Home
ಸುದ್ದಿಜಾಲ

ಭಾರತದಲ್ಲಿ ವಿವೋ Y18 ಸ್ಮಾರ್ಟ್‌ಫೋನ್‌ ಲಾಂಚ್; ಅಗ್ಗದ ಬೆಲೆ, ಸ್ಟೈಲಿಶ್‌ ಲುಕ್‌!

ವಿವೋ ಮೊಬೈಲ್‌ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ತನ್ನ Y ಸರಣಿಯಲ್ಲಿ ಹೊಸದೊಂದು ಫೋನ್‌ ಅನ್ನು ಬಿಡುಗಡೆ ಮಾಡಿದೆ. ಅದುವೇ ವಿವೋ Y18 ಫೋನ್‌ ಆಗಿದೆ. ಇದು ಇತ್ತೀಚಿನ ವಿವೋ Y18e ಫೋನಿನ ಅಪ್‌ಡೇಟ್‌ ಆವೃತ್ತಿ ಆಗಿದೆ. ಈ ಫೋನ್‌ ಅಗ್ಗದ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಇದರ ಜೊತೆಗೆ ಮೀಡಿಯಾ ಟೆಕ್ ಹಿಲಿಯೊ G85 ಪ್ರೊಸೆಸರ್‌ ಪಡೆದಿದೆ.

ಹೌದು, ವಿವೋ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ವಿವೋ Y18 ಮೊಬೈಲ್‌ ಅನ್ನು ಲಾಂಚ್ ಮಾಡಿದೆ. ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದರ ಜೊತೆಗೆ 50 ಮೆಗಾ ಪಿಕ್ಸಲ್‌ನ ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ.

ಭಾರತದಲ್ಲಿ ವಿವೋ Y18 ಸ್ಮಾರ್ಟ್‌ಫೋನ್‌ ಲಾಂಚ್; ಅಗ್ಗದ ಬೆಲೆ, ಸ್ಟೈಲಿಶ್‌ ಲುಕ್‌!

ಹಾಗೆಯೇ ಈ ಫೋನ್‌ ಇದು IP54 ರೇಟಿಂಗ್‌ ಸೌಲಭ್ಯ ಪಡೆದಿದ್ದು, ನೀರು ಮತ್ತು ಧೂಳು-ನಿರೋಧಕವಾಗಿದೆ. ಅಲ್ಲದೇ ಇದರ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಆಯ್ಕೆಯನ್ನು ಒಳಗೊಂಡಿದೆ. ಇದರೊಂದಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಸಹ ಇದರಲ್ಲಿ ಕಾಣಬಹುದಾಗಿದೆ. ಹಾಗಾದರೇ ವಿವೋ Y18 ಫೋನ್‌ ಇತರೆ ಫೀಚರ್ಸ್ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ Y18 ಫೋನ್‌ ಫೀಚರ್ಸ್‌

ವಿವೋ Y18 ಫೋನ್‌ 6.56 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು ಹೆಚ್‌ಡಿ+ ರೆಸಲ್ಯೂಶನ್ ನಲ್ಲಿ ಇದೆ. ಹಾಗೆಯೇ ಇದು 90Hz ರಿಫ್ರೆಶ್ ರೇಟ್‌ ಅನ್ನು ಸಪೋರ್ಟ್‌ ಮಾಡುತ್ತದೆ. ಇದರ ಜೊತೆಗೆ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆ 269ppi ಆಗಿದ್ದು, ಇದು 163.63 x 75.85 x 8.39mm ಸುತ್ತಳತೆ ಪಡೆದುಕೊಂಡಿದೆ.

ವಿವೋ Y18 ಫೋನ್‌ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಅನ್ನು ಆಧರಿಸಿ ಫನ್‌ಟಚ್‌ ಓಎಸ್‌ 14 ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದರ ಜೊತೆಗೆ 4 GB RAM ಮತ್ತು 64 GB eMMC 5.1 ಆಂತರೀಕ ಸ್ಟೋರೇಜ್‌ ಆಯ್ಕೆ ಅನ್ನು ಪಡೆದಿದ್ದು, ಇದರೊಂದಿಗೆ 4 GB ವರೆಗೆ ವರ್ಚುವಲ್ RAM ಸೌಲಭ್ಯ ಸಹ ಇದೆ. ಹಾಗೆಯೇ ಬಾಹ್ಯ ಮೆಮೊರಿ ವಿಸ್ತರಣೆಗಾಗಿ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಸಹ ನೀಡಲಾಗಿದೆ.

ವಿವೋ Y18 ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದ್ದು, ಇದರ ಸೆಕೆಂಡರಿ ಕ್ಯಾಮೆರಾವು VGA ಸೆನ್ಸಾರ್ ಕ್ಯಾಮೆರಾ ರಚನೆ ಇದೆ. ಹಾಗೆಯೇ ಈ ಫೋನಿನ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಿಂಭಾಗದಲ್ಲಿ ಕ್ಯಾಮೆರಾ ಜೊತೆಗೆ LED ಫ್ಲ್ಯಾಶ್‌ ಸೌಲಭ್ಯ ಕೂಡಾ ಒದಗಿಸಲಾಗಿದೆ.

ವಿವೋ Y18 ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿದ್ದು, ಯುಎಸ್‌ಬಿ ಟೈಪ್‌ 2.0 ಮೂಲಕ 15W ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಇದರೊಂದಿಗೆ ಕನೆಕ್ಟೆವಿಟಿ ಆಯ್ಕೆಯಲ್ಲಿ ಇದು ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ ಆವೃತ್ತಿ 5.0, ಜಿಪಿಎಸ್, ಎಫ್‌ಎಂ ರೇಡಿಯೋ, ಯುಎಸ್‌ಬಿ-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ IP54 ರೇಟೆಡ್ ಆಗಿದ್ದು ಇದರಿಂದ ಧೂಳು ನಿರೋಧಕ ಮತ್ತು ನೀರು ನಿರೋಧಕ ಸೌಲಭ್ಯ ಪಡೆದಿದೆ.

ವಿವೋ Y18 ಫೋನ್‌ ಬೆಲೆ ವಿವರ

4GB + 64GB ವೇರಿಯಂಟ್‌ ಬೆಲೆ 8,999ರೂ. ಆಗಿದೆ.
4GB + 128GB ವೇರಿಯಂಟ್‌ ಬೆಲೆ 9,999ರೂ. ಆಗಿದೆ.
ಗ್ರಾಹಕರು ವಿವೋ ಇ-ಸ್ಟೋರ್‌ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Vivo Y18 With MediaTek Helio G85 SoC Launched in India. Know Price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+