ಕೇವಲ 10,995 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ 31% ರಿಯಾಯಿತಿ ಘೋಷಣೆ ಮಾಡಲಾಗಿದೆ. ಇದರ ಸಾಮಾನ್ಯ ದರ 15,999ರೂ.ಗಳಾಗಿದೆ. ಇದನ್ನು ನೀವು ಪ್ರಮುಖ ಇ ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ ಮೂಲಕ ಕೊಂಡುಕೊಳ್ಳಬಹುದಾಗಿದೆ. ಈ ಮೂಲಕ ನೀವು ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ.
ಇಷ್ಟೇ ಅಲ್ಲದೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೇಲೆ 5% ಕ್ಯಾಶ್‌ಬ್ಯಾಕ್ ಸಹ ಲಭ್ಯ ಇದೆ. ಜೊತೆಗೆ ಉಚಿತ ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆ ಸಹ ಲಭ್ಯ ಇದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ಫೇ ಲೇಟರ್ ಸೌಲಭ್ಯದ ಮೂಲಕ ಖರೀದಿ ಮಾಡಿದ್ರೆ ಉಚಿತ ಟೈಮ್ಸ್ ಪ್ರೈಮ್ ಪ್ರಯೋಜನವನ್ನೂ ಸಹ ಪಡೆದುಕೊಳ್ಳಬಹುದಾಗಿದೆ. ಉಳಿದಂತೆ ನೋ ಕಾಸ್ಟ್ ಇಎಮ್‌ಐ ಆಯ್ಕೆ ಸಹ ಇದ್ದು, ತಿಂಗಳಿಗೆ ನೀವು 3,664 ರೂ.ಗಳನ್ನು ಪಾವತಿ ಮಾಡಬಹುದು. ಇದರೊಂದಿಗೆ ಇನ್ನೂ ಅನೇಕ ಪ್ರಯೋಜನಗಳಿವೆ.
ವಿವೋ Y16 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.51 ಇಂಚಿನ ಐಪಿಎಸ್ ಡಿಸ್‌ಪ್ಲೇ ಹೊಂದಿದ್ದು, 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ 270ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರುವ ಈ ಡಿಸ್‌ಪ್ಲೇ ವಾಟರ್‌ಡ್ರಾಪ್ ನಾಚ್ ಶೈಲಿ ಪಡೆದುಕೊಂಡಿದೆ.
ವಿವೋ Y16 ಪ್ರೊಸೆಸರ್ ವಿವರ: ಈ ಫೋನ್ ಮೀಡಿಯಾಟೆಕ್ ಹಿಲಿಯೋ P35 ಪ್ರೊಸೆಸರ್ ಬಲ ಹೊಂದಿದ್ದು, ಇದು ಆಕ್ಟಾ-ಕೋರ್ ಚಿಪ್‌ಸೆಟ್ ಆಗಿದೆ. ಅಂದರೆ ಎರಡು ಕಾರ್ಟೆಕ್ಸ್ A53 ಮಾಡ್ಯೂಲ್‌ಗಳು ಮತ್ತು 4GB RAM ಆಯ್ಕೆ ಮೂಲಕ ಈ ಫೋನ್ ಉತ್ತಮ ಕಾರ್ಯಕ್ಷಮತೆ ಹೊಂದಿದೆ. ಉಳಿದಂತೆ ವೇಗವಾದ ಕಾರ್ಯಕ್ಷಮತೆಗಾಗಿ ಪವರ್ ವಿಆರ್ GE8320 GPU ಬಲ ಪಡೆದುಕೊಂಡಿದೆ.
ವಿವೋ Y16 ಕ್ಯಾಮೆರಾ ರಚನೆ: ಉಳಿದಂತೆ ಈ ಸ್ಮಾರ್ಟ್‌ಫೋನ್ ರಿಯರ್ ಡ್ಯುಯಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್-ಸೆನ್ಸಿಂಗ್ ಕ್ಯಾಮೆರಾ ಆಯ್ಕೆ ಇದರಲ್ಲಿದ್ದು, ಇದು ಯಾವುದೇ ಬೆಳಕಿನ ಸ್ಥಿತಿಯಲ್ಲಿ ಅತ್ಯುತ್ತಮ ಸ್ಪಷ್ಟತೆಯೊಂದಿಗೆ ಹೆಚ್‌ಡಿಆರ್ ಛಾಯಾಚಿತ್ರಗಳನ್ನು ಶೂಟ್ ಮಾಡುತ್ತದೆ. ಜೊತೆಗೆ ಅದ್ಭುತವಾದ ಸೆಲ್ಫಿಗಳನ್ನು ಸೆರೆಹಿಡಿಯಲು 5 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ವಿವೋ Y16 ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಈ ಮೂಲಕ ಬಳಕೆದಾರರಿಗೆ ಅತ್ಯುತ್ತಮವಾದ ಬ್ಯಾಟರಿ ಬ್ಯಾಕಪ್ ಲಭ್ಯ ಇದೆ. ಉಳಿದಂತೆ 4G, 3G, 2G ಬೆಂಬಲಿತ ನೆಟ್‌ವರ್ಕ್, ಬ್ಲೂಟೂತ್ ಆವೃತ್ತಿv5.0, ವೈ-ಫೈ ಆವೃತ್ತಿ 2.4 GHz, 5 GHz ಅನ್ನು ಬೆಂಬಲಿಸುತ್ತದೆ. ಈ ಮೂಲಕ ಬಜೆಟ್ ಬೆಲೆಯಲ್ಲಿ ಬಳಕೆದಾರರು ಉತ್ತಮವಾದ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








