Home
ಸುದ್ದಿಜಾಲ

ವಿವೋದ ಈ ಅಗ್ಗದ ಫೋನಿಗೆ ಇರುವ ಡಿಸ್ಕೌಂಟ್ ತಿಳಿದ್ರೆ, OMG ಅಂತೀರಾ!

ವಿವೋ ಮೊಬೈಲ್‌ ಸಂಸ್ಥೆಯ ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಜನರ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ಅಗ್ಗದ ಬೆಲೆಯ ರೇಂಜ್‌ನಲ್ಲಿ ಕಾಣಿಸಿಕೊಂಡಿರುವ ವಿವೋ Y17s ಮೊಬೈಲ್‌ ಸಹ ಆಕರ್ಷಕ ಎನಿಸಿದೆ. ಸದ್ಯ ಈ ಫೋನ್‌ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ವಾವ್‌ ಎನಿಸುವ ರಿಯಾಯಿತಿ ಪಡೆದುಕೊಂಡಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್‌ನಲ್ಲಿ ವಿವೋ Y17s ಮೊಬೈಲ್‌ ಶೇ. 34% ರಷ್ಟು ಆಕರ್ಷಕ ಡಿಸ್ಕೌಂಟ್‌ ಹೊಂದಿದೆ. ಈ ಫೋನಿನ ಆರಂಭಿಕ 4GB + 64GB ವೇರಿಯಂಟ್‌ ಬೆಲೆ 15,999ರೂ. ಇದ್ದು, ಸದ್ಯ 10,499ರೂ. ಗಳ ರಿಯಾಯಿತಿ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ವಿವೋದ ಈ ಅಗ್ಗದ ಫೋನಿಗೆ ಇರುವ ಡಿಸ್ಕೌಂಟ್ ತಿಳಿದ್ರೆ, OMG ಅಂತೀರಾ!

ಹಾಗೆಯೇ ಈ ಫೋನ್‌ ಇದು ಮೀಡಿಯಾ ಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಹಿಂಬದಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗಾದರೇ ವಿವೋ Y17s ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ Y17s ಮೊಬೈಲ್‌ 6.56 ಇಂಚಿನ IPS LCD ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 60Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿದ್ದು, 700 ನಿಟ್ಸ್‌ವರೆಗೆ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒದಗಿಸಲಿದೆ. ಇದಲ್ಲದೆ ಸೆಲ್ಫಿ ಕ್ಯಾಮೆರಾಗಾಗಿ ವಾಟರ್‌ ಡ್ರಾಪ್‌ ನಾಚ್‌ ವಿನ್ಯಾಸವನ್ನು ಪಡೆದಿದೆ.

ವಿವೋದ ಈ ಅಗ್ಗದ ಫೋನಿಗೆ ಇರುವ ಡಿಸ್ಕೌಂಟ್ ತಿಳಿದ್ರೆ, OMG ಅಂತೀರಾ!

ವಿವೋ Y17s ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 13 ಆಧಾರಿತ Funtouch OS 13 ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 4GB RAM + 64GB ಮತ್ತು 4GB RAM + 128GB ಆಂತರೀಖ ಸ್ಟೋರೇಜ್‌ ಸಾಮರ್ಥ್ಯದ ಎರಡೂ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಒದಗಿಸಲಾಗಿದೆ.

ವಿವೋ ಸಂಸ್ಥೆಯ ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಗಿದೆ. ರಿಯರ್‌ ಕ್ಯಾಮೆರಾಗಳ ಮೂಲಕ 1080p 30fps ನಲ್ಲಿ ವೀಡಿಯೊಗಳನ್ನು ಸೆರೆ ಹಿಡಿಯಬಹುದು. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ವಿವೋದ ಈ ಅಗ್ಗದ ಫೋನಿಗೆ ಇರುವ ಡಿಸ್ಕೌಂಟ್ ತಿಳಿದ್ರೆ, OMG ಅಂತೀರಾ!

ವಿವೋ Y17s ಮೊಬೈಲ್‌ 5000mAh ಸಾಮರ್ಥ್ಯವನ್ನು ಪಡೆದಿದ್ದು, ಇದು 15W ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೇ ಇದು ಸಕ್ರಿಯಗೊಳಿಸಿದ USB ಟೈಪ್-C ಪೋರ್ಟ್ ಮೂಲಕ ರಿವರ್ಸ್-ವೈರ್ಡ್ ಚಾರ್ಜಿಂಗ್ ಅನ್ನು ಸಹ ಸಪೋರ್ಟ ಮಾಡುತ್ತದೆ. ಈ ಫೋನ್ AI-ಚಾಲಿತ ಬ್ಯಾಟರಿ ಆಪ್ಟಿಮೈಜರ್ ಅನ್ನು ಸಹ ಪಡೆದಿದ್ದು, ಇದು ಇಡೀ ರಾತ್ರಿ ಪ್ಲಗ್ ಇನ್ ಮಾಡಿದಾಗ ಫೋನ್ ಹೆಚ್ಚು ಚಾರ್ಜ್ ಆಗುವುದನ್ನು ತಡೆಯುತ್ತದೆ.

ಅಲ್ಲದೇ ವಿವೋ Y17s ಮೊಬೈಲ್‌ 4GB + 64GB ವೇರಿಯಂಟ್‌ ಹಾಗೂ 4GB + 128GB ವೇರಿಯಂಟ್‌ ಮಾದರಿಗಳನ್ನು ಪಡೆದಿದೆ. ಅಲ್ಲದೇ ಇದು ಡಿವೈಸ್‌ ಗ್ಲಿಟರ್ ಪರ್ಪಲ್ ಮತ್ತು ಫಾರೆಸ್ಟ್ ಗ್ರೀನ್ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಗ್ರಾಹಕರು ಅಮೆಜಾನ್‌ ತಾಣದ ಮೂಲಕ ಖರೀದಿ ಮಾಡಬಹುದು.

Best Mobiles in India

English summary
vivo Y17s received awesome price drop on amazon online. offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+